ರಜೆ ತಾರತಮ್ಯ ನಿವಾರಣೆಗೆ ನಮೋಶಿ ಮನವಿ

ಕಲಬುರಗಿ ಏ 21: ಬೇಸಿಗೆ ರಜೆ ನೀಡುವಲ್ಲಿ ಪೌಢಶಾಲಾ ಶಿಕ್ಷಕರಿಗೆ ತಾರತಮ್ಯವಾಗಿದ್ದು ಕೂಡಲೇ ಸರಿ ಪಡಿಸುವಂತೆ ವಿಧಾನ ಪರಿಷತ್ತು ಸದಸ್ಯ ಶಶೀಲ ನಮೋಶಿ ಅವರು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮೇ 1 ರಿಂದ,ಜೂನ್ 14 ರ ವರೆಗೆ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಜೂನ್ 15 ರಿಂದ ಜುಲೈ 14 ರವರೆಗೆ ರಜೆ ಘೋಷಿಸಲಾಗಿದೆ.
ಪ್ರೌಢಶಾಲಾ ಶಿಕ್ಷಕರಿಗೆ ನೀಡಿದ ರಜೆಯ ಅವಧಿಯಲ್ಲಿಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯ ಬರುತ್ತವೆ.ಇದರಲ್ಲಿಯೇ ಬೇಸಿಗೆ ರಜೆ ಮುಗಿದು ಹೋಗುತ್ತದೆ.ಆದ್ದರಿಂದ ಶಿಕ್ಷಕರಿಗೆ ಸಮಸ್ಯೆಯಾಗದಂತೆ ರಜೆ ಘೋಷಿಸುವಂತೆ ಅವರು ಕೋರಿದ್ದಾರೆ.