ರಣಬೀರ್ – ಆಲಿಯಾರ ಹೊಸಮನೆಯಲ್ಲಿ ದಿ.ರಿಷಿಕಪೂರ್ ಸ್ಮರಣೆಗೆ ಒಂದು ಕೋಣೆ ಅರ್ಪಣೆ

ಬಾಲಿವುಡ್ ನ ಲವ್ ಬರ್ಡ್ಸ್ ರಣಬೀರ್ ಮತ್ತು ಆಲಿಯಾ ಮುಂಬಯಿಯಲ್ಲಿ ಒಂದು ಹೊಸ ಮನೆಯನ್ನು ಕಟ್ಟಿಸುತ್ತಿದ್ದಾರೆ. ತಮ್ಮ ವಿವಾಹದ ನಂತರ ಇವರಿಬ್ಬರೂ ಇಲ್ಲೇ ಉಳಕೊಳ್ಳಲು ನಿರ್ಧರಿಸಿದ್ದಾರೆ.
ಇದೇನು ವಿಶೇಷ ಸಂಗತಿ ಅಲ್ಲ ಬಿಡಿ,ವಿಶೇಷ ಇರುವುದು ಈ ಮನೆಯಲ್ಲಿ ರಣಬೀರ್ ನ ದಿವಂಗತ ತಂದೆ ರಿಷಿ ಕಪೂರ್ ಅವರ ನೆನಪಿಗಾಗಿ ಒಂದು ಪ್ರತ್ಯೇಕ ಕೋಣೆಯನ್ನು ಮೀಸಲಿಡಲಿದ್ದಾರೆ. ಇದರಲ್ಲಿ ರಿಷಿ ಕಪೂರ್ ಅವರು ಬಳಸುತ್ತಿದ್ದ ಕೆಲವು ವಸ್ತುಗಳನ್ನು ತೆಗೆದಿರಿಸಲಿದ್ದಾರೆ. ಈ ಕೋಣೆ ದಿ. ರಿಷಿ ಕಪೂರ್ ಅವರಿಗೆ ಅರ್ಪಣೆ ಆಗಲಿದೆ.
ರಣಬೀರ್ ಮತ್ತು ಆಲಿಯಾ ಅವರ ಮದುವೆ ರಿಷಿ ಕಪೂರ್ ಅವರ ಕನಸು ಆಗಿತ್ತಂತೆ.ಈ ಹೊಸ ಮನೆಯಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಇರುತ್ತವೆಯಂತೆ. ರಣಬೀರ್ ಮತ್ತು ಅವರ ತಾಯಿ ನೀತೂ ಕಪೂರ್ ಇಬ್ಬರೂ ದಿವಂಗತ ರಿಷಿ ಕಪೂರ್ ಅವರ ಕೆಲವು ವಸ್ತುಗಳನ್ನು ಜೋಪಾನವಾಗಿ ತೆಗೆದಿಟ್ಟಿದ್ದಾರೆ.ಅವುಗಳಲ್ಲಿ ರಿಷಿ ಅವರ ಕುರ್ಚಿ,ಪುಸ್ತಕ ಶೆಲ್ಫ್ ಇವೆಲ್ಲ ಒಳಗೊಂಡಿವೆ.ಇದನ್ನೆಲ್ಲ ಈ ಮೀಸಲು ಕೋಣೆಯಲ್ಲಿ ಇರಿಸಲಾಗುವುದು.
ರಣಬೀರ್ ಮತ್ತು ತಾಯಿ ನೀತೂ ಕಪೂರ್ ತಮ್ಮ ಪರಂಪರಾಗತ ರೀತಿ ರಿವಾಜುಗಳನ್ನು ಪಾಲಿಸುತ್ತಿದ್ದು ಅದಕ್ಕೆ ಈ ಹೊಸ ಮನೆಯಲ್ಲೂ ಮನ್ನಣೆ ನೀಡಿದ್ದಾರೆ.
ಎಪ್ರಿಲ್ ೨೦೨೨ ರ ಮೊದಲು ಹೊಸ ಮನೆಯ ಎಲ್ಲ ಕೆಲಸಗಳನ್ನು ಮುಗಿಸುವಂತೆ ಅವರು ಕಾಂಟ್ರೇಕ್ಟರ್ ಗೆ ಸೂಚಿಸಿದ್ದಾರೆ. ಯಾಕೆಂದರೆ ಎಪ್ರಿಲ್ ೨೦೨೨ ರಲ್ಲಿ ರಣಬೀರ್ ಮತ್ತು ಆಲಿಯಾ ವಿವಾಹವಾಗಲಿದ್ದಾರೆ.

