ರಥೋತ್ಸವದ ನಿಮಿತ್ತ ಟಗರಿನ ಕಾಳಗ

ಹಗರಿಬೊಮ್ಮನಹಳ್ಳಿ :’ಏ.೧೬ .ತಾಲೂಕಿನ ಉಪನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದ ನಿಮಿತ್ತ ಕುರಿಗಾಯಿ ಹುಡುಗರು ಟಗರಿನ ಕಾಳಗ ವನ್ನು ಏರ್ಪಡಿಸಿದ್ದರು.
ಟಗರಿನ ಕಾಳಗ ಉದ್ಘಾಟನೆ ಮಾಡಿದ ತಾಲೂಕು ಕುರುಬರ ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ ಇಂದಿನ ದಿನಮಾನಗಳಲ್ಲಿ ಕುರಿಗಾಹಿಗಳ ಬದುಕು ದುಸ್ತರವಾಗುತ್ತಿದೆ ಅದರ ಮಧ್ಯೆ ಕೋರೋನ ಮಹಾಮಾರಿಯ ಅಬ್ಬರದಲ್ಲಿ ನಮ್ಮ ಜೀವವನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ ಗ್ರಾಮೀಣ ಪ್ರದೇಶದಲ್ಲಿ ಇಂತಹ ಟಗರಿನ ಕಾಳಗ ಆಯೋಜನೆ ಮಾಡುವುದರಿಂದ ಹಳ್ಳಿಯ ಜನರಲ್ಲಿ ಬಾಂಧವ್ಯ ವೃದ್ಧಿ ಯಾಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕುರಿಗಾಯಿಗಳಿಗೆ ನೀಡುವ ಕ್ರೀಡೆ ಎಂದರೆ ಅದು ಟಗರಿನ ಕಾಳಗ ಪ್ರತಿವರ್ಷ ಟಗರಿನ ಕಾಳಗ ಹಾಗೆ ಮುಂದುವರೆಯಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಕುರಿ ನಾಗರಾಜ್. ಊರಮುಂದಿನ ಪರಶುರಾಮರ. ಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹುಲಿಗೆಮ್ಮ ಸಿದ್ದಪ್ಪ.ಗ್ರಾಮ ಪಂಚಾಯತಿ ಸದಸ್ಯರಾದ ನಕರಾಳ ಗೋಣೆಪ್ಪ. ಹನುಮಂತಪ್ಪ ಶ್ರೀಮತಿ ಶಿಲ್ಪಾ ಪರಶುರಾಮ್ ಹಾಗೂ ಊರಿನ ಮುಖಂಡರಾದ ಶ್ರೀ ವಿ .ಮಂಜುನಾಥ. ಬಿ .ಶಿವಪ್ಪ ವಿ .ಗುರು ವಿ . ಜಗದೀಶ್ ಎಸ್ ಗೋಣಪ್ಪ. ವಿ ಗೊಣೆಪ್ಪ.ಫೋಟೋಗ್ರಾಫರ್ ರಾಜು. ಷಣ್ಮುಖ ನೂರಾರು ಜನ ಕುರಿಗಾಯಿಗಳು ಭಾಗವಹಿಸಿದ್ದರು