ರಮೇಶ್ ಜಾರಕಿಹೊಳಿ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ

ಬಳ್ಳಾರಿ ಮಾ 30 : ಸಿಡಿ ಲೇಡಿ ಲೈಂಗಿಕ ಹಗರಣದಲ್ಲಿ ಇದ್ದಾರೆ ಎನ್ನಲಾಗುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ದ ಇಂದು ನಗರದ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಯಿತು. ಈ ವೇಳೆ
ಜಾರಕಿಹೊಳಿ ಪೋಟೋಗೆ ಚೆಪ್ಪಲಿಯಿಂದ ಹೊಡೆದು ಮಹಿಳೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಸೇರಿದ ಬೆರಳೆಣಿಕೆಯಷ್ಟು ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ರಮೇಶ್ ಜಾರಕಿಹೊಳಿ ವಿರುದ್ದ ಘೋಷಣೆ ಕೂಗಿದರು. ಅವರನ್ನು ಬಂಧಿಸುವಂತೆ ಆಗ್ರಹಿಸಲಾಯಿತು.
ಪ್ರಕರಣದಲ್ಲಿ ರಮೇಶ್ ನೇರವಾಗಿ ಪಾಲ್ಗೊಂಡಿದ್ದಾರೆ. ಆದರೆ ರಾಜ್ಯ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಯೂತ್ ಕಾಂಗ್ರೆಸ್ ನ ನಗರ ಅಧ್ಯಕ್ಷ ಸಮೀರ್, ವೆಂಕಟೇಶ್ ಹೆಗಡೆ. ವಿಕ್ಕಿ, ಪ್ರವಲ್ಲಿಕಾ, ಪ್ರೀತಿ, ಬಾಬಾ, ಗೌತಮ, ತೇಜ, ಭಾಷ.. ನೂರ್ ಅಹ್ಮದ್, ಉಮೇಶ್, ಫಿಲಿಪ್ ಇನ್ನು ಮುಂತಾದವರು ಪಾಲ್ಗೊಂಡಿದ್ದರು.