ರಣಬೀರ್ – ಆಲಿಯಾ ಕೊರೊನಾ ಸೋಂಕು ಗುಣವಾಗುತ್ತಲೇ ಮಾಲ್ಡೀವ್ ಪ್ರವಾಸಕ್ಕೆ ತೆರಳಿದರು, ಸೋಶಲ್ ಮೀಡಿಯಾದಲ್ಲಿ ಇಬ್ಬರಿಗೂ ಟೀಕೆಗಳ ಸುರಿಮಳೆ

ನಟ ರಣಬೀರ್ ಕಪೂರ್ ಮತ್ತು ಅವರ ಗರ್ಲ್ ಫ್ರೆಂಡ್ ಆಲಿಯಾ ಭಟ್ ಕೆಲವು ದಿನಗಳು ಕೊರೊನಾ ಸೋಂಕಿನಿಂದ ಬಳಲಿದರೂ ಈವಾಗ ರಿಕವರಿ ಆಗಿದ್ದಾರೆ. ಮೊನ್ನೆ ಇವರಿಬ್ಬರು ಮುಂಬೈ ಏರ್ ಪೋರ್ಟ್ ನಲ್ಲಿ ಕಂಡುಬಂದರು. ಇಲ್ಲಿನ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಾಲಿವುಡ್ ವರದಿಯ ಪ್ರಕಾರ ರಣಬೀರ್ ಮತ್ತು ಆಲಿಯಾ ರಜಾದಿನಗಳ ಮಜಾ ಸವಿಯಲು ಮಾಲ್ಡೀವ್ ಗೆ ತೆರಳಿದ್ದಾರೆ. ಕೊರೋನಾ ಮತ್ತು ಲಾಕ್ ಡೌನ್ ನ ಈ ಕಾಲದಲ್ಲಿ ಈ ಭಾವೀ ಜೋಡಿ ರಜಾದಿನಗಳ ಮಜಾ ಸವಿಯಲು ಪ್ರವಾಸ ಹೊರಟಿರುವುದಕ್ಕೆ ತೀವ್ರ ಬೇಸರಗೊಂಡ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದಾರೆ.
ಓರ್ವ ಅಭಿಮಾನಿ ಸೋಶಿಯಲ್ ಮೀಡಿಯಾ ಯೂಸರ್ ಸಿಟ್ಟಿನಿಂದ ಹೀಗೆ ಬರೆದಿದ್ದಾನೆ – ’ಟೈಗರ್ ಮತ್ತು ದಿಶಾ ಅವರಿಗೂ ಇದನ್ನೇ ಬರೆದಿದ್ದೇನೆ .ಇವರಿಗೂ ಅದನ್ನೇ ಬರೆಯುತ್ತಿದ್ದೇನೆ. ಈ ಜನರು ಸೂಪರ್ ಸ್ಪ್ರೆಡರ್ಸ್ ಆಗಿದ್ದಾರೆ. ಮಾಲ್ಡಿವ್ ಸರಕಾರ ಇವರಿಗೆ ಎಂಟ್ರಿಯನ್ನೇ ನಿಷೇಧಿಸಬೇಕು” ಎಂದಿದ್ದಾರೆ.


