ರಜನೀಕಾಂತ್ ಗೆ ಬಾಲಿವುಡ್ ಗಣ್ಯರಿಂದ ಶುಭಾಶಯಗಳ ಮಹಾಪೂರ, ಕೆ ಸಿ ಬೊಕಾಡಿಯಾ ಹೇಳಿದ ಕತೆ ಕೇಳ್ತೀರಾ!

ಸೂಪರ್ ಸ್ಟಾರ್ ರಜನೀಕಾಂತ್ ರನ್ನು ೫೧ನೇ ದಾದಾಸಾಹೇಬ್ ಫಾಲ್ಕೆ ಪುರಸ್ಕಾರಕ್ಕೆ ಆಯ್ಕೆಯ ಘೋಷಣೆಯ ನಂತರ ಅವರ ಅಭಿಮಾನಿಗಳಷ್ಟೇ ಅಲ್ಲ ಅವರ ಜೊತೆಗೆ ಕೆಲಸ ಮಾಡಿದ ನಟ-ನಟಿಯರು, ನಿರ್ಮಾಪಕ-ನಿರ್ದೇಶಕರು ಫಿಲ್ಮ್ ಮೇಕರ್ ಎಲ್ಲರೂ ಖುಷಿಗೊಂಡಿದ್ದಾರೆ .ಹಾಗೂ ರಜನೀಕಾಂತ್ ರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.


ರಜನೀಕಾಂತರ ಜೊತೆ ಹಿಂದಿ ಫಿಲ್ಮ್ ಗಳನ್ನು ಮಾಡಿರುವ ನಿರ್ಮಾಪಕ-ನಿರ್ದೇಶಕ ಕೆ.ಸಿ. ಬೊಕಾಡಿಯಾ ಅವರೂ ಶುಭಾಶಯ ನೀಡಿದ್ದಾರೆ.
ಕೆ.ಸಿ ಬೊಕಾಡಿಯಾ ಹೇಳುತ್ತಾರೆ -ನಾನು ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಫೂಲ್ ಬನೇ ಅಂಗಾರೇ, ಇನ್ಸಾನಿಯತ್ ಕಾ ದೇವತಾ, ಇಂಸಾಫ್ ಕೌನ್ ಕರೇಗಾ, ಅಸಲಿ-ನಕಲೀ ಮತ್ತು ತ್ಯಾಗೀ… ಹೀಗೆ ಐದು ಫಿಲ್ಮ್ ಗಳನ್ನು ಮಾಡಿರುವೆ .ಅವರು ಉತ್ತಮ ನಟ ಮಾತ್ರ ಅಲ್ಲ ಒಳ್ಳೆಯ ಮನುಷ್ಯರು ಆಗಿದ್ದಾರೆ. ನಾವಿಬ್ಬರೂ ಮದ್ರಾಸಿನಲ್ಲಿ ಅಕ್ಕಪಕ್ಕದಲ್ಲಿ ವಾಸಿಸುತ್ತೇವೆ ಎನ್ನುತ್ತಾ ಹಿಂದಿನ ಒಂದು ಕತೆಯನ್ನು ಹಂಚಿಕೊಂಡಿದ್ದಾರೆ.
“ಒಂದು ಸಲ ಏನಾಯ್ತು ಅಂದರೆ ’ಫೂಲ್ ಬನೇ ಅಂಗಾರೆ’ ಫಿಲ್ಮ್ ನ ಶೂಟಿಂಗ್ ಗಾಗಿ ನಾವು ಉದಯಪುರಕ್ಕೆ ತೆರಳಿದ್ದೆವು. ರಜನೀಕಾಂತ್ ಅವರ ಮನೆಯಿಂದಲೇ ನಾವು ಹೊರಟಿದ್ದೆವು. ಸ್ವಲ್ಪ ದೂರ ಹೋದನಂತರ ರಸ್ತೆಯಲ್ಲಿ ವಿಪರೀತ ಟ್ರಾಫಿಕ್ ಜಾಮ್ ಇತ್ತು. ಆವಾಗ ಜಯಲಲಿತಾ ಮುಖ್ಯಮಂತ್ರಿಯಾಗಿದ್ದರು. ಅವರು ಆ ರಸ್ತೆಯಲ್ಲಿ ತೆರಳುವ ಕಾರಣ ಪೊಲೀಸರು ರಸ್ತೆಯಲ್ಲಿ ಇತರ ವಾಹನಗಳಿಗೆ ಹೋಗಲು ಬಿಡಲಿಲ್ಲ. ಜಯಲಲಿತಾರ ವಾಹನ ಹೋದ ನಂತರವೇ ಇತರರ ವಾಹನಗಳನ್ನು ಹೋಗಲು ಪೊಲೀಸರು ಅನುಮತಿ ನೀಡುತ್ತೇವೆ ಎಂದರು. ಹಾಗಾಗಿ ಪೊಲೀಸರು ರಜನೀಕಾಂತರ ವಾಹನವನ್ನೂ ನಿಲ್ಲಿಸಿದ್ದರು. ಆಗ ರಜನೀಕಾಂತರು ಪೊಲೀಸರ ಬಳಿ “ನಮಗೆ ಫ್ಲೈಟ್ ಹಿಡಿಯಲು ತಡ ಆಗುತ್ತದೆ” ಎಂದರೂ ಪೊಲೀಸರು ಕೇಳಲಿಲ್ಲ. ನಂತರ ರಜನೀಕಾಂತ್ ಅವರು ಕೆ.ಸಿ ಬೊಕಾಡಿಯಾರ ಬಳಿ ಹೇಳಿದರು -“ನಾವು ನಡೆದುಕೊಂಡು ಮುಂದೆ ಹೋಗೋಣ. ಅಲ್ಲಿಂದ ಟ್ಯಾಕ್ಸಿ ಹಿಡಿಯುವ”ಎಂದು . ಬ್ಯಾಗ್ ಹಿಡಿದು ಇಬ್ಬರೂ ನಡೆದರು.ಇವರಿಬ್ಬರು ನಡೆದುಕೊಂಡು ಹೋಗುತ್ತಿದ್ದಂತೆ ರಜನೀಕಾಂತ್ ರನ್ನು ಕಂಡ ಜನ ಭಾರೀ ಸಂಖ್ಯೆಯಲ್ಲಿ ಅಲ್ಲಿ ನೆರೆದರು. ಕೊನೆಗೆ ಈ ಅಭಿಮಾನಿ ಜನರನ್ನು ನಿಯಂತ್ರಿಸಲು ಕಷ್ಟ ಆಗಿ ಪೊಲೀಸರು ಇವರಿಬ್ಬರನ್ನು ಕಾರಲ್ಲಿ ಕೂರಿಸಿ ಏರ್ಪೋರ್ಟಿಗೆ ಬಿಟ್ಟರಂತೆ.

