ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರು

ಬೆಳಗಾವಿ, ಸೆ.7-ಸಚಿವ ಉಮೇಶ್ ಕತ್ತಿ ನಿಧನದಿಂದಾಗಿ ಆಘಾತಕ್ಕೊಳಗಾಗಿರುವ ಸಹೋದರ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ತೀವ್ರ ಅಸ್ವಸ್ಥಗೊಂಡಿರುವ ರಮೇಶ ಕತ್ತಿ ಅವರನ್ನು ಕೊಠಡಿಯೊಂದರಲ್ಲಿ ಇಸಿಜಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಉಮೇಶ ಕತ್ತಿ ನಿಧನ ಬಳಿಕ ರಮೇಶ ಕತ್ತಿ ನಿನ್ನೆ ಬೆಂಗಳೂರಿಗೆ ತೆರಳಿದ್ದರು. ಬಳಿಕ ಇಂದು ಬೆಳಗ್ಗೆ ಅಣ್ಣನ ಪಾರ್ಥಿವ ಶರೀರದ ಜೊತೆ ಆಗಮಿಸಿದ್ದರು.‌ ಬೆಲ್ಲದ ಬಾಗೇವಾಡಿ ಗ್ರಾಮದ ವಿಶ್ವರಾಜ್ ಶುಗರ್ಸ್​ನಲ್ಲಿ ಅಂತಿಮ ದರ್ಶನದ ವೇಳೆ ರಮೇಶ್ ಕತ್ತಿ ಆರೋಗ್ಯದಲ್ಲಿ ಏರುಪೇರಾಗಿದೆ.
ಅಣ್ಣನ ಸಾವಿನ ಬಳಿಕ ನೊಂದಿರುವ ರಮೇಶ ಕತ್ತಿ, ನಿನ್ನೆಯಿಂದಲೂ ತೀವ್ರ ದುಃಖಿತರಾಗಿದ್ದಾರೆ.ರಮೇಶ ಕತ್ತಿ ಮಾಜಿ ಸಂಸದ ಹಾಗೂ ಹಾಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ.
ತೀವ್ರ ಹೃದಯಾಘಾತದಿಂದ ಉಮೇಶ್ ಕತ್ತಿ ನಿನ್ನೆ ರಾತ್ರಿ ನಿಧನರಾಗಿದ್ದರು.