ರಣವೀರ್ ಡಾನ್ ೩ ನಾಯಕ

ಮುಂಬೈ,ಅ.೧೭-ಫರ್ಹಾನ್ ಅಖ್ತರ್ ಕಳೆದ ವಾರ ಬಹು ನಿರೀಕ್ಷಿತ ಚಿತ್ರ ಡಾನ್ ೩ ಬಗ್ಗೆ ಅಧಿಕೃತವಾಗಿ ಹಲವಾರು ಘೋಷಣೆಗಳನ್ನು ಮಾಡಿದ್ದರು. ಅವರು ಹೊಸ ಡಾನ್ ಆಗಿ ರಣವೀರ್ ಸಿಂಗ್ ಅವರ ಫಸ್ಟ್ ಲುಕ್ ಬಹಿರಂಗಪಡಿಸಿದರು ಅದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸಂಚಲನ ಸೃಷ್ಟಿಸಿತ್ತು.
ಡಾನ್ ೩’ ಚಿತ್ರದಿಂದ ಶಾರುಖ್ ಖಾನ್ ಹೊರನಡೆದಿದ್ದಾರೆ ಎಂಬ ವಿಚಾರ ಈ ಮೊದಲೇ ವರದಿ ಆಗಿತ್ತು. ಆದರೆ, ಇದನ್ನು ಚಿತ್ರತಂಡದವರು ಅಧಿಕೃತಪಡಿಸರಲಿಲ್ಲ ಇತ್ತೀಚೆಗೆ ಹೊಸ ವಿಡಿಯೋ ಹಂಚಿಕೊಂಡು ಈ ವಿಚಾರವನ್ನು ಖಚಿತಪಡಿಸಲಾಗಿದೆ. ಶಾರುಖ್ ಖಾನ್ ಜಾಗಕ್ಕೆ ರಣವೀರ್ ಸಿಂಗ್ ಅವರನ್ನು ಕರೆತರಲಾಗಿದೆ. ಡಾನ್’ ಹಾಗೂ ಡಾನ್ ೨ ಚಿತ್ರಗಳನ್ನು ನಿರ್ದೇಶಿಸಿ ಫರ್ಹಾನ್ ಅಖ್ತರ್ ಫೇಮಸ್ ಆಗಿದ್ದಾರೆ. ಅವರು ಮೂರನೇ ಪಾರ್ಟ್‌ಗೂ ನಿರ್ದೇಶನ ಮಾಡಲಿದ್ದಾರೆ. ಶಾರುಖ್ ಖಾನ್ ಇಲ್ಲದ ’ಡಾನ್’ ಸರಣಿಯನ್ನು ಅಭಿಮಾನಿಗಳು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಸದ್ಯ ಅಭಿಮಾನಿಗಳಲ್ಲಿದೆ.
ಹೊಸ ಡಾನ್ ರಣವೀರಸಿಂಗ್ ಅವರನ್ನು ಶಾರೂಕ್ ಅಭಿಮಾನಿಗಳು ಒಪ್ಪಲಿಲ್ಲ, ಜೊತೆಗೆ ಸಾಕಷ್ಟು ಟೀಕೆಗಳು ಸುರಿಮಳೆಯೇ ಸುರಿಸಿದ್ದಾರೆ.
ಇದೀಗ ಈ ಬಗ್ಗೆ ಫರ್ಹಾನ್ ಅಖ್ತರ್ ರಣವೀರ್ ಸಿಂಗ್ ಆಯ್ಕೆ ಕುರಿತು ಮೌನ ಮುರಿದಿದ್ದಾರೆ.
ಡಾನ್ ಚಿತ್ರದಿಂದ ಹೊರನಡೆಯುವುದು ಶಾರುಖ್ ಖಾನ್ ಅವರ ಸ್ವಂತ ನಿರ್ಧಾರ ಎಂದು ಫರ್ಹಾನ್ ಅಷ್ಟೇ ಅಲ್ಲ, ಹೊಸ ಡಾನ್‌ಗೆ ರಣವೀರ್ ಸಿಂಗ್ ಹೆಸರನ್ನು ಸ್ವತಃ ಶಾರುಖ್ ಸೂಚಿಸಿದ್ದರು ಎಂಬ ವಿಷಯ ಬಹಿರಂಗ ಪಡಿಸಿದ್ದಾರೆ.
ಅಭಿಮಾನಿಗಳು ರಣವೀರಸಿಂಗ್ ಅಭಿನಯದ ಶೈಲಿಯನ್ನು ಇಷ್ಟಪಟ್ಟಿದ್ದಾರೆ ಮತ್ತು ರಣವೀರ್ ಡಾನ್ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ ಎಂದು ಮನವರಿಕೆ ಮಾಡಿಕೊಟ್ಟರು .
ರಣವೀರಸಿಂಗ್ ಅವರಲ್ಲಿ ಆತ್ಮವಿಶ್ವಾಸವಿದೆ , ಮತ್ತು ನಮಗೆ ಬೇಕಾದ ನಟನೆಯನ್ನು ಮಾಡುವ ಸಾಮರ್ಥ್ಯ.ಕೌಶಲ್ಯ,ಕಲೆ ಇದೆ ಡಾನ್ ಪಾತ್ರಕ್ಕೆ ಬೇಕಾದ ಎಲ್ಲಾ ಅರ್ಹತೆ, ರಣವೀರಸಿಂಗ್ ನನ್ನ ಡಾನ್ ಪಾತ್ರಕ್ಕೆ ಹೇಳಿ ಮಾಡಿಸಿದ ವ್ಯಕ್ತಿ ಎಂದು ಫರ್ಹಾನ್ ಅಖ್ತರ್ ರಣವೀರಸಿಂಗ್ ಸಿಂಗ್ ಅವರನ್ನು ಹಾಡಿ ಹೊಗಳಿದ್ದಾರೆ.
ಅವರು ಡಾನ್ ೩ ಬಗ್ಗೆ ಹಲವು ವಿವರಗಳನ್ನು ಹಂಚಿಕೊಂಡಿದ್ದಾರೆ.
ಹಿಂದಿನ ಡಾನ್ ಚಿತ್ರದಲ್ಲಿ ಬಚ್ಚನ್ ಬದಲಿಗೆ ಶಾರುಖ್ ಡಾನ್ ಆಗಿ ಬದಲಾಯಿಸಿದಾಗ ಇದೇ ರೀತಿಯ ಅನುಭವವನ್ನು ಅನುಭವಿಸಬೇಕಾಯಿತು ಎಂದು ಅವರು ಬಹಿರಂಗಪಡಿಸಿದರು.
ಫರ್ಹಾನ್ ಅಖ್ತರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಡಾನ್ ೩ ೨೦೨೫ ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.