ರಣಬೀರ್ ನಟನೆಗೆ ಅಲಿಯಾ ಸಹಾಯ

ಮುಂಬೈ,ನ.೨೯-ಬಾಲಿವುಡ್ ನ ಖ್ಯಾತ ನಟರಲ್ಲಿ ಒಬ್ಬರಾದ ರಣಬೀರ್ ಕಪೂರ್ ಸದ್ಯ ತಮ್ಮ ಅನಿಮಲ್ ಚಿತ್ರದ ಬಿಡುಗಡೆಯ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಬಿಡುಗಡೆಯ ದಿನಾಂಕ ಹತ್ತಿರ ಬರುತ್ತಿದ್ದು, ದಿನದಿಂದ ದಿನಕ್ಕೆ ಚಿತ್ರದ ಕುರಿತು ಪ್ರೇಕ್ಷಕರ ಹೃದಯ ಬಡಿತ ಹೆಚ್ಚಾಗುತ್ತಿದೆ.ಅನಿಮಲ್ ಚಿತ್ರತಂಡ ತಮ್ಮ ಚಿತ್ರದ ಪ್ರಚಾರದಲ್ಲಿ ನಿರತವಾಗಿದೆ ಚಿತ್ರದ ನಾಯಕ ರಣಬೀರ್ ಕಪೂರ್ ಅವರು ಅನಿಮಲ್ ದೃಶ್ಯಗಳನ್ನು ಚಿತ್ರೀಕರಿಸಲು ಆಲಿಯಾ ಭಟ್ ಹೇಗೆ ಸಹಾಯ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಅನಿಮಲ್’ ಚಿತ್ರದ ಟ್ರೈಲರ್ ಬಿಡುಗಡೆಯಾದಾಗಿನಿಂದ ರಣಬೀರ್ ಕಪೂರ್ ಚಿತ್ರದಲ್ಲಿ ತಮ್ಮ ಹೊಸ ಅವತಾರದಿಂದ ತಮ್ಮ ಎಲ್ಲಾ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ. ಈಗ ಎಲ್ಲರೂ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಮುಂಗಡ ಬುಕ್ಕಿಂಗ್ ನಲ್ಲಿಯೂ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನಿಮಲ್ ಚಿತ್ರದಲ್ಲಿ ಸಾಕಷ್ಟು ಹಿಂಸಾತ್ಮಕ ದೃಶ್ಯಗಳಿವೆ ಆದರೆ ಈ ದೃಶ್ಯಗಳನ್ನು ಮಾಡಲು ನಟನಿಗೆ ಸಹಾಯ ಮಾಡಿದವರು ಯಾರು ಎಂದು ಎಂದು ಗೊತ್ತೇ.ಈ ದೃಶ್ಯಗಳ ಚಿತ್ರೀಕರಣದಲ್ಲಿ ತನಗೆ ಪತ್ನಿ ಆಲಿಯಾ ಭಟ್ ಸಹಾಯ ಮಾಡಿದ್ದಾರೆ ಎಂದು ರಣಬೀರ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ರಣಬೀರ್ ಅವರು ತೀವ್ರವಾದ ಹಿಂಸಾ ಪ್ರಚೋದನಕಾರಿ ದೃಶ್ಯ ಮಾಡಲು ಹೆದರುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಅವರು, ಆಲಿಯಾ ಮತ್ತು ನಾನು ಪರಸ್ಪರರ ಕೆಲಸದ ಬಗ್ಗೆ ಹೆಚ್ಚು ಮಾತನಾಡುತ್ತೇವೆ. ಒಬ್ಬ ಕಲಾವಿದೆಯಾಗಿ ನಾನು ಅವಳನ್ನು ನಿಜವಾಗಿಯೂ ಗೌರವಿಸುತ್ತೇನೆ ನಾನು ಚಿತ್ರದ ಚಿತ್ರೀಕರಣಕ್ಕೆ ಹೋಗುವಾಗ, ಪ್ರತಿ ದೃಶ್ಯ ಅಥವಾ ಪ್ರತಿದಿನ ನಾನು ಅವರೊಂದಿಗೆ ಚರ್ಚಿಸುತ್ತಿದ್ದೆ ಮತ್ತು ಅವರು ನನಗೆ ಅನೇಕ ದೃಶ್ಯಗಳಲ್ಲಿ ಸಹಾಯ ಮಾಡಿದ್ದಾರೆ. ಒಬ್ಬ ನಟನಾಗಿ ನಾನು ಮಾಡಲು ಭಯಪಡುವ ಮತ್ತು ಯೋಚಿಸಿದ ಆ ದೃಶ್ಯಗಳಲ್ಲಿ ನಟಿಸಲು ಅಲಿಯಾ ನನಗೆ ಸಹಾಯ ಮಾಡಿದ್ದಾರೆ ಎಂದಿದ್ದಾರೆ.