ರಣವೀರ್ -ದೀಪಿಕಾ ವಿಚ್ಛೇದನ ವದಂತಿಗೆ ತೆರೆ

ಮುಂಬೈ,ಜು.೧೦-ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಾಲಿವುಡ್ ಅತ್ಯಂತ ಮುದ್ದಾದ ಜೋಡಿಗಳಲ್ಲಿ ಒಂದು. ಈ ಪ್ರೇಮ ಪಕ್ಷಿಗಳು ಪರಸ್ಪರ ಸುಧೀರ್ಘ ಕಾಲ ಡೇಟಿಂಗ್ ನಡೆಸಿ ಮತ್ತು ಅಂತಿಮವಾಗಿ ೨೦೧೮ ರಲ್ಲಿ ವಿವಾಹ ಬಂಧನದಲ್ಲಿ ಸಿಲುಕಿ ಕುಂದಿಲ್ಲದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ವಿವಾಹದ ನಂತರ ಈ ಜೋಡಿ ಫೈಂಡಿಂಗ್ ಫ್ಯಾನಿ, ರಾಮ್-ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ ಮತ್ತು ೮೩ ನಂತಹ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ತೆರೆ ಹಂಚಿ ಕೊಂಡಿದ್ದಾರೆ. ರಣವೀರ್ ೨೦೧೦ ರಲ್ಲಿ ಬ್ಯಾಂಡ್ ಬಾಜಾ ಬಾರಾತ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಈ ಪ್ರಮುಖ ಜೋಡಿ ಬಾಲಿವುಡ್ ಅತ್ಯಂತ ಯಶಸ್ವಿ ಎಂದು ಗುರುತಿಸಲ್ಪಡುವ ಜೋಡಿಯಾಗಿದ್ದಾರೆ.
ಹೇಗೆ ಇದ್ದು ಕೂಡಾ ರಣವೀರ್ ಮತ್ತು ದೀಪಿಕಾ ನಡುವೆ ಮನಸ್ತಾಪವಿದೆಯೇ ಎಂಬ ಅನುಮಾನ ಎಲ್ಲರಲ್ಲೂ ಮೂಡಿತ್ತು. ಕಳೆದ ಕೆಲವು ದಿನಗಳಿಂದ, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬೇರ್ಪಡುವ ಬಗ್ಗೆ ವದಂತಿಗಳು ಬಾಲಿವುಡ್ ಅಂಗಳದಲ್ಲಿ ಸುತ್ತುತ್ತಲೇ ಇವೆ. ಆದರೆ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ದೀಪಿಕಾ ತಮ್ಮ ವಿಹಾರದ ಫೋಟೋ ಹಂಚಿಕೊಳ್ಳುವ ಮೂಲಕ ಬಹುತೇಕ ಎಲ್ಲಾ ವದಂತಿಗಳಿಗೆ ತಣ್ಣೀರು ಎರಚಿ ವಿವಾಹ ವಿಚ್ಛೇದನ ಸುಳ್ಳು ಸುದ್ದಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಇತ್ತೀಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಅವರು, ಹೊಸ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಜೊತೆಗೆ ಹಡಗಿನಲ್ಲಿ ಪ್ರಯಾಣಿಸುತ್ತಿರುವ ಕಪ್ಪು ಮತ್ತು ಬಿಳಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ರಣವೀರ್ ತಮ್ಮ ಹುಟ್ಟುಹಬ್ಬದಂದು ತಮ್ಮಗೆ ಶುಭಾಶಯಗಳನ್ನು ಕೋರಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ರಣವೀರ್ ಅವರ ಮುಂಬರುವ ಚಿತ್ರ
ರಣವೀರ್ ಮುಂದಿನ ರೋಮ್ಯಾಂಟಿಕ್ ಚಿತ್ರ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ನಟಿ ಆಲಿಯಾ ಭಟ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಕರಣ್ ಜೋಹರ್ ಅವರ ನಿರ್ದೇಶನದ ಈ ಚಿತ್ರವು ಜುಲೈ ೨೮ ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಇದರಲ್ಲಿ ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಇತರರು ನಟಿಸಿದ್ದಾರೆ.
ದೀಪಿಕಾ ಮುಂದಿನ ಆಕ್ಷನ್ ಥ್ರಿಲ್ಲರ್ ಚಿತ್ರ ಪ್ರಾಜೆಕ್ಟ್ ಕೆ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್ ಮತ್ತು ದಿಶಾ ಪಟಾನಿ ಕೂಡ ನಟಿಸಿದ್ದಾರೆ. ವರದಿಗಳ ಪ್ರಕಾರ, ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದಲ್ಲಿ ದೀಪಿಕಾ ವಿಶೇಷ ನೃತ್ಯದ ದೃಶ್ಯವಿದೆ ಎನ್ನಲಾಗಿದೆ.ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಹೈ-ಆಕ್ಟೇನ್ ಆಕ್ಷನ್ ಸೀಕ್ವೆನ್ಸ್‌ಗಳೊಂದಿಗೆ ಯೋಜನೆಯಾಗಿದೆ. ಇದು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.
ಅವರು ಸಿದ್ಧಾರ್ಥ್ ಆನಂದ್ ಅವರ ಮುಂದಿನ ವೈಮಾನಿಕ ಆಕ್ಷನ್ ಥ್ರಿಲ್ಲರ್ ಚಿತ್ರ ಫೈಟರ್ ನಲ್ಲಿ ಹೃತಿಕ್ ರೋಷನ್ ಎದುರು ಪೈಪ್‌ಲೈನ್‌ನಲ್ಲಿ ನಟಿಸಲಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ವರ್ಷದ ಅತಿ ದೊಡ್ಡ ಹಿಟ್, ಪಠಾನ್ ನೀಡಿದ ನಂತರ ಇದು ಅವರ ಎರಡನೇ ಚಿತ್ರವಾಗಿದೆ. ಫೈಟರ್ ಮುಂದಿನ ವರ್ಷ ಜನವರಿ ೨೫ ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಕೂಡ ಇದ್ದಾರೆ.