ರಮೇಶ್ ಜಾರಕಿಹೊಳಿ ಬೆಂಬಲಿಗರ ದೌರ್ಜನ್ಯ ; ಖಂಡನೆ

ಚನ್ನಗಿರಿ.ಮಾ.೨೯; ಸಿಡಿ ಪ್ರಕರಣದಲ್ಲಿ ಸಿಲುಕಿರುವ ರಮೇಶ್ ಜಾರಕಿಹೊಳಿ ಅವರನ್ನ ಮೊದಲು ಬಂಧಿಸಬೇಕೆಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ಆಗ್ರಹಿಸಿದ್ದಾರೆ. ರಾಸಲೀಲೆ ಪ್ರಕರಣದಲ್ಲಿ ಬಿಜೆಪಿ ಸರ್ಕಾರ ರಮೇಶ್ ಜಾರಕಿ ಹೊಳಿಯನ್ನ ರಕ್ಷಣೆ ಮಾಡಲು ಮುಂದಾಗುತ್ತಿದೆ. ಈ ಬಗ್ಗೆ ಮಹಿಳೆ ದೂರು ಕೊಟ್ಟರು ಸರ್ಕಾರ ಮಾತ್ರ ಅವರನ್ನ ಬಂಧಿಸಿ ವಿಚಾರಣೆ ಮಾಡದೇ ರಕ್ಷಣೆ ಮಾಡಲು ಮುಂದಾಗುತ್ತಿದೆ ಎಂದರು. ಪ್ರಕರಣ ಸಂಬಂಧ ರಮೇಶ್ ಜಾಕಿ ಹೊಳಿ ರಾಜಾರೋಷವಾಗಿ ತಿರುಗಾಡುತ್ತಿದ್ದು ಮಾದ್ಯಮಗಳ ಮುಂದೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಕೂಡಲೇ ಇವರನ್ನ ಬಂಧಿಸಿ ಜೈಲಿಗೆ ಕಳುಯಿಸಬೇಕೆಂದು ಒತ್ತಾಯಿಸಿದ್ದಾರೆ. ಈ ನಡುವೆ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಹೆಸರನ್ನ ಪ್ರಸ್ತಾಪಿಸುವ ಮೂಲಕ ರಾಜಕೀಯ ಷಡ್ಯಂತ್ರ ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ರಮೇಶ್ ಜಾಕಿಹೊಳಿ ಬೆಂಬಲಿಗರು ಡಿಕೆ ಶಿವಕುಮಾರ್ ಗನ್ ಮ್ಯಾನ್ ಮೆಲ್ಲೆ ಹಲ್ಲೆಗೆ ಯತ್ನಿಸಿರುವುದು ಹಾಗೂ ಪ್ರತಿಭಟನೆ ಮಾಡಿರುವುದು ಖಂಡನೀಯ. ಸರ್ಕಾರದ ಬೆಂಬಲದಿಂದ ಈ ರೀತಿ ದೌರ್ಜನ್ಯ ನಡೆಸಲಾಗುತ್ತಿದೆ, ಪ್ರಜಾಪ್ರಭುತ್ವದಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳದೇ ಬಿಜೆಪಿ ಸರ್ಕಾರ ಕೈ ಕಟ್ಟಿ ಕುಳಿತಿರುವುದು ವಿಪರ್ಯಾಸ ಸಂಗತಿ ಎಂದರು. ರಮೇಶ್ ಜಾರಕಿಹೊಳಿ ವಿರುದ್ಧ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳದೇ ಇರುವುದು ಯಾವ ನ್ಯಾಯ ಎಂದು ಬಸವರಾಜು ವಿ ಶಿವಗಂಗಾ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಇದೇ ರೀತಿ ಮೊಂಡುತನ ಪ್ರದರ್ಶನ ಮಾಡುತ್ತಾ ಕುಳಿತರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಬಸವರಾಜು ವಿ ಶಿವಗಂಗಾ ಎಚ್ಚರಿಕೆ ನೀಡಿದ್ದಾರೆ.