ರತ್ನಗಿರಿ ರಚಿಸಿದ ಎರಡು ಪುಸ್ತಕ ಬಿಡುಗಡೆ ಜೂ.23 ರಂದು

ಕಲಬುರಗಿ:ಜೂ.21: ಕವಯತ್ರಿ,ಲೇಖಕಿಯಾಗಿರುವ ಶಿಕ್ಷಕಿ ಲಕ್ಷ್ಮೀದೇವಿ ಶ್ರೀಧರ ರತ್ನಗಿರಿ ಅವರು ರಚಿಸಿದ ಎರಡು ಪುಸ್ತಕಗಳ ಜನಾರ್ಪಣೆ ಸಮಾರಂಭವನ್ನು ಜೂ.23 ರಂದು ಬೆಳಗ್ಗೆ 10-30 ಗಂಟೆಗೆ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಶಿರಪುರ ಪ್ರಕಾಶನ ಸಂಯುಕ್ತವಾಗಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಲಕ್ಷ್ಮೀದೇವಿ ಅವರು ರಚಿಸಿದ ಕವನ ಸಂಕಲನ `ಸಿರಿ’ ಮತ್ತು ಸ್ಪರ್ಧಾರ ಸೋಪಾನ ಪುಸ್ತಕಗಳನ್ನು ಮಾಜಿ ಶಾಸಕ ಅಮರನಾಥ ಪಾಟೀಲ್ ಅವರು ಬಿಡುಗಡೆ ಮಾಡುವರು. ಅಧ್ಯಕ್ಷತೆ ಜಿಪಂ ಮಾಜಿ ಉಪಾಧ್ಯಕ್ಷ ಶ್ರೀಧರ ರತ್ನಗಿರಿ ವಹಿಸುವರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಲಗತಿಪ್ಪಿ, ಅಣ್ಣಾರಾವ ಗಣಮುಖಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀಲೇಖಾ ನಾರಾಯಣ ಆಗಮಿಸುವರು. ನೂತನ ವಿದ್ಯಾಲಯ ಕನ್ಯಾ ಪ್ರೌಢ ಶಾಲೆಯ ಶಿಕ್ಷಕಿ ಗೌತಮಿ ಭೀಮನ್ ಕೃತಿಗಳನ್ನು ಪರಿಚಯಿಸುವರು. ಶಿಕ್ಷಕರಾದ ಉಮಾದೇವಿ ಬಿರಾದಾರ, ಲಕ್ಷ್ಮೀದೇವಿ, ಕಾಂತಣ್ಣ ಡಂಬಳ ಇತರರು ಉಪಸ್ಥಿತರಿರುವರು.ಪ್ರಮೋದಿನಿ ಶೀಲವಂತ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.