ಇತ್ತೀಚೆಗೆ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಮಾಲ್ಡೀವ್ಸ್ ಗೆ ಹೊರಟಿದ್ದರು.ಇದಕ್ಕಿಂತ ಮೊದಲು ಸಾರಾ ಅಲಿಖಾನ್, ಶ್ರದ್ಧಾ ಕಪೂರ್, ಜಾನ್ಹವಿ ಕಪೂರ್ ಸಹಿತ ಅನೇಕ ಸೆಲೆಬ್ಸ್ ಗಳು ಕೊರೊನಾ ಮತ್ತು ಲಾಕ್ ಡೌನ್ ನಡುವೆಯೂ ಮಾಲ್ಡೀವ್ಸ್ ಗೆ ತೆರಳಿದ್ದರು.
ಓರ್ವ ಯೂಸರ್ ಬರೆದಿದ್ದಾನೆ- ’ವಾಹ್ ಬೇಟಾ, ಕೊರೊನಾ ಕೇಸು ಹೆಚ್ಚುತ್ತಿದೆ. ನೀವು ಮಜಾ ಮಾಡಲು ತೆರಳಿದ್ದೀರಿ. ನಿಮ್ಮಲ್ಲಿ ಹಣ ಇರಬಹುದು. ಈ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡುವುದನ್ನು ಬಿಟ್ಟು ರಜಾದಿನಗಳ ಮಜಾ ಕಳೆಯಲು ಹೋಗುತ್ತೀರಲ್ಲ. ನಾಚಿಗೆ ಆಗಬೇಕು.’
ಇನ್ನೊಬ್ಬ ಯೂಸರ್ ಬರೆದಿದ್ದಾನೆ- ’ನಿಮ್ಮಂತಹ ಜನರಿಗೆ ಕೊರೊನಾವೂ ಇಲ್ಲ,ಲಾಕ್ ಡೌನ್ ಕೂಡಾ ಇಲ್ಲ’. ಎಂದರೆ ,
ಇನ್ನು ಕೆಲವರು ಈ ಜೋಡಿಯನ್ನು ಪರಾರಿ ಮತ್ತು ನಾಚಿಕೆ ಇಲ್ಲದವರು ಎಂಬ ಶಬ್ದಗಳನ್ನು ಬಳಸಿ ಟೀಕಿಸಿದ್ದಾರೆ.
ಮತ್ತೊಬ್ಬ ಬರೆದಿದ್ದಾರೆ -“ಜನತೆ ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತಾರೆ.”
ಎಲ್ಲಾ ಸೆಲೆಬ್ರಿಟಿಗಳು ಕೊರೋನಾ ಕಾಲದಲ್ಲಿ ರಜಾದಿನಗಳ ಮಜಾ ಸವಿಯಲು ಮುಂದಾಗಿದ್ದಾರೆ. ಕೊರೊನಾ ಮಿಡ್ಲ್ ಕ್ಲಾಸ್ ಜನರಿಗೆ ಹೆಚ್ಚು ಬರುತ್ತದೆ. ಅವರಿಗೆ ಸರಿಯಾಗಿ ಆರೈಕೆ ಇಲ್ಲದೆ ಅನೇಕರು ಸಾವನ್ನಪ್ಪುತ್ತಾರೆ. ಆದರೆ ಸೆಲೆಬ್ರಿಟಿಗಳು ಕೊರೊನಾ ಟೈಂ ನಲ್ಲಿಯೂ ದೇಶದ ಸ್ಥಿತಿಯ ಕುರಿತು ಚಿಂತಿಸದೆ ಪ್ರವಾಸ ಹೋಗುತ್ತಾರೆ.
“ಮಾಲ್ಡಿವ್ ನಲ್ಲಿ ಏನು ಈ ಸಮಯ ಡಿಸ್ಕೌಂಟ್ ಇದೆಯಾ? ಭಾರತದ ಸೆಲೆಬ್ರಿಟಿಗಳಿಗೆ ಪ್ರವಾಸ ಮಾಡಲು ಹೇಗೆ ಅನುಮತಿ ಸಿಗುತ್ತಿದೆ? ನಾರ್ಮಲ್ ಜನರು ಈ ಭಯಂಕರ ಕೋವಿಡ್ ಸಿಚುವೇಶನ್ ನಲ್ಲಿ ಸ್ಟ್ರಗಲ್ ಮಾಡುತ್ತಿದ್ದಾರೆ. ನಿಮಗೆಲ್ಲ ನಾಚಿಕೆ ಆಗಬೇಕು.” ಎಂದಿದ್ದಾರೆ ಇನ್ನೊಬ್ಬರು. ರಣಬೀರ್ ಮತ್ತು ಆಲಿಯಾ ಬ್ರಹ್ಮಾಸ್ತ್ರ ದಲ್ಲಿ ಮೊದಲ ಬಾರಿ ಜೊತೆಯಾಗಿ ಅಭಿನಯಿಸುತ್ತಿದ್ದಾರೆ.

