ರಮೇಶ್‌ಬಾಬುರಿಂದ ಮತದಾನ ಪರಿಶೀಲನೆ

ಕೋಲಾರ,ಅ,೨೯:ನಗರದ ಜೂನಿಯರ್ ಕಾಲೇಜಿನ ಮತಗಟ್ಟೆಗೆ ವಿಧಾನ ಪರಿಷತ್ ಕಾಂಗ್ರೇಸ್ ಅಭ್ಯರ್ಥಿ ರಮೇಶ್ ಬಾಬು ಅವರು ಭೇಟಿ ನೀಡಿ ಮತದಾನದ ವ್ಯವಸ್ಥೆಗಳನ್ನು ಗಮನಿಸಿದರು.
ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡಿ ತಮಗೆ ಪ್ರತಿಸ್ವರ್ಧಿಗಳು ಒಂದೊಂದು ಜಿಲ್ಲೆಯಲ್ಲಿ ಒಬ್ಬೊಬ್ಬರು ಪ್ರತಿಸ್ವರ್ಧಿಗಳು ಇರುವುದರಿಂದ ತಮಗೆ ಈ ಚುನಾವಣೆಯಲ್ಲಿ ಗೆಲುವಿನ ಭರವಸೆ ಇದೆ. ಜೆ.ಡಿ.ಎಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಒಳ್ಳೆಯ ಅಭಿಪ್ರಾಯಗಳು ಇದ್ದು ಬಹುತೇಕ ಮುಖಂಡರುಗಳು ತಮ್ಮನ್ನು ಬೆಂಬಲಿಸುತ್ತಿರುವ ಉತ್ತಮ ವಾತವರಣಗಳು ಕಂಡು ಬಂದಿರುವುದು ಎಂದರು.
ಮಂಗಳವಾರ ಸಂಜೆ ಸಚಿವರಾದ ಡಾ.ಸುಧಾಕರ್ ಮತ್ತು ಎಚ್.ನಾಗೇಶ್ ಅವರು ಪತ್ರಿಕಾ ಗೋಷ್ಠಿ ಮೂಲಕ ಮತಯಾಚಸಿದ್ದಾರೆ ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ. ಬಹಿರಂಗ ಮತಯಾಚನೆ ಮಾಡಬಾರದು, ಚುನಾವಣೆಯ ದಿನಾಂಕದ ಸಂಜೆ ೫ ಗಂಟೆಯವರೆ ಮತದಾರರ ಬಳಿ ಮತಯಾಚಿಸ ಬಹುದಾಗಿದೆ ಎಂದ ಅವರು ಅದರೆ ಅಶ್ವಾಸನೆ, ಅಮಿಷಗಳಿಗೆ ಒಳ ಪಡೆಸುವುದು ಮಾತ್ರ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ ಎಂದು ಹೇಳಿದರು
ಇಂದು ನಗರದ ಎಲ್ಲಾ ಮತಕೇಂದ್ರಗಳಲ್ಲೂ ಮತದಾರರು ಬಿರುಸಿನಿಂದ ಉತ್ಸಾಹದಿಂದ ಮತಚಲಾಯಿಸುತ್ತಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲೂ ಕೋವಿಡ್-೧೯ ಮುಂಜಾಗೃತ ಕ್ರಮವಾಗಿ ಕಿಟ್‌ಗಳನ್ನು ಆಶಾ ಕಾರ್ಯಕರ್ತರಿಗೆ ನೀಡಲಾಗಿದೆ. ಕೋವಿಡ್ ಸ್ಕಾನ್ ಯಂತ್ರ, ಸ್ಯಾನಿಟೈಸರ್, ಮಾಸ್ಕ್ ಹಾಗೂ ಕೈಗೆ ಗ್ಲೋಸ್‌ಗಳನ್ನು ನೀಡಿ ಸಮಾಜಿಕ ಅಂತರವನ್ನು ಕಾಪಾಡುತ್ತಿದ್ದಾರೆ ಎಂದರು.
ಜಿಲ್ಲೆಯ ೬ ತಾಲ್ಲೂಕುಗಳಲ್ಲಿ ಮತದಾನ ಶಾಂತಿಯುವಾಗಿ ನಡೆಯುತ್ತಿದೆ. ಯಾವೂದೇ ಸಮಸ್ತೆಗಳು ಕಂಡು ಬಂದಿಲ್ಲ. ಮತದಾರರು ಈ ಬಾರಿ ನನಗೆ ಆರ್ಶಿವಾದ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದ ಅವರು ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ದಾವಣಗೆರೆ ಜಿಲ್ಲೆಗಳಿಗೆ ಸಂಜೆ ೫ ಗಮಟೆಯೊಳಗೆ ಭೇಟಿ ನೀಡ ಬೇಕಾಗಿದೆ. ವಿವಿಧ ಜಿಲ್ಲೆಗಳಲ್ಲಿ ಕಾಂಗ್ರೇಸ್ ಮುಖಂಡರು ಹಾಗೂ ವಿವಿಧ ಪಕ್ಷದ ಮುಖಂಡರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಜೆ.ಡಿ.ಎಸ್. ಪಕ್ಷದ ವತಿಯಿಂದ ಉಪಚುನಾವಣೆಯಲ್ಲಿ ನನಗೆ ನೀಡಿದ್ದ ೧೫ ತಿಂಗಳ ಅವಧಿಯ ಅವಕಾಶದಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದೇನೆ. ಹಾಗಾಗಿ ನನಗೆ ಶಿಕ್ಷಕರ ಮತ್ತು ಪದವೀದರರ ಕ್ಷೇತ್ರವು ಹೊಸದೆನಲ್ಲ. ಬಹುತೇಕ ಪರಿಚಿತರ ಕ್ಷೇತ್ರವಾಗಿದ್ದು,ನನಗೆ ಎಲ್ಲರ ಆರ್ಶಿವಾದ ಸಿಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡೆಸಿದರು.