ರಮೇಶ್ ವಿರುದ್ಧ ಮತ್ತೆ ಸಿಡಿದೆದ್ದ ಸಿಡಿ ಲೇಡಿ

ಬೆಂಗಳೂರು.ಏ೪: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ತನಿಖೆ ಆಧಿಕಾರಿ ವಿರುದ್ಧ ಸಿಡಿ ಸಂತ್ರಸ್ತ ಯುವತಿ ಮತ್ತೆ ಸಿಡಿದೆದ್ದಿದ್ದಾರೆ. ತನ್ನನ್ನು ಮಾತ್ರ ದಿನವೂ ವಿಚಾರಣೆ ಮಾಡಿ, ಆರೋಪಿ ರಮೇಶ್ ಜಾರಕಿಹೊಳಿಯವರನ್ನು ವಿಚಾರಣೆ ಮಾಡಲಾಗುತ್ತಿರುವುದು ಎಷ್ಟು ಸರಿ. ಆರೋಪಿಯನ್ನು ಕೇವಲ ಮೂರು ಗಂಟೆ ಮಾತ್ರ ವಿಚಾರಣೆ ನಡೆಸಲಾಗಿದೆ. ನನ್ನ ಹೆಸರು ಉಲ್ಲೇಖವಾಗದಿದ್ದರೂ ಪಿಜಿಯಲ್ಲಿ ಪರಿಶೀಲನೆ ನಡೆಸಲಾಗಿದೆ. ಪಿಜಿಯಲ್ಲಿನ ಸಾಕ್ಷ್ಯ ನಾಶ ಮಾಡಿದ್ದಾರೆ. ಎಸ್‌ಐಟಿ ಅಧಿಕಾರಿಗಳು ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದಿದ್ದಾರೆ ಎಂಬುದಾಗಿ ಆರೋಪಿಸಿ ಬೆಂಗಳೂರು ನಗರ ಕಮೀಷನರ್ ಗೆ ಪತ್ರದಲ್ಲಿ ಕಿಡಿಕಾರಿದ್ದಾರೆ.
ಈ ಕುರಿತಂತೆ ಸಿಡಿ ಸಂತ್ರಸ್ತ ಯುವತಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ೩ ಪುಟಗಳ ಪತ್ರ ಬರೆದಿದ್ದು, ಆರೋಪಿಯನ್ನು ರಕ್ಷಿಸುವುದಕ್ಕಾಗಿ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಆರೋಪಿಯನ್ನು ಮೂರು ಗಂಟೆ ಮಾತ್ರವೇ ವಿಚಾರಣೆಗೆ ಒಳಪಡಿಸಲಾಗಿದೆ. ಮತ್ತೊಮ್ಮೆ ಕರೆದು ವಿಚಾರಣೆ ನಡೆಸದೇ ಕಳುಹಿಸಲಾಗಿದೆ. ಆರೋಪಿಯನ್ನು ಹೊರಗೆ ಓಡಾಡಲು ಬಿಡಲಾಗಿದೆ. ರಮೇಶ್ ಜಾರಕಿಹೊಳಿ ನನ್ನ ವಿರುದ್ಧ ಚಾರಿತ್ರಿಕ ವಧೆ ಮಾಡುವಂತ ಷಡ್ಯಂತ್ರ ನಡೆಸಲಾಗಿದೆ. ಇಡೀ ಪ್ರಕರಣ ನಿಷ್ಪಕ್ಷ ಪಾತವಾಗಿ ತನಿಖೆ ನಡೆಯುತ್ತಿಲ್ಲ. ಸರ್ಕಾರದ ಒತ್ತಡಕ್ಕೆ ಮಣಿದು ಎಸ್‌ಐಟಿ ತನಿಖೆ ನಡೆಸುತ್ತಿದೆ ಎಂಬುದಾಗಿ ಪತ್ರದಲ್ಲಿ ಆರೋಪಿಸಿದ್ದಾರೆ.
ಪತ್ರದಲ್ಲಿ ಏನಿದೆ.?
ವಿಷಯ : ನಾನು ನೀಡಿದ ಅತ್ಯಾಚಾರ ಪ್ರಕರಣದ ದೂರಿನ ವಿಚಾರಣೆಯಲ್ಲಿ ಆರೋಪಿ ರಕ್ಷಿಸುವ ಸಲುವಾಗಿ ನನ್ನ ವಿರುದ್ಧ ಷಡ್ಯಂತ್ರ ಮಾಡಿ ತನಿಖಾಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರುತ್ತಿರುವ ಬಗ್ಗೆ
ದಿನಾಂಕ ೨೬-೦೩-೨೦೨೧ರಂದು ನನ್ನ ವಕೀಲರಾದ ಜಗದೀಶ್ ಕೆಎನ್ ಅವರ ಮುಖಾಂತರ ತಮಗೆ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ಮಾಡಿ, ಅತ್ಯಾಚಾರ ನಡೆಸಿ ಜೀವ ಬೆದರಿಕೆ ಹಾಕಿದ ಸಂಬಂಧ ದೂರನ್ನು ಸಲ್ಲಿಸಿರುತ್ತೇನೆ.
ಈ ದೂರನ್ನು ತಾವು ಸ್ವೀಕರಿಸಿ ನನಗೆ ನ್ಯಾಯ ಕೊಡಿಸುವ ಸಲುವಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಮೊಕ್ಕದ್ದಮ್ಮೆ ಸಂಖ್ಯೆ ೩೦/೨೦೨೧ರಲ್ಲಿ ಐಪಿಸಿ ೩೫೪(ಓ), ೫೦೬, ೩೭೬(ಸಿ), ೪೧೭ ಹಾಗೂ ಐಟಿ ಕಾಯ್ದೆ ೬೭(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ನಂತ್ರ ಪೊಲೀಸರು ವಿಚಾರಣೆಗಾಗಿ ಹಾಜರಾಗಿ ಮಾಹಿತಿಯನ್ನು ನೀಡುವಂತೆ ಮತ್ತು ಭದ್ರತೆ ಕಲ್ಪಿಸಲು ಮಾಹಿತಿ ಒದಗಿಸುವಂತೆ ಪೋಲೀಸ್ ನೋಟಿಸ್ ನೀಡಲಾಗಿರುತ್ತದೆ.
ನಂತರ ನಾನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಲಾಗಿ, ನನ್ನ ೧೬೪ ಹೇಳಿಕೆ ದಾಖಲಿಸಲು ಸೂಕ್ತ ಭದ್ರತೆಯೊಂದಿಗೆ ನ್ಯಾಯಾಲಯದಲ್ಲಿ ಅವಕಾಶ ಮಾಡಿಕೊಟ್ಟ ಕಾರಣ ದಿನಾಂಕ ೩೦-೦೩-೨೦೨೧ರಂದು ನಾನು ನನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾದೆನು. ಹಾಜರ ಆದ ದಿನ ಎಸ್‌ಐಟಿ ಮುಖ್ಯಸ್ಥರಾದ ಸೌಮೇಂದ್ರ ಮುಖರ್ಜಿ ಅವರು ನನ್ನನ್ನು ವಿಚಾರಣೆಗಾಗಿ ಆಡುಗೋಡಿಯ ಟೆಕ್ನಿಕಲ್ ವಿಭಾಗಕ್ಕೆ ಭದ್ರತೆಯೊಂದಿಗೆ ಕರೆದೊಯ್ದರು.