ಕೊರೊನಾ ಕುರಿತು ಕಂಗನಾ ಹೇಳಿಕೆಗೆ ಅಭಿಮಾನಿಗಳ ಸಿಟ್ಟು

ತನ್ನ ಪ್ರಚೋದನಕಾರಿ ಹೇಳಿಕೆಗಳಿಗೆ ಪ್ರಖ್ಯಾತಿ ಹೊಂದಿರುವ ನಟಿ ಕಂಗನಾ ರನಾವತ್ ಕೊರೊನಾ ಕುರಿತಂತೆ ತನ್ನ ಕೆಲವು ಅನಿಸಿಕೆಗಳನ್ನು ತೆರೆದಿಟ್ಟದ್ದು ಅನೇಕ ಅಭಿಮಾನಿಗಳಿಗೆ ಸಿಟ್ಟು ತರಿಸಿದೆ.
ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ಕೊರೊನಾ ಹಾಹಾಕಾರ ಎಬ್ಬಿಸಿದೆ. ಪ್ರತಿದಿನವೂ ರೋಗಿಗಳ ಸಂಖ್ಯೆ ಏರುತ್ತಿದೆ.ಅತ್ತ ಸಾವಿನ ಸಂಖ್ಯೆಯೂ ಭಯ ಹುಟ್ಟಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಜನರ ಸಾವಿನ ಕುರಿತಂತೆಯೂ ಕಂಗನಾ ಒಂದು ಹೇಳಿಕೆ ನೀಡಿದ್ದಾರೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.


”ಕೊರೊನಾ ವೈರಸ್ ಮನುಷ್ಯರನ್ನು ಕೊಲ್ಲುತ್ತಿದೆ. ಆದರೆ ಉಳಿದೆಲ್ಲ ವಸ್ತುಗಳನ್ನು ಸರಿಪಡಿಸುತ್ತಿದೆ “ಅವರ ಈ ಹೇಳಿಕೆಗೆ ತೀವ್ರ ಟೀಕೆಗಳು ಬಂದಿವೆ.
ಕಂಗನಾ ಬರೆದಿದ್ದಾರೆ – ಮಾನವ ನಿರ್ಮಿತ ವೈರಸ್ಸಿನ ಆಘಾತದಲ್ಲಿ ಜನರು ತತ್ತರಿಸುತ್ತಿದ್ದಾರೆ. ಒಬ್ಬರಿನ್ನೊಬ್ಬರ ಅರ್ಥವ್ಯವಸ್ಥೆಯನ್ನು ಕೆಳಮಟ್ಟಕ್ಕೆ ತರಲು ನೋಡುತ್ತಿದ್ದಾರೆ.’ಅರ್ಥ್ ಈಸ್ ಹೀಲಿಂಗ್”. ವೈರಸ್ಸು ಮನುಷ್ಯನನ್ನು ಕೊಲ್ಲುತ್ತಿದೆ .ಆದರೆ ಉಳಿದೆಲ್ಲ ವಸ್ತುಗಳನ್ನು ಸರಿಪಡಿಸಲೂ ನೋಡುತ್ತಿದೆ….”
ಕಂಗನಾರು ಈ ಪೋಸ್ಟ್ ನಲ್ಲಿ ಪ್ರಥ್ವಿಯ ಏಳಿಗೆಗಾಗಿ ಕೆಲವು ಟಿಪ್ಸ್ ಗಳನ್ನು ನೀಡಿದ್ದಾರೆ. ನಾವು ಪ್ರತಿಯೊಬ್ಬರಿಗೂ ೮ ಗಿಡಗಳನ್ನು ನೆಡಬೇಕು. ಪ್ಲಾಸ್ಟಿಕ್ ಉಪಯೋಗವನ್ನು. ಬಳಸಬಾರದು. ಊಟ ತಿಂಡಿಯನ್ನು ಹಾಳುಮಾಡಬೇಡಿ .ನಿಮ್ಮ ಸುತ್ತುಮುತ್ತಲಿನ ಮೂರ್ಖರ ವಿಷಯದಲ್ಲಿ ಜಾಗೃತ ಇರಿ…. ಇತ್ಯಾದಿಗಳನ್ನು ಬರೆದಿದ್ದಾರೆ.


