ರಮಜಾನಬಿ ತಹಶೀಲ್ದಾರಗೆ ಪಿಎಚ್‍ಡಿ

ವಿಜಯಪುರ,ಫೆ.15: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ರಮಜಾನಬಿ ತಹಶೀಲ್ದಾರ ಅವರು ಸಲ್ಲಿಸಿದ್ದ “ಮಕ್ಕಳ ಸಾಹಿತ್ಯಕ್ಕೆ ಜಿ.ಪಿ.ರಾಜರತ್ನಂ ಅವರ ಕೊಡುಗೆ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‍ಡಿ ಪದವಿ ನೀಡಿದೆ.
ರಮಜಾನಬಿ ತಹಶೀಲ್ದಾರ ಅವರು ಕನ್ನಡ ವಿಭಾಗದ ಪ್ರೊ. ಮಹೇಶ ಚಿಂತಾಮಣಿ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ರಮಜಾನಬಿ ತಹಶೀಲ್ದಾರ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.