ರಮೇಶ್ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷ

ಬೆಂಗಳೂರು.ಜು೧೧: ಆರ್ ರಮೇಶ್ ಪ್ರತಿಭೆ, ಸಾಧನೆಗಳನ್ನು, ಪರಿಗಣಿಸಿದ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ನಾಗರ ನವಿಲೆ ಅವರು, ‘ಚಲನಚಿತ್ರ ನೃತ್ಯ ಕಲಾವಿದರ ಹಿತರಕ್ಷಣಾ’ ಸಮಿತಿ ಅಧ್ಯಕ್ಷರನ್ನಾಗಿ ಆರ್. ರಮೇಶ್ ಅವರನ್ನು ನೇಮಕ ಮಾಡಿರುತ್ತಾರೆ.
ಕಳೆದ ಹಲವು ಸುಮಾರು ವರ್ಷಗಳಿಂದ ನೃತ್ಯ ಕಲಾವಿರಾಗಿ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಖ್ಯಾತಿ ಪಡೆದಿರುತ್ತಾರೆ.
ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ವಿಜೇತರಾಗಿರು ತ್ತಾರೆ. ತದನಂತರ ಹಲವಾರು ಚಿತ್ರಗಳಿಗೆ ನೃತ್ಯ ತರಬೇತಿ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್‌ರವರು,ಆದೇಶ ಪತ್ರ ನೀಡಿ, ಮಾತನಾಡಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿರುವ ಸಂಸ್ಥೆಯಾಗಿದ್ದು, ಈ ದಿನ ಕಲಾವಿದರ ಹಿತರಕ್ಷಣಾ ದೃಷ್ಟಿಯಿಂದ ಆರ್ ರಮೇಶ್ ರವರನ್ನು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ‘ಚಲನಚಿತ್ರ ನೃತ್ಯ ಕಲಾವಿದರ ಹಿತರಕ್ಷಣಾ’ ಸಮಿತಿಯ ಅಧ್ಯಕ್ಷರನ್ನಾಗಿ ಆರ್ ರಮೇಶ್ ರವರನ್ನು ನೇಮಕ ಮಾಡಿರುವುದು ಶ್ಲಾಘನೀಯ. ರಮೇಶ್ ರವರು ನೃತ್ಯ ಕಲಾವಿದರಿಗೆ ಉತ್ತೇಜನ ನೀಡುತ್ತಾ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿ ಎಂದು ತಿಳಿಸಿದರು.
ಕೆಪಿಸಿಸಿ ಯುವಘಟಕದ ಅಧ್ಯಕ್ಷ ಗುರುರಾಜ್, ಸವಿತಾ, ದೀಪಕ್, ಅನುರಾಧ, ಮನೋಜ್, ವಿವೇಕ್ ಮುಂತಾದವರು ಇದ್ದರು.