ಕಂಗನಾ ರನಾವತ್ ರ ಈ ಪೋಸ್ಟ್ ಗೆ ಯೂಸರ್ ಗಳಲ್ಲಿ ಕೆಲವರು ಮೆಚ್ಚುಗೆ ಸೂಚಿಸಿದರು,ಹಾಗೂ ಅನೇಕರು ಟೀಕಿಸಿದ್ದಾರೆ.
“ಎಷ್ಟು ಆರಾಮದಲ್ಲಿ ಹೇಳಿದ್ದೀರಿ, ವೈರಸ್ಸು ಮನುಷ್ಯನನ್ನು ಕೊಲ್ಲುತ್ತಿದೆ ಎಂದು. ಆದರೆ ಇದರ ಕಾರಣ ಪರಿವಾರದ ಸದಸ್ಯರನ್ನು ಕಳಕೊಂಡವರ ಬಗ್ಗೆ ಏನು ಹೇಳುತ್ತೀರಿ? ಇದರ ನಂತರದ ಪರಿಣಾಮವನ್ನು ನೀವು ಗಮನಿಸಿಲ್ಲ. ದೇಶದ ಸಾವಿರಾರು ಕುಟುಂಬಗಳನ್ನು ನಾಶಪಡಿಸಿದ ಈ ಮಹಾಮಾರಿಯ ಬಗ್ಗೆ ನಿಮಗೆ ರೋಮ್ಯಾಂಟಿಕ್ ಅನಿಸುತ್ತಿದೆಯೇ?” ಎಂದರೆ, ಇನ್ನೋರ್ವ ಯೂಸರ್ ಬರೆದಿದ್ದಾರೆ- “ಪ್ರಿಯಾ ಕಂಗನಾ ನಿದ್ದೆಯಿಂದ ಏಳಿರಿ. ಇದು ಏಪ್ರಿಲ್ ೨೦೨೦ ಅಲ್ಲ, ಎಪ್ರಿಲ್೨೦೨೧. ನಿಮಗೆ ಅರ್ಥ್ ಈಸ್ ಹೀಲಿಂಗ್ ಮುಖ್ಯವಾಗಿರಬಹುದು, ಆದರೆ ಇಂದು ನಮ್ಮ ಜನರು ಬದುಕಿಗಾಗಿ ಸಂಘರ್ಷ ಮಾಡುತ್ತಿದ್ದಾರೆ .ನಮಗೆ ಅದು ಮುಖ್ಯ” ಎಂದು ತಿರುಗೇಟ್ ನೀಡಿದ್ದಾರೆ.

ಐ ಸಿ ಯು ನಲ್ಲಿ ’ಆಶಿಕೀ’ ಸಂಗೀತಗಾರ ಶ್ರವಣ್

೯೦ರ ದಶಕದಲ್ಲಿ ಪಾಪುಲರ್ ಸಂಗೀತ ನಿರ್ದೇಶಕ ಜೋಡಿ ಎಂದೆನಿಸಿದ್ದ ನದೀಮ್-ಶ್ರವಣ್ ಇವರಲ್ಲಿ ಶ್ರವಣಕುಮಾರ್ ರಾಥೋಡ್ ಗಂಭೀರ ಸ್ಥಿತಿಯಲ್ಲಿ ಮುಂಬೈಯ ರಹೇಜಾ ಹಾಸ್ಪಿಟಲ್ ನಲ್ಲಿ ಭರ್ತಿಗೊಂಡಿದ್ದಾರೆ. ಕೆಲವು ದಿನಗಳ ಮೊದಲು ೬೭ ವರ್ಷದ ಸಂಗೀತಗಾರ ಶ್ರವಣ್ ಅವರಿಗೆ ಕೋವಿಡ್ ೧೯ ರ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು. ಅನಂತರ ಆಸ್ಪತ್ರೆಯಲ್ಲಿ ಅವರನ್ನು ಭರ್ತಿ ಮಾಡಲಾಯಿತು.


