ರಫೇಲ್ ವಿಮಾನ ಖರೀದಿ ಮಧ್ಯವರ್ತಿಗೆ ೧೦ ದಶಲಕ್ಷ ಯೂರೋ ಪಾವತಿ

ನವದೆಹಲಿ, ಏ. ೫- ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ಭಾರತೀಯ ಮಧ್ಯವರ್ತಿಗೆ ಡಸಾಲ್ಟ್ ಕಂಪನಿ ೧೦ ದಶಲಕ್ಷ ಯೂರೋವನ್ನು ಉಡುಗೊರೆಯಾಗಿ ಪಾವತಿಸಿರುವುದಾಗಿ ಫ್ರೆಂಚ್ ವರದಿ ಮಾಡಿದೆ.
ರಫೇಲ್ ಜೆಟ್ ತಯಾರಿಕಾ ಕಂಪನಿಯಾದ ಡಸಾಲ್ಟ್ ೨೦೧೬ ರಲ್ಲಿ ಇಂಡೋಫ್ರೆಂಚ್ ಒಪ್ಪಂದಕ್ಕೆ ಸಹಿಹಾಕಿತ್ತು. ಈ ಒಪ್ಪಂದಕ್ಕೆ ಕಾರಣವಾದ ಭಾರತೀಯ ಮಧ್ಯವರ್ತಿಗೆ ೧ ದಶಲಕ್ಷ ಯೂರೋ ಪಾವತಿಸಲು ಡಸಾಲ್ಟ್ ಕಂಪನಿ ಒಪ್ಪಿಕೊಂಡಿತ್ತು ಎಂದು ಫ್ರೆಂಚ್ ಪ್ರಕಟಣೆಯೊಂದು ತಿಳಿಸಿದೆ.
ಡಸಾಲ್ಟ್ ಗುಂಪಿನ ೨೦೧೭ರ ದಾಖಲೆಗಳಲ್ಲಿ ಗ್ರಾಹಕರಿಗೆ ಉಡುಗೊರೆಗಳು ಹಾಗೂ ಮುಖ್ಯಸ್ಥರ ಉಪಸ್ಥಿತಿಯಲ್ಲಿ ೫೦೮.೯೨೫ ಯೂರೋ ಮೊತ್ತ ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ.
ಫ್ರೆಂಚ್ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಇನ್ಸ್ ಪೆಕ್ಟರ್ ಗಳು ಈ ಅಕ್ರಮವನ್ನು ಮೊದಲು ಪತ್ತೆಹಚ್ಚಿದ್ದಾರೆ ಎಂದು ವರದಿ ಮಾಡಲಾಗಿದೆ.
ರಫೇಲ್ ಜೆಟ್ ಗಳ ೫೦ ದೊಡ್ಡಪ್ರತಿಕೃತಿಗಳ ತಯಾರಿಕೆಗೆ ಪಾವತಿಸುವ ಉದ್ದೇಶಕ್ಕಾಗಿ ಈ ಹಣ ಬಳಸಲಾಗಿದೆ ಎಂದು ಕಂಪನಿ ತಿಳಿಸಿದೆ. ಆದರೆ ಈ ಮಾದರಿಗಳನ್ನು ತಯಾರಿಸಲಾಗಿದೆಯೇ ಎಂದು ತನಿಖಾಧಿಕಾರಿಗಳಿಗೆ ಯಾವುದೇ ಪುರಾವೆಯನ್ನು ನೀಡಲಾಗಿಲ್ಲ.
ಗೌಪ್ಯ ಲೆಕ್ಕಪರಿಶೋಧನಾ ವರದಿ ಆಧರಿಸಿ ಈ ವಿಷಯವನ್ನು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ. ಈ ಮೊತ್ತ ಲೆಕ್ಕಪರಿಶೋಧನಾ ವೇಳೆ ನಮೂದಿಸಿರುವ ಮೊತ್ತಕ್ಕೆ ಹೋಲಿಕೆಯಾಗುತ್ತಿಲ್ಲ ಎಂದು ಲೆಕ್ಕಪರಿಶೋಧನೆಯ ನಂತರ, ಗೌಪ್ಯ ವರದಿ ತಿಳಿಸಿದೆ.
ಫ್ರೆಂಚ್ ಭ್ರಷ್ಟಾಚಾರ ನಿಗ್ರಹದಳ ಮತ್ತು ಫ್ರೆಂಚ್ ಪ್ರಕಟಣೆಯ ಪ್ರಕಾರ ನ್ಯಾಯ ವ್ಯವಸ್ಥೆ ಮತ್ತು ರಾಜಕೀಯ ಅಧಿಕಾರಿಗಳ ಮೇಲೆ ಈ ವಿಷಯ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಲಿದೆ ಎಂದು ಹೇಳಿದ್ದಾರೆ.
ಇದೊಂದು ರಕ್ಷಣಾ ಒಪ್ಪಂದದ ಅಕ್ರಮವೆಂದು ಫ್ರೆಂಚ್ ಅಭಿಯೋಜನೆ ಆರೋಪಿಸಿದೆ. ಮಾರ್ಚ್ ೩೦, ೨೦೧೭ ರಂದು ಖರೀದಿ ನಮೂದು (ಇನ್‌ವೈಸ್), ರಫೇಲ್ ಜೆಟ್ ಗಳ ೫೦ ಡಮ್ಮಿ ಮಾದರಿ ತಯಾರಿಕೆಗಾಗಿ ೧,೦೧೭,೮೫೦ ಮೌಲ್ಯದ ಆದೇಶದ ಶೇ. ೫೦ ರಷ್ಟನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.
ಎ ಎಫ್ ಎ ವರದಿ ಪ್ರಕಾರ ೨೦,೩೫೭ರ ಭಾರೀ ಬೆಲೆಗೆ ಉಲ್ಲೇಖಿಸಲಾಗಿದೆ.
೩೬ ಫೈಟರ್ ಜೆಟ್ ಗಳನ್ನು ೭.೮ ಬಿಲಿಂiiನ್ ಖರೀದಿ ಒಪ್ಪಂದಕ್ಕೆ ೨೦೧೬ ರಲ್ಲಿ ಭಾರತ ಹಾಗೂ ಡಸಾಲ್ಟ್ ಕಂಪನಿ ಸಹಿಹಾಕಿದ್ದವು. ಈಗಾಗಲೇ ಭಾರತದ ಅಂಬಾಲ ವಾಯುನೆಲೆಯಲ್ಲಿ ರಫೇಲ್ ಜೆಟ್ ಗಳ ಬಳಕೆ ಆರಂಭವಾಗಿದೆ ಮತ್ತು ೨ನೇ ಅವಧಿಗೆ ಬಂದ ರಫೇಲ್ ಜೆಟ್ ಗಳನ್ನು ಪಶ್ಚಿಮ ಬಂಗಾಳದ ಹಸಿಮರಾದಲ್ಲಿ ಬರಮಾಡಿಕೊಳ್ಳಲಾಗಿದೆ.