ರಮಣಾದೇವಿ ಜಾತ್ರಾ ಮಹೋತ್ಸವಭಕ್ತರ ಜಯಘೋಷದೊಂದಿಗೆ ರಥೋತ್ಸವ

ಶಹಾಬಾದ್ :ಮಾ.25:ನಗರದÀ ಬಂಜಾರಾ ಸಮಾಜದ ಪ್ರಸಿದ್ಧ ರಮಾಣಾದೇವಿ ಜಾತ್ರಾ ಮಹೋತ್ಸವ ಎರಡನೇ ದಿನ ನೂತನ ರಥ ಎಳೆಯುವ ಮೂಲಕ ರಥೋತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಮಾರ್ಚ್ 24 ರಂದು ಶುಕ್ರವಾರ ಬೆಳಗ್ಗೆ 5.30ಕ್ಕೆ ಅಗ್ನಿ ಪ್ರವೇಶ ಸಾಯಂಕಾಲ 5 ಗಂಟೆಗೆ ಶರಣಗೌಡ ಮಹಾರುದ್ರಪ್ಪಾ ಪಾಟೀಲ್ ಅವರ ಮನೆಯಿಂದ ಕಳಸ ತರುವುದು ಮತ್ತು ಶರಣಪ್ಪ ಕೊಡದೂರ ಅವರ ಮನೆಯಿಂದ ಕುಂಭ ತರುವುದು ಸಾಯಂಕಾಲ 6 ಕ್ಕೆ ರಥೋತ್ಸವ ಕಾರ್ಯಕ್ರಮ ಜರುಗಿತು. ರಾತ್ರಿ 9 ಗಂಟೆಗೆ ಪ್ರಸಿದ್ಧ ಬಂಜಾರ ಸಂಗೀತ ಕಲಾವಿದರ ಸಂತೋಷ ರಾಠೋಡ ಸಣ್ಣೂರ, ಹಾಗೂ ಸಾವಿತ್ರಿಬಾಯಿ ಜಾಧವ ಕೊರವಿ ತಾಂಡ ಇವರಿಂದ ಭಕ್ತಿಯ ಭಜನೆ ಕೀರ್ತನೆ ಕಾರ್ಯಕ್ರಮ ಜರುಗಿತು. ಮಾತಾ ರಮಾಣಾದೇವಿಯ ಜಾತ್ರಾ ಮಹೋತ್ಸವಕ್ಕೆ ಬಂದ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ವ್ಯವಸ್ಥಿತವಾಗಿ ಅನುಕೂಲಮಾಡಲಾಯಿತು. ಜಾತ್ರೆಯಲ್ಲಿ ಮಹಾರಾಷ್ಟ್ರ, ಆಂದ್ರ ಪ್ರದೇಶ, ತೆಲಂಗಾಣ, ನೆರೆ ಜಿಲ್ಲೆಗಳಾದ ಬಿಜಾಪೂರ, ಬಾಗಲಕೋಟೆ, ಬಳ್ಳಾರಿ, ದಾವಣಗೆರಾ, ಗಂಗಾವತಿ, ಯಾದಗಿರಿ, ಬೀದರ, ಬೇರೆ ಬೇರೆ ಜಿಲ್ಲೆಯಿಂದ ಭÀಕ್ತರು ಕುಟುಂಬ ಸಮೇತ ಆಗಮಿಸಿ, ಜಾತ್ರೆಯ ಸೊಬಗನು ಸವಿದರು, ನಗರದ ಧಕ್ಕಾ ತಾಂಡ, ಹನುಮಾನ ನಗರ ತಾಂಡ, ಹಾಗೂ ಸುತ್ತು ಮುತ್ತ ಹಳ್ಳಿಯ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದರು.