ರನ್‌ಗಳ ಶಿಖರ ನಿರ್ಮಿಸಲು ದವನ್ ಸಜ್ಜು

ನವದೆಹಲಿ, ನ ೧೦– ಡೆಲ್ಲಿ ಕ್ಯಾಪಿಟಲ್ಸ್‌ನ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ೧೩ನೇ ಆವೃತ್ತಿ ಐಪಿಎಲ್ ನಲ್ಲಿ ಗರಿಷ್ಠ ರನ್ ಗಳ ಶಿಖರವನ್ನು ಏರುವ ಸನಿಹದಲ್ಲಿದ್ದಾರೆ.

ಕ್ವಾಲಿಫೈಯರ್ ೨ ರಲ್ಲಿ ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಶಿಖರ್ ಅದ್ಭುತ ಬ್ಯಾಟಿಂಗ್ ನಡೆಸಿ ೭೮ ರನ್ ಬಾರಿಸಿ ಟೂರ್ನಿಯಲ್ಲಿ ೬೦೦ ರನ್ ಬಾರಿಸಿದ ಖ್ಯಾತಿಗೆ ಒಳಗಾದ ಶಿಖರ್ ಈಗ ೧೬ ಪಂದ್ಯಗಳಲ್ಲಿ ೬೦೩ ರನ್ ಗಳಿಸಿದ್ದಾರೆ. ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವವರ ಲೆಕ್ಕಾಚಾರದಲ್ಲಿ ಇವರಿಗೆ ಎರಡನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನ ಲೋಕೇಶ್ ರಾಹುಲ್ ಮೊದಲ ಸ್ಥಾನದಲ್ಲಿದ್ದಾರೆ. ಪಂಜಾಬ್ ನಾಯಕ ರಾಹುಲ್ ೧೪ ಪಂದ್ಯಗಳಲ್ಲಿ ೬೭೦ ರನ್ ಗಳಿಸಿದ್ದರು.

ಅವರು ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯಲಿದ್ದು, ತಂಡಕ್ಕೆ ಚೊಚ್ಚಲ ಬಾರಿಗೆ ಕಿರೀಟ ತೊಡಿಸುವ ಕನಸಿನಲ್ಲಿದ್ದಾರೆ. ಅವರು ಆರೆಂಜ್ ಕ್ಯಾಪ್ ಅನ್ನು ಸಹ ಪಡೆಯಬಹುದು. ಅವರ ಮತ್ತು ರಾಹುಲ್ ನಡುವೆ ೬೭ ರನ್‌ಗಳ ಅಂತರವಿದೆ.

ಫೈನಲ್‌ನಲ್ಲಿ ಮುಂಬೈನ ಮೂವರು ಆಟಗಾರರಾದ ಇಶಾನ್ ಕಿಶನ್, ಕ್ವಿಂಟನ್ ಡಿ ಕಾಕ್ ಮತ್ತು ಸೂರ್ಯ ಕುಮಾರ್ ಯಾದವ್ ಅವರು ಟೂರ್ನಿಯಲ್ಲಿ ೫೦೦ ರನ್ ಪೂರ್ಣಗೊಳಿಸುವ ಅವಕಾಶವನ್ನು ಹೊಂದಿರುತ್ತಾರೆ. ಕಿಶನ್ ೪೮೩, ಡಿ ಕಾಕ್ ೪೮೩ ಮತ್ತು ಸೂರ್ಯಕುಮಾರ್ ೪೬೧ ರನ್ ಗಳಿಸಿದ್ದಾರೆ