ಮುಂಬಯಿಗೆ ಆಗಮಿಸಿದರು ಚಂಡೀಗಡ್ ನಲ್ಲಿ ವಿವಾಹ ಮಾಡಿಕೊಂಡ ಪತ್ರಲೇಖಾ- ರಾಜಕುಮಾರ್ ರಾವ್ ದಂಪತಿ , ಪತ್ರಲೇಖಾರ ಮಂಗಳ ಸೂತ್ರದ ಬೆಲೆ ೧.೬೫ ಲಕ್ಷ ರೂ.

ತನ್ನ ಬಹು ಕಾಲದ ಗರ್ಲ್ ಫ್ರೆಂಡ್ ಪತ್ರಲೇಖಾ ರನ್ನು ಚಂಡೀಗಡ್ ನಲ್ಲಿ ವಿವಾಹವಾದ ನಟ ರಾಜ್ ಕುಮಾರ್ ರಾವ್ ಈಗ ಮುಂಬಯಿಗೆ ಬಂದಿದ್ದಾರೆ.
ಮುಂಬಯಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಮಾತಾಡಿಸಿದಾಗ ಬಹಳ ಖುಷಿಯಿಂದ ಇದ್ದರು.ರಾಜಕುಮಾರ್ ರಾವ್ ಬಿಳಿ ಕುರ್ತಾ ಪೈಜಾಮದಲ್ಲಿ ಇದ್ದರೆ ಪತ್ರಲೇಖಾ ಕೆಂಪು ಸೀರೆಯಲ್ಲಿದ್ದರು.


ಅಲ್ಲಿ ಎಲ್ಲ ಪತ್ರಕರ್ತರ ಗಮನ ಸೆಳೆದದ್ದು ಪತ್ರಲೇಖಾ ಅವರ ಮಂಗಳ ಸೂತ್ರ.
ಮೀಡಿಯಾ ರಿಪೋರ್ಟ್ ಅನುಸಾರ ಇದರ ಬೆಲೆ ೧.೬೫ ಲಕ್ಷ ರೂ. ೧೮ ಕ್ಯಾರೆಟ್ ಚಿನ್ನದ ಈ ಮಂಗಳಸೂತ್ರವನ್ನು ಡಿಸೈನ್ ಮಾಡಿದ್ದು
ಪ್ರಖ್ಯಾತ ಫ್ಯಾಶನ್ ಡಿಸೈನರ್ ಆದ ಸವ್ಯಸಾಚಿ.
ರಾಜಕುಮಾರ್ ರಾವ್ ಮತ್ತು ಪತ್ರಲೇಖಾ ಅವರ ನವಂಬರ್ ೧೩ ರಂದು ನಿಶ್ಚಿತಾರ್ಥ ನಡೆದಿತ್ತು. ನವಂಬರ್ ೧೪ ರಂದು ಮೆಹಂದಿ ಕಾರ್ಯಕ್ರಮ,ಮತ್ತು ನವಂಬರ್ ೧೫ ರಂದು ವಿವಾಹ ಸಮಾರಂಭ ನಡೆಯಿತು.
ಈ ವಿವಾಹ ಸಮಾರಂಭಕ್ಕೆ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.ತನ್ನ ಮದುವೆ ಬಗ್ಗೆ ಫ್ಯಾನ್ಸ್ ಗಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ತಿಳಿಸುತ್ತಾ ರಾಜಕುಮಾರ್ ರಾವ್ ಬರೆದಿದ್ದಾರೆ- “೧೧ ವರ್ಷಗಳ ರೊಮಾನ್ಸ್ ಪ್ರೀತಿ….ಇತ್ಯಾದಿಗಳ ನಂತರ ಈಗ ವಿವಾಹವಾದೆವು….”

