ರನ್ನಿಂಗ್, ಸಂಗ್ರಾಣಿ ಕಲ್ಲೆತ್ತುವ ಸ್ಪರ್ಧೆ ವಿಜೇತರಿಗೆ ಬಹುಮಾನ

ಮಾನ್ವಿ,ಆ.೧೭-
ತಾಲೂಕಿನ ಕೊರವಿ ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಗ್ರಾಮದ ಗೆಳೆಯರ ಬಳಗ ಹಾಗೂ ಶಾಸಕ ಬಸನಗೌಡ ದದ್ದಲ್ ಮತ್ತು ಗ್ರಾಮದ ಹಿರಿಯರ, ಗ್ರಾಮ ಪಂಚಾಯತಿ ಇವರ ಸಹ ಭಾಗಿತ್ವದಲ್ಲಿ ಸ್ಪರ್ಧೆಯಲ್ಲಿ ಆಯೋಜನೆ ಮಾಡಲಾಗಿತ್ತು.
ಕೈ ಕಲ್ಲು ಎತ್ತುವ ಸ್ಪರ್ಧೆಯ ಪ್ರಯೋಜಕರಾದ ಶಾಸಕ ಬಸವನಗೌಡ ದದ್ದಲ್ ಪ್ರಥಮ ಬಹುಮಾನ ೧೦ತೊಲೆ ಬೆಳ್ಳಿಯ ಕಡಗ, ಸಜ್ಜಲ್ ಈರಪ್ಪ ದ್ವಿತೀಯ ಬಹುಮಾನ ೫ತೊಲೆ ಬೆಳ್ಳಿ,ಗ್ರಾ.ಪಂ.ಸದಸ್ಯ ಕರಡಿ ಮಹೇಶ ತೃತೀಯ ಬಹುಮಾನ ೩ತೊಲೆ ಬೆಳ್ಳಿಯ ಕಡಗವನ್ನು ನೀಡಲಾಗಿದ್ದು ಪ್ರಥಮ ಸ್ಥಾನವನ್ನು ಪ್ರತಾಪ್ಪ ನಾಯಕ ನಾಗನದೊಡ್ಡಿ, ದ್ವಿತೀಯ ಸ್ಥಾನವನ್ನು ಕೃಷ್ಣ ಕಲ್ಲೂರು,ತೃತೀಯ ಸ್ಥಾನವನ್ನು ಹಂಪಯ್ಯನಾಯಕ ಕುಕನೂರು ಪಡೆದು ಬಹುಮಾನಗಳನ್ನು ಪಡೆದರು.
೬ ಕಿ.ಮೀ ಓಪನ್ ರನ್ನಿಂಗ್ ಸ್ಪರ್ಧೆಯಲ್ಲಿ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದು ಪ್ರಥಮ ಸ್ಥಾನಪಡೆದ ಹೈದರಾಬಾದಿನ ರಮೇಶ ೧೦ ತೊಲೆ ಬೆಳ್ಳಿ ಕಡಗ, ದ್ವೀತಿಯ ಸ್ಥಾನವನ್ನು ಪಡೆದ ಕೊತ್ತದೊಡ್ಡಿ ಗ್ರಾಮದ ತಿಮ್ಮಯ್ಯ ೫ ತೊಲೆ ಬೆಳ್ಳಿ ಕಡಗ,ತೃತೀಯ ಸ್ಥಾನವನ್ನು ಪಡೆದ ದೇವದುರ್ಗದ ನಿಂಗು.ಎಂ.ಡಿ. ೩ ತೊಲೆ ಬೆಳ್ಳಿ ಕಡಗವನ್ನು ಬಹುಮಾನವಾಗಿ ಬಹುಮಾನವಾಗಿ ಪಡೆದರು. ಗ್ರಾಮದ ಮುಖಂಡರು ಭಾಗಿಯಾಗಿದ್ದರು.