ರಣವೀರ್ ಸಿಂಗ್ ಅವರ ಫಿಲ್ಮ್ ’೮೩’ ರ ಭವ್ಯ ಟ್ರೈಲರ್ ಬಿಡುಗಡೆ, ವೀಡಿಯೊದಲ್ಲಿ ೧೯೮೩ ರ ಕ್ರಿಕೆಟ್ ವಿಶ್ವಕಪ್ ನ ಕಿರು ಪಯಣ ವೀಕ್ಷಿಸಿ ಅಭಿಮಾನಿಗಳು ಖುಷ್

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ’೮೩’ ಫಿಲ್ಮ್ ನ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ಟ್ರೇಲರ್ ನ ಬಗ್ಗೆ ನಿರ್ಮಾಪಕರು ಈಗಾಗಲೇ ಅಭಿಮಾನಿಗಳಿಗೆ ತಿಳಿಸಿದ್ದರು. ಈ ಫಿಲ್ಮ್ ನ ಟ್ರೈಲರ್ ಆಗಮನದ ಬಗ್ಗೆ ಸ್ವತಃ ರಣವೀರ್ ಸಿಂಗ್ ತಮ್ಮ ಸೋಶಲ್ ಮೀಡಿಯಾ ಖಾತೆಗಳಲ್ಲಿ ತಿಳಿಸಿದ್ದಾರೆ.
ಟ್ರೈಲರ್ ನೋಡಿದ ನಂತರ ಎಲ್ಲರಿಗೂ ಆಸಕ್ತಿ ಹೆಚ್ಚುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಫಿಲ್ಮ್ ನೋಡುವ ಕಾತುರ ಈ ಟ್ರೈಲರ್ ನ ಕಾರಣ ಹೆಚ್ಚುತ್ತಿದೆ. ಟ್ರೈಲರ್‌ನಲ್ಲಿ, ರಣವೀರ್ ಸಿಂಗ್ ಮತ್ತು ಕಪಿಲ್ ದೇವ್ ನಡುವೆ ಸಾಮ್ಯತೆ ಇರುವ ಕಾರಣ ಯಾರು ಕಪಿಲ್ ಯಾರು ರಣವೀರ್ ಎನ್ನುವ ಬಗ್ಗೆ ಎಲ್ಲರೂ ಗೊಂದಲಕ್ಕೆ ಒಳಗಾಗಲಿದ್ದಾರೆ.
೩.೪೯ ನಿಮಿಷಗಳ ಕಾಲ ಇರುವ ಟ್ರೈಲರ್ ೧೯೮೩ ರ ಕ್ರಿಕೆಟ್ ನ ಸಣ್ಣ ಪ್ರಯಾಣವನ್ನು ಚಿತ್ರಿಸುತ್ತದೆ. ಫಿಲ್ಮ್ ನ ಕಥೆಯು ೧೯೮೩ ರ ಕ್ರಿಕೆಟ್ ವಿಶ್ವಕಪ್ ಅನ್ನು ಆಧರಿಸಿದೆ, ಇದರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಲಾರ್ಡ್ಸ್‌ನಲ್ಲಿ ಮೊದಲ ವಿಶ್ವಕಪ್ ಗೆದ್ದಿತು. ಇಡೀ ಟ್ರೈಲರ್ ನೇರವಾಗಿ ಹೃದಯವನ್ನು ಮುಟ್ಟುತ್ತದೆ. ವಿಶೇಷವೆಂದರೆ ಟ್ರೈಲರ್‌ನಲ್ಲಿ ರಣವೀರ್ ಸಿಂಗ್ ಜೊತೆಗೆ ದೀಪಿಕಾ ಪಡುಕೋಣೆ ಕೂಡ ಕಾಣಿಸಿಕೊಂಡಿದ್ದಾರೆ.
’೮೩’ ಫಿಲ್ಮ್ ನಲ್ಲಿ ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿದ್ದರೆ, ಕಪಿಲ್ ಪತ್ನಿ ರೋಮಿ ಭಾಟಿಯಾ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.
ಟ್ರೈಲರ್ ಬಂದ ತಕ್ಷಣ ಸೋಶಲ್ ಮೀಡಿಯಾದಲ್ಲಿ ಬೆಂಕಿಯಂತೆ ವ್ಯಾಪಿಸಿ ಕೊಂಡಿದೆ. ಅಭಿಮಾನಿಗಳು ಕೂಡ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಣವೀರ್ ಸಿಂಗ್ ಗೆ ಯಾವುದೇ ಪಾತ್ರ ನೀಡಿ, ಅಭಿಮಾನಿಗಳು ಅವರನ್ನು ಮೆಚ್ಚುತ್ತಾರೆ. ’೮೩’ ಫಿಲ್ಮ್ ನಲ್ಲಿ ತಾಹಿರ್ ರಾಜ್ ಭಾಸಿನ್, ಪಂಕಜ್ ತ್ರಿಪಾಠಿ, ಸಾಕಿಬ್ ಸಲೀಂ, ಜತಿನ್ ಸರ್ನಾ, ಹಾರ್ಡಿ ಸಂಧು, ಆಮಿ ವರ್ಕಿ, ಸಾಹಿಲ್ ಖಟ್ಟರ್ ಮತ್ತು ಆರ್ ಬದ್ರಿ ಮುಂತಾದ ಸ್ಟಾರ್ ಗಳು ಅಭಿನಯಿಸಿದ್ದಾರೆ .ಹಿಂದಿ ಮಾತ್ರವಲ್ಲದೆ, ಈ ಫಿಲ್ಮ್ ಡಿಸೆಂಬರ್ ೨೪ ರಂದು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ.

ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ಟ್ ಸ್ನೇಹಿತರಂತೆ

ಬಾಲಿವುಡ್‌ನಲ್ಲಿ ಇಬ್ಬರು ನಟಿಯರ ನಡುವಿನ ಆಳವಾದ ಸ್ನೇಹ ಅಪರೂಪವಾಗಿ ಕಂಡುಬರುತ್ತದೆ. ಮತ್ತು ಇಬ್ಬರು ನಟಿಯರ ವಿಷಯಕ್ಕೆ ಬಂದರೆ ಅದನ್ನು ನಂಬುವುದು ತುಂಬಾ ಕಷ್ಟವೂ ಆಗಬಹುದು!
ಆದರೆ ಇದು ಆಲಿಯಾ ಭಟ್ಟ್ ಮತ್ತು ಕತ್ರಿನಾ ಕೈಫ್ ಅವರ ಸ್ನೇಹದ ವಿಷಯದಲ್ಲಿ ನಂಬಲೇ ಬೇಕು.


ಹೌದು, ಆಲಿಯಾ ಭಟ್ಟ್ ಮತ್ತು ಕತ್ರಿನಾ ಕೈಫ್ ತುಂಬಾ ಒಳ್ಳೆಯ ಸ್ನೇಹಿತರು ಮತ್ತು ಶೀಘ್ರದಲ್ಲೇ ಅವರು ತೆರೆಯ ಮೇಲೆ ಫಿಲ್ಮ್ ನಲ್ಲಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರ ನಡುವಿನ ಬಾಂಧವ್ಯ ನೋಡಿ ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ.
ಅಭಿಮಾನಿಗಳು ಹೇಳುವಂತೆ ಕತ್ರಿನಾ ಮತ್ತು ಆಲಿಯಾರ ನಡುವೆ ರಣಬೀರ್ ಕಪೂರ್ ಪ್ರವೇಶದ ನಂತರ ಅವರ ಸಂಬಂಧವು ಹದಗೆಟ್ಟಿರುವ ಸಾಧ್ಯತೆಯನ್ನು ಅಭಿಮಾನಿಗಳು ನಂಬುತ್ತಾರೆ.
ವಾಸ್ತವವಾಗಿ ಕತ್ರಿನಾ ಜೊತೆ ಡೇಟಿಂಗ್ ಮಾಡಿದ್ದ ರಣಬೀರ್, ಈಗ ಆಲಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
ಒಂದು ಕಾಲದಲ್ಲಿ ತುಂಬಾ ಹತ್ತಿರವಾಗಿದ್ದರೂ ಕತ್ರಿನಾ-ಆಲಿಯಾ ಈ ಹಿಂದೆ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಚಾಟ್ ಶೋ ಒಂದರಲ್ಲಿ ಆಪ್ತ ಗೆಳತಿಯರಾಗಿ ಕಾಣಿಸಿಕೊಂಡಿರುವ ಈ ನಟಿಯರು ಆ ವೇಳೆ ಪರಸ್ಪರ ತಮಾಷೆಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಆಲಿಯಾ ಪ್ರಕಾರ, ಕತ್ರಿನಾ ಮೆಸೇಜ್ ಗಳಿಗೆ ಸರಿಯಾದ ರೀತಿಯಲ್ಲಿ ಉತ್ತರಿಸುವುದಿಲ್ಲವಂತೆ. ಅದೇ ಸಮಯದಲ್ಲಿ, ಕತ್ರಿನಾ ಕೂಡ ಆಲಿಯಾರ ಬಗ್ಗೆ ಹೇಳುತ್ತಾ-ಆನ್‌ಲೈನ್‌ನಲ್ಲಿ ಸಂದೇಶವನ್ನು ಓದಿದ್ದರೂ, ಅನೇಕ ಬಾರಿ ಆಲಿಯಾ ಮೆಸೇಜ್ ಗಳಿಗೆ ಬೇಗ ಪ್ರತಿಕ್ರಿಯಿಸುವುದೇ ಇಲ್ಲ.
ಕತ್ರಿನಾ ತನ್ನ ಭಾವನೆಗಳ ಬಗ್ಗೆ ಹೆಚ್ಚು ಮಾತನಾಡದಿರುವುದು ನನಗೆ ಇಷ್ಟವಿಲ್ಲ ಎಂದು ಆಲಿಯಾ ಹೇಳುತ್ತಾರೆ.
ರಣಬೀರ್ ಮತ್ತು ಆಲಿಯಾ ಇಬ್ಬರ ಪ್ರೇಮಕಥೆಯು ಮುಂಬರುವ ಫಿಲ್ಮ್ ’ಬ್ರಹ್ಮಾಸ್ತ್ರ’ ದ ಸೆಟ್‌ನಲ್ಲಿ ಪ್ರಾರಂಭವಾಯಿತು . ಅದರ ನಂತರ ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ಇಬ್ಬರೂ ನ್ಯೂಯಾರ್ಕ್‌ನಲ್ಲಿ ರಣಬೀರ್ ಅವರ ಪೋಷಕರೊಂದಿಗೆ ಸಾಕಷ್ಟು ಗುಣಮಟ್ಟದ ಸಮಯವನ್ನು ಕಳೆದಿದ್ದಾರೆ. ಈ ಸಂಬಂಧದಿಂದ ಇಬ್ಬರ ಕುಟುಂಬದವರೂ ಖುಷಿಯಾಗಿದ್ದಾರೆ. ಮುಂದಿನ ವರ್ಷ ಅವರ ಮದುವೆಯ ವದಂತಿಗಳು ಕೇಳಿ ಬಂದಿವೆ. ಈಗ ಈ ಜೋಡಿ ಯಾವಾಗ ಮದುವೆ ಆಗುತ್ತೋ ನೋಡಬೇಕು. ಇನ್ನೊಂದೆಡೆ ಈ ದಿನಗಳಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ ಸುದ್ದಿಯೂ ಜೋರಾಗಿ ಕೇಳಿಬರುತ್ತಿದೆ.

ರಣವೀರ್ ಸಿಂಗ್ ಮತ್ತು ಕತ್ರಿನಾ ಕೈಫ್ ಫಿಲ್ಮ್ ಗಳ ನಡುವೆ ತೀವ್ರ ಪೈಪೋಟಿ ೨೦೨೨ ರಲ್ಲಿ ಒಂದೇ ದಿನ ’ಸರ್ಕಸ್’ ಮತ್ತು ’ಫೋನ್ ಭೂತ್’ ಫಿಲ್ಮ್ ಗಳ ಬಿಡುಗಡೆ