ನಟಿ ಪರಿಣೀತಿ ಚೋಪ್ರಾ ಫಿಲ್ಮ್ ರಂಗದಿಂದ ರಿಯಾಲಿಟಿ ಶೋಗೆ

ಬಾಲಿವುಡ್ ನ ಅನೇಕ ಕಲಾವಿದರು ಈ ದಿನಗಳಲ್ಲಿ ಫಿಲ್ಮ್ ರಂಗದಿಂದ ಟಿವಿ ಪರದೆಗೆ ಒಬ್ಬೊಬ್ಬರೇ ಬರುತ್ತಿದ್ದಾರೆ .
ಟಿವಿ ಪರದೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಹಲವು ವರ್ಷಗಳಿಂದ ಫಿಲ್ಮ್ ರಂಗದಿಂದ ಟಿವಿಗೆ ಬರುವ ಈ ಟ್ರೆಂಡ್ ಹೆಚ್ಚುತ್ತಾ ಬರುತ್ತಿದೆ. ಅಮಿತಾಭ್ ಬಚ್ಚನ್ ,ಮಾಧುರಿ ದೀಕ್ಷಿತ್, ಸಲ್ಮಾನ್ ಖಾನ್ ,ಶಾರುಖ್ ಖಾನ್, ಶಿಲ್ಪಾ ಶೆಟ್ಟಿ, ರೋಹಿತ್ ಶೆಟ್ಟಿ, ಕರಣ್ ಜೋಹರ್….ಹೀಗೆ ಅನೇಕ ಬಾಲಿವುಡ್ ಸೆಲೆಬ್ಸ್ ಗಳು ಟಿವಿ ಹೋಸ್ಟ್ ಆಗಿ ಸುದ್ದಿ ಮಾಡಿದ್ದಾರೆ. ಇನ್ನು ಕೆಲವರು ಜಡ್ಜ್ ಆಡಿಯನ್ಸ್ ಗೆ ಇಂಪ್ರೆಸ್ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ .ಈಗ ಈ ಸೂಚಿಗೆ ಪರಿಣೀತಿ ಚೋಪ್ರಾ ಕೂಡಾ ಸೇರ್ಪಡೆಯಾಗಿದ್ದಾರೆ.


ಕಳೆದೆರಡು ವರ್ಷಗಳಿಂದ ಟಿವಿ ಶೋ ದ ಭಾಗವಾಗಲು ಪರಿಣೀತಿ ಚೋಪ್ರಾ ಅವರಿಗೆ ಆಫರ್ ಗಳು ಬರುತ್ತಲೇ ಇತ್ತು. ಆದರೆ ಫಿಲ್ಮ್ ನ ಕಮಿಟ್ ಮೆಂಟ್ ಕಾರಣ ಅವರಿಗೆ ಆಫರ್ ಸ್ವೀಕರಿಸಲು ಆಗಿರಲಿಲ್ಲ .
ಇತ್ತೀಚೆಗೆ ರಿಯಾಲಿಟಿ ಶೋ ’ಹುನರ್ಬಾಜ್- ದೇಶ್ ಕಿ ಶಾನ್” ಇದರ ಮೇಕರ್ಸ್ ಪರಿಣೀತಿ ಅವರನ್ನು ಜಡ್ಜ್ ಆಗಿಸಲು ಅಪ್ರೋಚ್ ಮಾಡಿದ್ದರು. ಹಾಗೂ ಮೇಕರ್ಸ್ ಆಶ್ವಾಸನೆ ನೀಡಿದ್ದರು- ನಿಮ್ಮ ಫಿಲ್ಮ್ ನ ಶೆಡ್ಯೂಲ್ ಗಮನದಲ್ಲಿರಿಸಿಯೇ ಶೂಟಿಂಗ್ ಮಾಡಲಾಗುವುದು ಎಂದು. ಹಲವು ಮೀಟಿಂಗ್ ನ ನಂತರ ಪರಿಣೀತಿ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ವರ್ಷದ ಅಂತ್ಯದೊಳಗೆ ಶೂಟಿಂಗ್ ಆರಂಭವಾಗಲಿದೆ. ಸದ್ಯ ವಾರದಲ್ಲಿ ಒಂದು ದಿನ ಎರಡು ಎಪಿಸೋಡ್ ನ ಶೂಟಿಂಗ್ ಗೆ ಬರುವೆ ಎಂಬ ಆಶ್ವಾಸನೆ ನೀಡಿದ್ದಾರೆ. ಇದರಲ್ಲಿ ಇವರ ಜೊತೆ ಕರಣ್ ಜೋಹರ್ ಮತ್ತು ಮಿಥುನ್ ಚಕ್ರವರ್ತಿ ಜಡ್ಜ್ ಆಗಿಕಾಣಿಸಲಿದ್ದಾರೆ.
ಪರಿಣೀತಿ ಅವರ ಟೆಲಿವಿಜನ್ ನಲ್ಲಿ ಇದು ಮೊದಲ ಶೋ ಏನೂ ಅಲ್ಲ, ೨೦೧೪ ರಲ್ಲಿಯೂ ರಿಯಾಲಿಟಿ ಶೋ ಸಿನೆಸ್ಟಾರ್ ಕಿ ಖೋಜ್ ಇದರ ಮೆಂಟರ್ ಆಗಿದ್ದರು.