ರಟಕಲ್ ದರ್ಗಾದ ಸಮಸ್ಯೆ ಇತ್ಯರ್ಥ ಪಡಿಸುವಂತೆ ಉಸ್ತುವಾರಿ ಸಚಿವರಿಗೆ ಮನವಿ

ಕಲಬುರಗಿ:ಜೂ.22: ರಟಕಲ್ ಗ್ರಾಮದ ಪುರಾತನ ಕಾಲದ ಮಹೆಬೂಬ್ ಸುಬಹಾನಿ ದರ್ಗಾಕ್ಕೆ ಪೆÇಲೀಸರು ಅಡ್ಡಲಾಗಿ ಕಟ್ಟಿರುವ ತಡೆಗೋಡೆಯನ್ನು ತೆರವುಗೊಳ್ಳಿಸಬೇಕೆಂದು ಮತ್ತು ಎಸ್.ಪಿ ಅವರು ನೀಡಿರುವ ಭರವಸೆ ಈಡೇರಿಸಬೇಕೆಂದು ಸೌಹಾರ್ದ ಸಮಿತಿ ವತಿಯಿಂದ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಮಂಗಳವಾರ ನಗರದ ಐವಾನ್ ಇ ಶಾಹಿ ಅತಿಥಿಗೃಹ ದಲ್ಲಿ ಸಾರ್ವಜನಿಕ ಅವಾಹಲು ಸ್ವೀಕರ ಕಾರ್ಯಕ್ರಮದಲ್ಲಿ ಸೌಹಾರ್ದ ಸಮಿತಿಯ ನಿಯೋಗದಲ್ಲಿ ಉಸ್ತುವಾರಿ ಸಚಿವರಿಗೆ ಮನವಿ ಮಾಡಿ, ಎಸ್.ಪಿ ಅವರು ಗ್ರಾಮಕ್ಕೆ ಭೇಟಿ ನೀಡಿ ಸುಮಾರು ದಿನಗಳು ಕಳೆದರು ಇದುವರೆಗೆ ಸಮಸ್ಯೆ ಇತ್ಯರ್ಥವಾಗಿಲ್ಲ. ಪೆÇಲೀಸರಿಂದಲ್ಲೇ ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತದ್ದು, ತಕ್ಷಣ ಪೆÇಲೀಸರು ದರ್ಗಕ್ಕೆ ಕಟ್ಟಿರುವ ತಡೆಗೋಡೆ ತೆರವುಗೊಳ್ಳಿಸಬೇಕೆಂದು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಸೌಹಾರ್ದ ಸಮಿತಿಯ ಸದಸ್ಯರು ಮತ್ತು ಮುಖಂಡರು ಇದ್ದರು.