ರಥಯಾತ್ರೆಗೆ ಅದ್ದೂರಿ ಸ್ವಾಗತ

ಆಲಮೇಲ :ಜ.28: ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಂದು ಆಲಮೇಲ ತಾಲೂಕಿನ ಗಡಿಭಾಗದ ದೇವಣಗಾಂವ್ ಭೀಮಾ ನದಿಯ ಸೇತುವೆಯ ಮೇಲೆ ಪ್ರಥಮವಾಗಿ ಪ್ರವೇಶಿಸಿದಾಗ ತಹಶೀಲ್ದಾರ್ ಸುರೇಶ ಚಾವಲರ ಅದ್ದೂರಿಯಾಗಿ ಬರಮಾಡಿಕೊಂಡು ವಿವಿಧ ಗ್ರಾಮಗಳಿಗೆ ಚಾಲನೆ ನೀಡಿದರು.
ಆಲಮೇಲ ಪಟ್ಟಣ ಪ್ರವೇಶಿಸಿದಾಗ ತಾಲೂಕು ಆಡಳಿತದ ಪರವಾಗಿ ದಂಡಾಧಿಕಾರಿ ಸುರೇಶ್ ಚಾವಲರ್ ರಥಯಾತ್ರೆ ಹಾಗೂ ಕನ್ನಡಾಂಭೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕರ್ನಾಟಕದ 50 ರ ಸಂಭ್ರಮದಲ್ಲಿ ರಥ ಯಾತ್ರೆ ಪಟ್ಟಣದಲ್ಲಿ ಸಂಚರಿಸುವಾಗ ಶಾಲಾ ಮಕ್ಕಳಿಂದ ಹಾಗೂ ವಿವಿಧ ಗಣ್ಯರಿಂದ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ , ಕನ್ನಡದ ಕೂಗು ಬಾನಂಗಳದ ಎತ್ತರಕ್ಕೆ ಹರಡಿತ್ತು. ಡೋಳ್ಳು ಕುಣಿತ, ಹಲಗೆಯ ಮೇಳ, ಮಕ್ಕಳಿಂದ ಕೋಲಾಟ, ವಿವಿಧ ಕಲೆಯನ್ನು ಪ್ರದರ್ಶಿಸಿ ವೈಭವದಿಂದ ಜ್ಯೋತಿ ರಥ ಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡು ಕೋರಳ್ಳಿಯವರೆಗೆ ಸಾಗಿ ಭವ್ಯ ಮೆರವಣಿಗೆಯ ಮೂಲಕ ಬೀಳ್ಕೊಟ್ಟರು.
ಈ ಒಂದು ರಥಯಾತ್ರೆಯಲ್ಲಿ ಕಂದಾಯ ನಿರೀಕ್ಷಕ ಎ.ಎಂ. ಹತ್ತಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬೋಜು ನಾರಾಯಣಕರ್, ಕ.ಸಾ.ಪ ಅಧ್ಯಕ್ಷ ಶಿವಶರಣ ಗುಂದಗಿ, ಶ್ರೀಶೈಲ ಮಠಪತಿ, ಕೋರಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಪ್ರಕಾಶ ಪಾಟೀಲ, ಮಾಜಿ ಜಿ.ಪಂ ಉಪಾಧ್ಯಕ್ಷ ಸಿದ್ದಾರಾಮ ಪಾಟೀಲ, ಅಶೋಕ ಕೊಳಾರಿ, ರಮೇಶ ಭಂಟನೂರ, ಸಾಧಿಕ್ ಸುಂಬುಡ, ವಹಾಬ್ ಸುಂಬುಡ,ಸದಾಶಿವ ಕೊರಳ್ಳಿ, ಗಂಗಾಧರ ಭೋವಿ, ಅಶೋಕ ತೆಲ್ಲೂರ, ಚೌದರಿ ಸರ್, ಎಂ.ಪಿ.ಬಿಸೆ, ಅವದೂತ ಭಂಡಗಾರ , ಫಾರುಕ್ ಸುಂಬುಡ, ಗಾಂಧಿಗೌಡ ಪಾಟೀಲ, ಉಮೇಶ ಕ್ಷತ್ರಿ, ಶಾಲಾ ಶಿಕ್ಷಕರು ಗುರು ಮಾತೆಯರು, ತಾಲೂಕು ಆಡಳಿತದ ಅಧಿಕಾರಿಗಳು, ರಥಯಾತ್ರೆಯಲ್ಲಿ ಸಂಭ್ರಮಿಸಿದರು.