ರಟಕಲ್ ದರ್ಗಾ ರಸ್ತೆಗಾಗಿ ಜು.19 ರಂದು ಮತ್ತೆ ಧರಣಿ

ಕಾಳಗಿ:ಜು.13: ರಟಕಲ್ ಗ್ರಾಮದ ಐತಿಹಾಸಿಕ ಮಹೆಬೂಬ್ ಸುಬಾನಿ ದರ್ಗಾಕ್ಕೆ ಪೆÇಲೀಸರು ಅಡ್ಡಲಾಗಿ ಕಟ್ಟಿರುವ ತಡೆಗೋಡೆ ತೆರವುಗೊಳಿಸಬೇಕೆಂದು ಒತ್ತಾಯಿಸಿ ಜುಲೈ 19 ರಂದು ಮತ್ತೊಮ್ಮೆ ಅನಿರ್ಷಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸೌಹಾರ್ದ ಸಮಿತಿ ರಟಕಲ್ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.

ರಟಕಲ್ ಗ್ರಾಮದ ಪೆÇಲೀಸ್ ಠಾಣೆಯ ಆವರಣದಲ್ಲಿ ಇರುವ ಐತಿಹಾಸಿ ಮಹೆಬೂಬ್ ಸುಬಾನಿ ದರ್ಗಾ ದ್ವಾರಕ್ಕೆ ಪೆÇಲೀಸರು ಅಡ್ಡಲಾಗಿ ಕಟ್ಟಿರುವ ತಡೆಗೋಡೆಗೆ ಒತ್ತಾಯಿಸಿ ಈ ಹಿಂದೆ ಮೇ 23 ರಿಂದ 31 ವರೆಗೆ ಅನಿರ್ದಿಷ್ಟವಾಧಿ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ಈ ವೇಳೆ ಕಲಬುರಗಿ ಎಸ್.ಪಿ ಈಶಾ ಪಂತ್ ಅವರು ಧರಣೆ ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ಸಮಸ್ಯೆ ಇತ್ಯರ್ಥ ಪಡೆಸುವ ಭರವಸೆ ನೀಡಿದರು.

ಎಸ್.ಪಿ ಅವರು ಭರವಸೆ ನೀಡಿ ಒಂದುವರೆ ತಿಂಗಳು ಕಳೆದರೂ ಇನ್ನೂವರೆಗೆ ಸಮಸ್ಯೆ ಇತ್ಯರ್ಥ ಪಡಿಸದೇ ಗ್ರಾಮಸ್ಥರ ವಿಶ್ವಾಸಕ್ಕೆ ಬೆಲೆ ನೀಡದಂತೆ ಆಗಿದೆ. ಶಾಂತಿ ಸೌಹಾರ್ದತೆಯಿಂದ ಇರುವ ನಮ್ಮ ರಟಕಲ್ ಗ್ರಾಮದಲ್ಲಿ ಪೆÇಲೀಸರ ಮೂಲಕ ಗ್ರಾಮದಲ್ಲಿ ಅಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ ಎಂಬುದು ಅನುಮಾನ ಕಾಡುವಂತೆ ಮಾಡಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.

ಗ್ರಾಮದಲ್ಲಿ ಸೌಹಾರ್ದ ಮತೆ ಕಾಪಾಡುವ ನಿಟ್ಟಿನಲ್ಲಿ ಮತ್ತೊಮ್ಮೆ ಎರಡನೇ ಬಾರಿ ರಟಕಲ್ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಬಹೆಬೂಬ್ ಸುಬಾನಿ ದರ್ಗಾದ ಪ್ರವೇಶ ದ್ವಾರದಲ್ಲಿ ಪೆÇಲೀಸರು ಅಡ್ಡಲಾಗಿ ಕಾಂಪೌಂಡ್ ಕಟ್ಟಲು ಅನುಮತಿ ನೀಡಿರುವ ಪಿಡಿಓ ಮತ್ತು ಗ್ರಾಮದ ಹಿತದೃಷ್ಟಿಯಿಂದ ಗ್ರಾಮ ಪಂಚಾಯತಿ ವತಿಯಿಂದ ಸರ್ವಾನುಮತದಿಂದ ತೆಗೆದುಕೊಂಡ ನಿರ್ಣಯಕ್ಕೂ ಬೆಲೆ ಕೊಡದೇ ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆ ತಂದಿರು ಪೆÇಲೀಸ್ ಇಲಾಖೆಯ ನಡೆಯನ್ನು ಖಂಡಿಸಿ, ಗ್ರಾಮದಲ್ಲಿ ಸೌಹಾರ್ದತೆಯ ಉಳಿವಿಗಾಗಿ ತಕ್ಷಣ ದರ್ಗಾಕ್ಕೆ ಕಟ್ಟಿರುವ ತಡೆಗೋಡೆ ತೆರುವುಗೋಳ್ಳಿಸಬೇಕೆಂದು ಒತ್ತಾಯಿಸಿ ಜುಲೈ 19 ರಂದು ಮತ್ತೊಮ್ಮೆ ಅನಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಮಿತಿ ಹಾಗೂ ಗ್ರಾಮದ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.