ರಣಭೇಟೆ ಟೀಸರ್‌ ಬಿಡುಗಡೆ

ಗ್ರಾಮೀಣ ಪ್ರತಿಭೆಗಳೇ ಹೆಚ್ಚಾಗಿರುವ  “ರಣಭೇಟೆ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಮಾಜ ಸೇವಕ, ಗೋಪಾಲ ರೆಡ್ಡಿ ಚಿತ್ರಕ್ಕೆ ಶುಭ ಹಾರೈಸಿರುವುದು ಚಿತ್ರತಂಡದ ಮುಖದಲ್ಲಿ ಮಂದಹಾಸ  ಮೂಡಿಸಿದೆ.

ಖಳನಾಯಕನ ಪಾತ್ರಧಾರಿ ಬಾಬು ನಟನೆ ನೋಡುಗರನ್ನು  ಆಕರ್ಷಿಸುತ್ತದೆ.ನಾಯಕನಟ ಸೂರ್ಯ  ನಟನೆ ಚಿತ್ರಕ್ಕಿದ್ದು ಒಳ್ಳೆಯದಾಗಲಿದೆ ಎಂದರು ಗೋಪಾಲ ರೆಡ್ಡಿ ಹರಸಿದರು

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ದಾಸರಹೊಸಹಳ್ಳಿ ಗ್ರಾಮದಲ್ಲಿ ಜನಿಸಿದ ಯುವಪ್ರತಿಭೆಗಳು  ಕಲಾನೈಪುಣ್ಯದಿಂದ ಕನ್ನಡ ಚಿತ್ರರಂಗದಲ್ಲಿ ದಾಪುಗಾಲು ಹಾಕಿದ್ದಾರೆ, ಅವರ ಕಠಿಣಪರಿಶ್ರಮದಿಂದಾಗಿ ಚಲನಚಿತ್ರ  ಬಿಡುಗಡೆಗೆ ಸಿದ್ಧವಾಗಿದೆ ಎಂದು ಕೇಳಿಕೊಂಡರು

:ನಾಯಕ ನಟ ರವಿ  ಮಾತನಾಡಿ ಅನೇಕ ಕಷ್ಟ ಮೆಟ್ಟಿನಿಂತು ಚಿತ್ರೀಕರಣ ಮಾಡಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ತಂಗಿಯ ಪ್ರೀತಿ, ವಾತ್ಸಲ್ಯ, ಮಮಕಾರ, ಹಾಗೂ ಕೌಟುಂಬಿಕ ಹಿನ್ನೆಲೆಯಾಧಾರಿತ ಚಿತ್ರವಾಗಿದೆ, ಚಿತ್ರ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ, ಯಾವುದೇ ದೊಡ್ಡ ಬಜೆಟ್  ಚಿತ್ರಕ್ಕಿಂತ ಕಡಿಮೆ‌ ಇಲ್ಲದೆ ಮಾಡಿದ್ದೇವೆ ಎಂದರು

ನಟಿ, ನಿರ್ಮಾಪಕಿ ಮೀನಾಕ್ಷಿ  ಮಾತನಾಡಿ ಸೂರ್ಯ , ಬಡತನ ಹಾಗೂ ಗ್ರಾಮೀಣ ಭಾಗದಲ್ಲಿ ಅರಳಿದ ಕಲಾಪ್ರತಿಭೆ “ರಣಭೇಟೆ” ಅದ್ಬುತ ಚಿತ್ರವಾಗಿದೆ,  ಈಗಾಗಲೇ “ಕೆಜಿಎಫ್ ರಿಯಲ್ ಸ್ಟೋರಿ” ಎಂಬ ಚಿತ್ರಕಥೆ ಸಿದ್ಧವಾಗಿದೆ , ಕೋಲಾರದ ಸೂರ್ಯ ನಾಯಕ ನಟರಾಗಿದ್ದು ಆದಷ್ಟು ಬೇಗ ಚಿತ್ರೀಕರಣ  ಆರಂಭಿಸಲಾಗುವುದು ಎಂದರು.

” ಬಾರೆ ಬಾರೆ ಬಂಗಾರಪೇಟೆ ಬಂಗಾರಿ” ಗೀತೆ ಬಿಡುಗಡೆ ಮಾಡಲಾಯಿತು,  ನಟಿ ಹರ್ಷಿತ ಗೌಡ. ಕಲಾವಿದರಾದ ವಿಕ್ರಮಾದಿತ್ಯ. ಹರೀಶ್ ಬಾಬು. ಶೃತಿ. ನಿರ್ದೇಶಕ ರವಿಕುಮಾರ್. ಜೀವನ್ ರೆಡ್ಡಿ. ಸಂಗೀತ ನಿರ್ದೇಶಕ ಕ್ಲಾರಿನೆಸ್ ಆನ್ಲೈನ್ ಕ್ರಸ್ಟ್ .  ಗೋವಿಂದ. ದೀಪ. ಕಿರಣ್. ಇತರರು ಉಪಸ್ಥಿತರಿದ್ದರು.