ರಬ್ಬರ್ ಅಕ್ಕಿಕಾಳು-ಅತಂಕದಲ್ಲಿ ಜನತೆ

ಮುಳಬಾಗಿಲು.ಸೆ.೨೧:ತಾಲೂಕಿನ ಕೀಲಾಗಾಣಿ, ಊರುಕುಂಟೆ ಮಿಟ್ಟೂರು, ವಿ.ಗುಟ್ಟಹಳ್ಳಿ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಪಕ್ಕದ ಗ್ರಾಮಗಳ ಬಿಪಿಎಲ್ ಪಡಿತರ ವಿತರಣೆಯಲ್ಲಿ ವಿತರಣೆಯಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ವಿಧವಾದ ರಬ್ಬರ್ ರೀತಿಯ ಅಕ್ಕಿಕಾಳು ಕಂಡು ಬಂದಿದ್ದು ಜನರಲ್ಲಿ ಅಂತಕ ಉಂಟಾಗಿದೆ, ಪ್ಲಾಸ್ಟಿಕ್ ಅಕ್ಕಿ ಸೇವನೆ ಮಾಡಿದರೆ ತೊಂದರೆ ಉಂಟಾಗುತ್ತದೆ ಎಂಬ ಅಂತಕದಲ್ಲಿ ಗ್ರಾಮೀಣ ಜನರು ಇದ್ದರೆ.
ಪ್ರತಿ ತಿಂಗಳಿನಂತೆ ಸೆಪ್ಟೆಂಬರ್ ತಿಂಗಳಿನಲ್ಲಿಯೂ ಸಹ ಪಡಿತರ ಅಕ್ಕಿ ನ್ಯಾಯಬೆಲೆ ಅಂಗಡಿಗಳಿಂದ ಪಡೆದುಕೊಳ್ಳಲಾಗಿದೆ, ಅಕ್ಕಿಯನ್ನು ಅನ್ನ ಮಾಡುವ ಸಂದರ್ಭದಲ್ಲಿ ಪ್ಲಾಸ್ಟಿಕ್ ರೀತಿಯ ಅಕ್ಕಿ ಕಾಳುಗಳು ಕಾಣಿಸಿಕೊಂಡಿವೆ, ಇದರಿಂದ ಕೀಲಾಗಾಣಿ ಮತ್ತು ಊರುಕುಂಟೆ ಮಿಟ್ಟೂರು, ವರದಗಾನಹಳ್ಳಿ ಗ್ರಾಮಗಳ ಬಿಪಿಎಲ್ ಪಡಿತರ ಪಡೆದಿರುವ ಜನರು ಭಯಭೀತರಾಗಿದ್ದಾರೆ.
ಸರ್ಕಾರ ಈಗಾಗಲೇ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಿದ್ದು ಇದರ ಮಧ್ಯದಲ್ಲಿಯೆ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ರೀತಿಯ ಅಕ್ಕಿಕಾಳು ಕಲಬೆರಕೆ ಆಗಿರುವುದರಿಂದ ಜನಸಾಮಾನ್ಯರಿಗೆ ಕೆಲ ಅನುಮಾನಗಳಿಗೆ ಮನೆ ಮಾಡಿದೆ ಪ್ಲಾಸ್ಟಿಕ್ ವಸ್ತುಗಳನ್ನು ಸೇವನೆಯಿಂದ ಆರೋಗ್ಯ ಹದಗೆಡುತ್ತದೆ. ಆದರೆ ಅಕ್ಕಿಯೆ ಪ್ಲಾಸ್ಟಿಕ್ ಆಗಿ ಮಾರ್ಪಾಡು ಆಗಿವೆ ಕೆಲ ಜನರಿಗೆ ಇದರ ಬಗ್ಗೆ ಮಾಹಿತಿ ಇಲ್ಲದೆ ಸೇವನೆ ಮಾಡಿದರೆ ಅಂತಹವರಿಗೆ ಆರೋಗ್ಯ ಹದಗೆಟ್ಟರೆ ಯಾರು ಹೊಣೆಯನ್ನು ಹೊರುತ್ತಾರೆಂದು ಕೀಲಾಗಾಣಿ ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಕಲಬೆರಕೆ ಆಗಿರುವುದು ಖಂಡನೀಯ ಸಂಗತಿಯಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಸಂಬಂಧಿಸಿದ ಇಲಾಖೆ ಹಾಗೂ ಸರ್ಕಾರ ಮುಂದಾಗಬೇಕು. ಈ ಕಲಬೆರಕೆ ಅಕ್ಕಿ ಸೇವನೆಯಿಂದ ಯಾರಿಗಾದರೂ ಅನಾಹುತ ಸಂಬಂವಿಸಿದರೆ ಆಹಾರ ಇಲಾಖೆ ನೇರ ಹೊಣೆಯನ್ನು ಹೊರಬೇಕು. ಕಲಬೆರಕೆಯಲ್ಲಿ ತೊಡಗಿಸಿಕೊಂಡವರಿಗೆ ಶಿಕ್ಷೆ ನೀಡಬೇಕೆಂದು ದಸಂಸ ಸಂಯೋಜಕ ಸಮಿತಿ ಜಿಲ್ಲಾ ಸಂಯೋಜಕ ಮೆಕಾನಿಕ್ ಶ್ರೀನಿವಾಸ್ ಒತ್ತಾಯಿಸಿದರು.
