ರತ್ನಾ ಕುಶನೂರ ನಿಧನಕ್ಕೆ ರವಿ ಸ್ವಾಮಿ ಕಂಬನಿ

ಬೀದರ:ಮಾ.10: ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ದಿ. ರತ್ನಾ ಕುಶನೂರ ಅವರ ನಿಧನಕ್ಕೆ ಏಕತಾ ಫೌಂಡೇಶನ್ ಅಧ್ಯಕ್ಷರು ಹಾಗೂ ಔರಾದ ಕ್ಷೇತದ ಯುವನಾಯಕರಾದ ರವೀಂದ್ರ ಸ್ವಾಮಿ ಕಂಬನಿ ಮಿಡಿದಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರತ್ನಾ ಕುಶನೂರ ಅವರು ಮಾಜಿ ಸಚಿವರು ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ದಿ. ವೀರಶೆಟ್ಟಿ ಕುಶನೂರ ಅವರ ಧರ್ಮಪತ್ನಿ.

ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದ ಅವರು ನಿನ್ನೆ ಕೊನೆಯುಸಿರೆಳೆದರು. ದಿ. ರತ್ನ ಕುಶನೂರ ಹಾಗೂ ಅವರ ಪತಿ ವೀರಶೆಟ್ಟಿ ಕುಶನೂರ ಅವರ ಶ್ರಮ ಈ ಜಿಲ್ಲೆಗೆ ಹಾಗೂ ಔರಾದ ಕ್ಷೇತ್ರಕ್ಕೆ ಬಹಳಷ್ಟಿದ್ದು, ಅವರ ಅಗಲಿಕೆಯಿಂದ ಔರಾದ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಇವರ ಅಗಲಿಕೆಯಿಂದ ಅವರ ಕುಟುಂಬಕ್ಕಾದ ನೋವು ತಡೆದುಕೊಳ್ಳುವ ಶಕ್ತಿ ಭಗವಂತನು ದಯಪಾಲಿಸಲಿ ಎಂದು ಅಮರೇಶ್ವರನಲ್ಲಿ ಪ್ರಾರ್ಥಿಸುವುದಾಗಿ ರವೀಂದ್ರ ಸ್ವಾಮಿ ತಿಳಿಸಿದ್ದಾರೆ.