ಸಿಂಧನೂರು,ಜೂ.೯-
ಕಲುಷಿತ ನೀರು ಕುಡಿದ ಪರಿಣಾಮ ಜನರಿಗೆ ವಾಂತಿ ಬೇಧಿ ಕಾಣಿಸಿಕೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಪ್ರಕರಣ ರತ್ನಾಪುರ ಗ್ರಾಮದಲ್ಲಿ ಕಂಡು ಬಂದಿದ್ದು ಇದರಿಂದ ಗ್ರಾಮದ ಜನರು ಆತಂಕಗೊಂಡಿದ್ದಾರೆ ಸುದೈವ ಯಾವುದೆ ಜೀವ ಹಾನಿಯಾಗದೆ ಇರುವದೆ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.
ಮಸ್ಕಿ ತಾಲೂಕಿನ ತುರ್ವಿಹಾಳ ಸರ್ಕಾರಿ ಆಸ್ಪತ್ರೆಯ ವ್ಯಾಪ್ತಿಯಲ್ಲಿ ಬರುವ ರತ್ನಾಪುರ ಗ್ರಾಮದಲ್ಲಿ ವಾಂತಿ ಬೇಧಿ ಪ್ರಕರಣ ಕಾಣಿಸಿಕೊಂಡಿದೆ ಗ್ರಾಮದಲ್ಲಿರುವ ಶುದ್ದ ಕುಡಿಯುವ ನೀರಿನ ಪೈಪ್ ಒಡೆದು ಕಲುಷಿತ ನೀರನ್ನು ಗ್ರಾಮಸ್ಥರು ಸೇವನೆಯಿಂದ ವಾಂತಿ ಬೇಧಿ ಕಂಡು ಬಂದಿದೆ ಎಂದು ಗ್ರಾಮಸ್ಥರು ಪತ್ರಿಕೆಗೆ ಖಚಿತ ಪಡಿಸಿದರು.
ವಾಂತಿ ಬೇಧಿ ಕಾಣಿಸಿಕೊಂಡು ಬಳಲುತ್ತಿದ್ದ ಹಲವರನ್ನು ತುರ್ವಿಹಾಳ ಸರ್ಕಾರಿ ಆಸ್ಪತ್ರೆ ಹಾಗೂ ತಾವರಗೇರಾ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ವೈದ್ಯರು ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಮುಂದೆ ಯಾವುದೆ ರೀತಿಯ ಪ್ರಕರಣ ಬಾರದಂತೆ ವೈದ್ಯರಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಡಾ. ರಮೇಶ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಾಲೂಕಾ ಆರೋಗ್ಯ ಅಧಿಕಾರಿಯಾದ ಡಾ. ಅಯ್ಯನಗೌಡ ರತ್ನಪುರ ಗ್ರಾಮಕ್ಕೆ ಬೇಟಿ ಜನರಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಕರ್ತವ್ಯ ಲೋಪ ಎಸಗಿದ್ದು ಕಂಡು ಬಂದರೆ ಅಂಥಹ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುಲಾಗುತ್ತೆದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.