ರಮೇಶ್ ಅರವಿಂದ್ ಪುತ್ರಿ ವಿವಾಹ:ಗಣ್ಯರು ಭಾಗಿ

ಬೆಂಗಳೂರು,ಡಿ.28- ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಅವರು ಇಂದು ಅಕ್ಷಯ್ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿ ತಮ್ಮ ಪುತ್ರಿ‌ ನಿಹಾರಿಕಾ ಮದುವೆಯನ್ನು ಕೆಲವೇ ಕೆಲವು ಜನ ಆಪ್ತರ ಸಮ್ಮುಖದಲ್ಲಿ ಎಂದು ನೆರವೇರಿಸಿದರು.

ಮದುವೆಯಲ್ಲಿ ಎರಡು ಕುಟಂಬಗಳ ಸದಸ್ಯರ ಸಮ್ಮುಖದಲ್ಲಿ ಕೋವಿಡ್ 19 ನಿಯಮಾನುಸಾರ ನಡೆಯಿತು.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಕೆಲವೇ ಕೆಲವು ಚಿತ್ರರಂಗದ ಗಣ್ಯರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಿಹಾರಿಕ ಹಾಗೂ ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈಗ ನವಜೀವನಕ್ಕೆ ಕಾಲಿಟ್ಟಿದ್ದಾರೆ

ಜನವರಿಯಲ್ಲಿ ಆರತಕ್ಷತೆ:

ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದ್ದು, ಅಂದು ಚಿತ್ರರಂಗ‌ ಸೇರಿದಂತೆ ಎಲ್ಲಾ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲು ರಮೇಶ್ ಅರವಿಂದ್ ಕುಟುಂಬ ನಿರ್ಧರಿಸಿದೆ.