ರಣಮಳೆಯಿಂದ ಭಾರಿ ಗಾತ್ರದ ಬಂಡೆ ಕುಸಿತ

ಬೆಂಗಳೂರು,ಸೆ.೧೦-ನಗರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ರಣಮಳೆಯಿಂದ ರಾಜರಾಜೇಶ್ವರಿನಗರದಲ್ಲಿ ಭಾರಿ ಗಾತ್ರದ ಬಂಡೆ ಕುಸಿದಿದೆ.
ಬಂಡೆ ಕುಸಿತದ ರಭಸಕ್ಕೆ ಭೂಮಿ ನಡುಗಿದ ಅನುಭವವಾಗಿದೆ.ಆದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಾಜರಾಜೇಶ್ವರಿ ನಗರದ ಗಿರಿಧಾಮ ಬಡಾವಣೆಯಲ್ಲಿ ೨೦ ಟನ್ ತೂಕದ ಬಂಡೆ ಜಾರಿ ಬಿದ್ದಿರುವುದರಿಂದ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.ಬಂಡೆ ಕುಸಿದರೂ ಉರುಳಿದ ಕಲ್ಲು ಅರ್ಧದಲ್ಲೇ ಸಿಲುಕಿಕೊಂಡಿರುವುದರಿಂದ ಮನೆಗಳಿಗೆ ಬಡಿಯದಿರುವುದರಿಂದ ಸುತ್ತಮುತ್ತಲ ಜನ ಆತಂಕದಿಂದ ದೂರ ಆಗಿದ್ದಾರೆ.ಅರ್ಧದಲ್ಲೇ ಸಿಲುಕಿಕೊಂಡಿರುವ ಬಂಡೆ ಯಾವುದೇ ಸಂದರ್ಭದಲ್ಲಿ ಜಾರಿ ಬೀಳುವ ಸಂಭವವಿದೆ. ಆದರೂ ಇದುವರೆಗೂ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಮೊಂಡಾಟ ಮೆರೆದಿದ್ದಾರೆ.
ಬಂಡೆ ಕುಸಿತದಿಂದ ಆತಂಕಕ್ಕೆ ಒಳಗಾಗಿರುವ ಸ್ಥಳೀಯರು ಪುರಾತತ್ವ ಇಲಾಖೆಗೆ ನೂರು ಸಲ ಕರೆ ಮಾಡಿದ್ರೂ ಆ ಕಡೆಯಿಂದ ನೋ ರಿಪ್ಲೇ. ಮತ್ತೆ ಮಳೆಯಾದರೆ ಇಲ್ಲವೆ ಬಂಡೆ ಇರುವ ಜಾಗ ಕುಸಿದರೆ ಯಾವಾಗ ಬೇಕಾದ್ರೂ ಬಂಡೆ ಮತ್ತೆ ಜಾರುವ ಆತಂಕ ಇರುವುದರಿಂದ ಅಕ್ಕಪಕ್ಕದ ನಿವಾಸಿಗಳು ಜೀವಭಯದಿಂದ ಜೀವನ ಸಾಗಿಸುವಂತಾಗಿದೆ.