ಒಂದೂವರೆ ವರ್ಷಗಳ ನಂತರ ಮತ್ತೊಮ್ಮೆ ಬಿಗ್ ಸ್ಕ್ರೀನ್ ಮೇಲೆ ಒಂದರ ಹಿಂದೆ ಒಂದರಂತೆ ಫಿಲ್ಮ್ ಗಳು ಬಿಡುಗಡೆಯಾಗುತ್ತಿವೆ. ಇಲ್ಲಿಯವರೆಗೆ ಅನೇಕ ಫಿಲ್ಮ್ ಗಳು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿವೆ, ಕೆಲವು ಬಿಡುಗಡೆಗೆ ಕಾದುಕೂತಿವೆ.
ಈ ನಡುವೆ ರಣವೀರ್ ಸಿಂಗ್ ಮತ್ತು ಕತ್ರಿನಾ ಕೈಫ್ ಅವರ ಫಿಲ್ಮ್ ಗಳೂ ಸಹ ಮುಂದಿನ ವರ್ಷ ಬಿಡುಗಡೆಯಾಗಲಿವೆ. ರಣವೀರ್ ಸಿಂಗ್ ಅಭಿನಯದ ‘ಸರ್ಕಸ್’ ಹಾಗೂ ಕತ್ರಿನಾ ಕೈಫ್ ಅಭಿನಯದ ‘ಫೋನ್ ಭೂತ್’ ಫಿಲ್ಮ್ ಗಳ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಇಬ್ಬರೂ ಸ್ಟಾರ್‌ಗಳ ಫಿಲ್ಮ್ ಗಳ ನಡುವೆ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಘರ್ಷಣೆ ಕಂಡು ಬರಲಿದೆ.


ಟ್ರೇಡ್ ವಿಶ್ಲೇಷಕರು ಟ್ವೀಟ್ ಮಾಡುವ ಮೂಲಕ ಚಿತ್ರಗಳ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ನೀಡಿದ್ದಾರೆ.
ಕತ್ರಿನಾ ಕೈಫ್, ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಖ್ಯಾತಿಯ ’ಫೋನ್ ಭೂತ್’ ಮುಂದಿನ ವರ್ಷ ಜುಲೈ ೧೫, ೨೦೨೨ ರಂದು ಬಿಡುಗಡೆಯಾಗಲಿದೆ .ಕತ್ರಿನಾ ಕೈಫ್, ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಅಭಿನಯದ ’ಫೋನ್ ಭೂತ್’ ಚಿತ್ರದ ಚಿತ್ರೀಕರಣ ಕಳೆದ ವರ್ಷ ನಡೆದಿತ್ತು. ಗುರ್ಮೀತ್ ಸಿಂಗ್ ನಿರ್ದೇಶನದ, ’ಫೋನ್ ಭೂತ್’ ನಲ್ಲಿ ಕತ್ರಿನಾ ಕೈಫ್ ಜೊತೆಗೆ ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮತ್ತೊಂದೆಡೆ, ರೋಹಿತ್ ಶೆಟ್ಟಿ ನಿರ್ದೇಶನದ ’ಸರ್ಕಸ್’ ಕೂಡಾ ಮುಂದಿನ ವರ್ಷ ಜುಲೈ ೧೫, ೨೦೨೨ ರಂದು ಬಿಡುಗಡೆಯಾಗಲಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ರೋಹಿತ್ ಜೊತೆ ರಣವೀರ್ ಸಿಂಗ್ ನಟಿಸುತ್ತಿರುವ ಮೂರನೇ ಚಿತ್ರ ಇದಾಗಿದೆ. ’ಸಿಂಬಾ’ ಮತ್ತು ’ಸೂರ್ಯವಂಶಿ’ ನಂತರ ಇದೀಗ ’ಸರ್ಕಸ್’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಜಾಕ್ವೆಲಿನ್ ಫರ್ನಾಂಡೀಸ್, ವರುಣ್ ಶರ್ಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ’ಸರ್ಕಸ್’ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಕತ್ರಿನಾ ಕೈಫ್ ’ಫೋನ್ ಭೂತ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ತೆರೆಯ ಮೇಲೆ ಯಾರ ಅದೃಷ್ಟ ಓಡಲಿದೆ ನೋಡಬೇಕು.