ಶ್ರವಣ್ ರಾಥೋಡ್ ಅವರ ಪುತ್ರ ಮ್ಯೂಸಿಕ್ ಕಂಪೋಸರ್ ಸಂಜೀವ್ ರಾಥೋಡ್ ಅವರು ತಿಳಿಸಿದಂತೆ “ಕೋವಿಡ್ ಸೋಂಕಿನಿಂದ ಅವರ ಸ್ಥಿತಿ ಬಹಳ ಗಂಭೀರವಿದೆ. ಅವರು ಐಸಿಯುನಲ್ಲಿ ಇದ್ದಾರೆ .ನಿಮ್ಮೆಲ್ಲರ ಪ್ರಾರ್ಥನೆಯಿಂದ ಅವರು ಬೇಗನೆ ಗುಣಮುಖವಾಗಿ ಮನೆಗೆ ಬರುವಂತಾಗಲಿ” ಎಂದಿದ್ದಾರೆ.
ಶ್ರವಣ್ ಕುಮಾರ್ ಅವರ ಲಂಗ್ಸ್ ಮತ್ತು ಹಾರ್ಟ್ ನಲ್ಲಿ ತೊಂದರೆಗಳಿವೆ. ಈ ನಡುವೆ ನಾಲ್ಕೂ ಕಡೆ ಪಾಸಿಟಿವ್ ವಾತಾವರಣ ಇದೆ. ಎಲ್ಲರೂ ಜಾಗ್ರತೆಯಿಂದ ಇರಬೇಕಾದ ಅವಶ್ಯಕತೆ ಇದೆ ಎಂದೂ ಪುತ್ರ ಸಂಜೀವ್ ಪ್ರತಿಕ್ರಿಯಿಸಿದ್ದಾರೆ.
೧೯೭೩ ರಲ್ಲಿ ನದೀಮ್-ಶ್ರವಣ್ ಎಸೋಸಿಯೇಶನ್ ಸ್ಥಾಪನೆಯಾಗಿತ್ತು.ನದೀಮ್ ಅಖ್ತರ್ ಶಫಿ ಮತ್ತು ಶ್ರವಣ್ ಕುಮಾರ್ ರಾಥೋಡ್ ಅವರ ಹೆಸರಲ್ಲಿ ೧೯೭೩ ರಲ್ಲಿ ಒಂದು ಕಾರ್ಯಕ್ರಮದ ನಂತರ ಸ್ಥಾಪನೆಯಾಗಿತ್ತು. ೮೦- ೯೦ರ ದಶಕದಲ್ಲಿ ಪ್ರಮುಖ ಹತ್ತು ನಟರ ಫಿಲ್ಮ್ ಗಳಿಗೆ ಈ ಜೋಡಿಯ ಸಂಗೀತ ಪ್ರಖ್ಯಾತಿ ಹೊಂದಿತ್ತು.
೧೯೯೦ ರಲ್ಲಿ ರಾಹುಲ್ ರಾಯ್ ಅಭಿನಯದ ’ಆಶಿಕೀ’ ಫಿಲ್ಮಿನ ಮೂಲಕ ಇವರ ಸಂಗೀತ ಜೋಡಿ ಹಿಟ್ ಎನ್ನಿಸಿತ್ತು.
೧೯೯೭ ರಲ್ಲಿ ಗುಲ್ಶನ್ ಕುಮಾರ್ ಮರ್ಡರ್ ಕೇಸ್ ನಲ್ಲಿ ನದೀಮ್ ಅವರ ಹೆಸರು ಬಂದನಂತರ ನದೀಮ್ ಯುಕೆಗೆ ಪಲಾಯನಗೈದರು. ನಂತರ ಈ ಜೋಡಿಯ ಸಂಗೀತ ಫಿಲ್ಮ್ ಗಳಲ್ಲಿ ಬರಲಿಲ್ಲ. ಆದರೆ ಅದಕ್ಕಿಂತ ಮೊದಲು ಮಾಡಿದ ಕೆಲವು ಫಿಲ್ಮ್ ಗಳ ಸಂಗೀತ೨೦೦೦ ದಶಕದಲ್ಲಿ ಬಂದಿತ್ತು.
ನದೀಮ್ ಅವರು ಯುನೈಟೆಡ್ ಕಿಂಗ್ಡಮ್ ನಲ್ಲಿ ಇದ್ದರೂ ಶ್ರವಣ್ ೨೦೦೫ ರ ತನಕವೂ ಇಬ್ಬರ ಹೆಸರಲ್ಲಿ ಫಿಲ್ಮ್ ಗಳಿಗೆ ಸಂಗೀತ ನೀಡಿದ್ದಿದೆ.
೨೦೦೫ ರಲ್ಲಿ ಬಂದ ದೋಸ್ತೀ: ಫ್ರೆಂಡ್ಸ್ ಫಾರ್ ಎವರ್ ನಂತರ ಈ ಜೋಡಿ ಮುರಿದುಬಿತ್ತು