ರಥೋತ್ಸವ ರದ್ದು, ಸಾರ್ವಜನಿಕರೊಂದಿಗೆ ಸಭೆ.

ಕೊಟ್ಟೂರು ಏ 20 : ತಾಲೂಕಿನಲ್ಲಿ ದಿನಾಂಕ: 21.04.2021 ರಂದು ರಥೋತ್ಸವ ನಡೆಯಲಿರುವ ಹನುಮನಹಳ್ಳಿ, ನಾಗರಕಟ್ಟೆ, ಕಂದಗಲ್ಲು, ತಿಮ್ಮಲಾಪುರ ಗ್ರಾಮಗಳಲ್ಲಿ, ದಿನಾಂಕ: 22.04.2021 ರಂದು ರಥೋತ್ಸವ ನಡೆಯಲಿರುವ ಬೆಳದೇರಿ ಗ್ರಾಮದಲ್ಲಿ ಹಾಗೂ ದಿನಾಂಕ: 27.04.2021 ರಂದು ರಥೋತ್ಸವ ನಡೆಯುವ ತೂಲಹಳ್ಳಿ ಗ್ರಾಮದಲ್ಲಿ ಅನಿಲ್ ಕುಮಾರ್.ಜಿ. ತಹಶೀಲ್ದಾರರು ಕೊಟ್ಟೂರು ಇವರು ಶಾಂತಿಸಭೆಯನ್ನು ನಡೆಸಿ ಕೋವಿಡ್-19 ಸೋಂಕು ನಿಯಂತ್ರಿಸುವ ಸಲುವಾಗಿ ಹಾಗೂ ಸಾರ್ವಜನಿಕರ, ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ರಥೋತ್ಸವವನ್ನು ರದ್ದುಗೊಳಿಸಿದ್ದು, ತಾವೆಲ್ಲರೂ ಸಹಕರಿಸಿ ಹೆಚ್ಚಿನ ಮಟ್ಟದಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕರಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು. ಗ್ರಾಮದ ಮುಖಂಡರು, ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವ ದೈವಸ್ಥರನ್ನು ಸೇರಿಸಿ ಕೋವಿಡ್-19 ಸದ್ಯತ ಪರಿಸ್ಥಿತಿ ಹಾಗೂ ನಿರ್ಲಕ್ಷ್ಯತನ ಮಾಡಿದರೆ ಆಗಬಹುದಾದ ಅನಾಹುತದ ಬಗ್ಗೆ ತಿಳುವಳಿಕೆ ನೀಡದರು.
ಆದೇಶವನ್ನು ಉಲ್ಲಂಘಿಸಿ ರಥೋತ್ಸವ ನಡೆಸಿದಲ್ಲಿ ಸಂಬಂಧಿಸಿದವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಸಹಾ ನೀಡಿದರು.
ಈ ಸಮಯದಲ್ಲಿ ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ, ಸಂಬಂಧಿಸಿದ ಗ್ರಾಮದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಹಾಜರಿದ್ದರು.