ರಬಣ್ಣಕಲ್ ಕೆರೆಗೆ ಬಾಗಿನ ಅರ್ಪಿಸಿದ ಸಚಿವ ಎನ್.ಎಸ್.ಬೋಸರಾಜು

ಮಾನ್ವಿ.ಡಿ.೦೩- ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ರಬಣ್ಣಕಲ್ ಕೆರೆ ತುಂಬಿರುವ ಪ್ರಯುಕ್ತ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು ಮಾನ್ವಿ ಪಟ್ಟಣದ ಜನಸಂಖ್ಯೆಗೆ ಪುರಸಭೆಯಿಂದ ಕುಡಿಯುವ ನೀರು ಪೂರೈಸುವುದಕ್ಕೆ ಕಾಲುವೆ ಹಾಗೂ ತುಂಗಭದ್ರಾ ನದಿಯಿಂದ ನೀರನ್ನು ಸಂಗ್ರಹಿಸಿ ಕೆರೆ ತುಂಬಿಸಲು ಕ್ರಮ ಕೈಗೊಳ್ಳಲಾಗಿದ್ದು ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸುವುದಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ಗಂಗಾಧರರವರಿಗೆ ಸೂಚಿಸಿದರು. ಕುಡಿಯುವ ನೀರು ಕೆರೆಯನ್ನು ತುಂಬಿಸಲು ಶ್ರಮಿಸಿದ ಪುರಸಭೆ ಸಿಬ್ಬಂದಿಗಳನ್ನು ಸಚಿವರು ಸನ್ಮಾನಿಸಿ ಗೌರವಿಸಿದರು.
ಶಾಸಕ ಹಂಪಯ್ಯನಾಯಕ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ ,ತಾ.ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ದುಲ್ ಗಾಪೂರ್ ಸಾಬ್,ಶರಣಯ್ಯನಾಯಕ ಗುಡದಿನ್ನಿ,ಬಾಲಸ್ವಾಮಿ ಕೊಡ್ಲಿ,ಸೈಯಾದ್ ಖಾಲಿದ್ ಖಾದ್ರಿ,ಮಹಾಂತೇಶ ಸ್ವಾಮಿ ರೌಡೂರು, ಬಿ.ಕೆ.ಅಮರೇಶಪ್ಪ,ನಾಗರಾಜ್, ಸಬ್ಜಲ್ ಸಾಬ್, ಪುರಸಭೆ ಸದಸ್ಯರಾದ ಬಸವರಾಜ, ರೇವಣ ಸಿದ್ದಯ್ಯಸ್ವಾಮಿ, ಸೇರಿದಂತೆ ಇನ್ನಿತರರು ಇದ್ದರು.