ಮುಳಬಾಗಿಲು ನಗರದ ಎಪಿಎಂಸಿ ಆವರಣದಲ್ಲಿನ ಪಡಿತರ ಆಹಾರ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಇಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ವಿಧದ ಅಕ್ಕಿ ಕಂಡು ಬಂದಿಲ್ಲ. ಈಗಾಗಲೇ ತಾಲೂಕಿನ ಹಲವೆಡೆ ಪಡಿತರ ವಿತರಣೆ ಮಾಡಲಾಗಿದೆ. ಎಲ್ಲಾದರೂ ಅನುಮಾನಸ್ಪದವಾದ ಪಡಿತರ ಅಕ್ಕಿ ಕಂಡು ಬಂದರೆ ಆಯಾ ನ್ಯಾಯಬೆಲೆ ಅಂಗಡಿಗಳಿಗೆ ಫಲಾನುಭವಿಗಳು ವಾಪಸ್ಸು ಮಾಡಲು ಮುಂದಾಗಬೇಕು. ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಿ ಪಡಿತರ ವಿತರಣೆಗೆ ಅವಕಾಶ ಮಾಡಿಕೊಡಲಾಗುವುದು. ಪ್ಲಾಸ್ಟಿಕ್ ಮಾದರಿಯ ಅಕ್ಕಿಯನ್ನು ಪತ್ತೆಹಚ್ಚಿ ತಾಲ್ಲೂಕಿನ ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು.
ಇದಕ್ಕೆ ಫಲಾನುಭವಿಗಳು ಸಹಕರಿಸಬೇಕೆಂದು ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದ ತಾಲ್ಲೂಕು ಅಧ್ಯಕ್ಷ ಕವತನಹಳ್ಳಿ ಮುನಿಸ್ವಾಮಿ ಗೌಡ ಮನವಿ ಮಾಡಿದರು.
ಪ್ರತಿಕ್ರಿಯೆ:
ಈ ಬಾರಿ ಅಕ್ಕಿ ಪ್ಲಾಸ್ಟಿಕ್ ಮಾದರಿಯಲ್ಲಿ ಬಂದಿದ್ದು ಜನರು ಅಂತಕಕ್ಕೆ ಒಳಗಾಗಿದ್ದಾರೆ ಇದರಿಂದ ಜನರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳು ಅಂತಹ ಅಕ್ಕಿಯನ್ನು ವಾಪಸ್ಸು ಪಡೆದು ಬೇರೆ ಅಕ್ಕಿಯನ್ನು ನೀಡಲು ಸೂಚನೆ ನೀಡಲಾಗಿದೆ. ಪ್ರೋಟ್ರಿನ್ ಮತ್ತು ವಿಟಮಿನ್ ಅಕ್ಕಿಯನ್ನು ಬೆರೆಸಿ ನೀಡಲಾಗಿದೆ ಇದಕ್ಕೆ ಅತಂಕ ಪಡುವ ಅಗತ್ಯವಿಲ್ಲ ಕೆ.ಎನ್.ರಾಜಶೇಖರ್ ತಹಶೀಲ್ದಾರ್ ಮುಳಬಾಗಿಲು.
ಸರ್ಕಾರ ತಜ್ಞರ ಅಭಿಪ್ರಾಯದಂತೆ ಪಡಿತರ ಕುಟುಂಬಗಳಿಗೆ ಪ್ರೋಟ್ರಿನ್ ಮತ್ತು ವಿಟಮಿನ್ ಅಕ್ಕಿ ಇರುವ ಲೇಬಲ್‌ನ್ನು ಪ್ರತಿ ಚೀಲಕ್ಕೂ ಹಾಕಲಾಗಿದೆ ಕೆಲವರು ವದಂತಿಗೆ ಅಸ್ಪದ ನೀಡಬಾರದು ೫೦ ಕೆಜಿ ಚೀಲಕ್ಕೆ ೧ ಕೆಜಿ ಪ್ರೋಟ್ರಿನ್ ಮತ್ತು ವಿಟಮಿನ್ ಇರುವ ಅಕ್ಕಿ ಮಿಶ್ರಣ ಮಾಡಲಾಗಿದೆ. ಎನ್.ಮಂಜುನಾಥಗೌಡ ಆಹಾರ ನಿರೀಕ್ಷಕ ಮುಳಬಾಗಿಲು.