ರಮೇಶ್‌ಗೆ ಸೂಕ್ತ ಸ್ಥಾನ ನೀಡಲು ಆಗ್ರಹ

ಕೋಲಾರ,ಮೇ.೧೪: ಜಿಲ್ಲೆಯ ಮುತ್ಸದ್ಧಿ ನಾಯಕರಲ್ಲಿ ಒಬ್ಬರಾದ ಕೆ.ಆರ್.ರಮೇಶ್‌ಕುಮಾರ್ ಅವರ ಸೇವಾ ಹಿರಿತನ, ಅನುಭವ ಪ್ರಜಾತಾಂತ್ರಿಕ ಆಲೋಚನೆಗಳು ಪಕ್ಷಕ್ಕೆ ಅನಿವಾರ್ಯವಾಗಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ ಮನವಿ ಮಾಡಿದ್ದಾರೆ.
ಕೆ.ಆರ್.ರಮೇಶ್ ಕುಮಾರ್ ಅವರ ಮಾರ್ಗದರ್ಶನ ಕಾಂಗ್ರೆಸ್ ಪಕ್ಷಕ್ಕೆ ಅಗತ್ಯವಿದೆ. ಅವರ ಸೇವೆ, ಅನುಭವ, ರಾಜಕಾರಣದಲ್ಲಿ ಸವಾಲುಗಳನ್ನು ಮಟ್ಟಿ ನಿಲ್ಲುವ ಗಟ್ಟಿತನ, ಪಕ್ಷಕ್ಕೆ ಅವರು ನೀಡಿರುವ ಕೊಡುಗೆಯನ್ನು ಗುರ್ತಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.