ನೂರಕ್ಕಿಂತ ಹೆಚ್ಚು ಫಿಲ್ಮ್ ಗಳಲ್ಲಿ ಅಭಿನಯಿಸಿದ ೮೮ರ ಶಶಿಕಲಾ ನಿಧನ

ಐವತ್ತು ಅರವತ್ತರ ದಶಕದ ಪ್ರಖ್ಯಾತ ಪೋಷಕ ನಟಿ ಶಶಿಕಲಾ ಎಪ್ರಿಲ್ ೪ರಂದು ತಮ್ಮ ೮೮ ನೇ ವರ್ಷದಲ್ಲಿ ನಿಧನರಾದರು. ಅವರ ನಿಧನದ ಸುದ್ದಿಯನ್ನು ಲೇಖಕ ಕಿರಣ್ ಕೊಟ್ರಿಯಾಲ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನೂರಕ್ಕಿಂತ ಹೆಚ್ಚು ಫಿಲ್ಮ್ ಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿರುವ ಶಶಿಕಲಾ ಅವರು ಆಗಸ್ಟ್ ೪, ೧೯೩೨ ರಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ಜನಿಸಿದ್ದರು.


ಭಾರತೀಯ ಸಿನೆಮಾದಲ್ಲಿ ಶಶಿಕಲಾ ಅವರ ಕೊಡುಗೆ ಬಹಳ ದೊಡ್ಡದು. ೨೦೦೭ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು. ೨೦೦೯ ರಲ್ಲಿ ವಿ .ಶಾಂತಾರಾಮ್ ಪ್ರಶಸ್ತಿ ಸಂದರ್ಭದಲ್ಲಿ (ಲೈಫ್ ಟೈಮ್ ಅಚೀವ್ಮೆಂಟ್) ಜೀವಮಾನ ಶ್ರೇಷ್ಟ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿತ್ತು.
ಶಶಿಕಲಾ ಅವರು ತನ್ನ ೧೧ನೇ ವಯಸ್ಸಿನಲ್ಲಿ ಅಭಿನಯವನ್ನು ಆರಂಭಿಸಿದ್ದರು. ಶಶಿಕಲಾ ಅವರ ಪೂರ್ಣ ಹೆಸರು ಶಶಿಕಲಾ ಜಾವಲ್ಕರ್ ಎಂದು. ಅವರು ಓಂ ಪ್ರಕಾಶ್ ಸಹಗಲ್ ಅವರನ್ನು ವಿವಾಹವಾಗಿದ್ದರು.೧೧ ವರ್ಷ ಪ್ರಾಯದಲ್ಲೇ ಅವರ ಪರಿವಾರ ಮುಂಬೈಗೆ ಬಂದಿತ್ತು.ಒಮ್ಮೆ ಶಶಿಕಲಾ ಅವರು ನಟಿ ಮತ್ತು ಗಾಯಕಿ ನೂರ್ಜಹಾಂ ಅವರನ್ನು ಭೇಟಿ ಮಾಡಿದರು. ನೂರ್ಜಹಾಂರಿಗೆ ಶಶಿಕಲಾ ಇಷ್ಟವಾದರು .ಅವರು ತನ್ನ ಪತಿಗೆ ತಿಳಿಸಿ ಶಶಿಕಲಾಗೆ ಫಿಲ್ಮ್ ನಲ್ಲಿ ಕೆಲಸವನ್ನು ನೀಡಿದರು. ಶಶಿಕಲಾ ೧೯೪೫ ರಲ್ಲಿ ಫಿಲ್ಮ್ ’ಜೀನತ್’ನಲ್ಲಿ ಅಭಿನಯಿಸಿದ್ದರು.ಆ ಕಾಲದಲ್ಲಿ ಅವರಿಗೆ ೨೫ ರೂಪಾಯಿ ಸಿಕ್ಕಿತ್ತು.


ಫಿಲ್ಮ್ ಗಳ ನಂತರ ಅವರು ಕಿರುತೆರೆಯತ್ತ ಮುಖ ಮಾಡಿದರು .ಜೀನಾ ಇಸೀ ಕಾ ನಾಮ್, ಅಪ್ನಾಪನ್, ದಿಲ್ ದೇಕೇ ದೇಖೋ, ಆಹ್, ಸೋನಪರೀ….. ಇತ್ಯಾದಿಗಳಲ್ಲಿ ಕೆಲಸ ಮಾಡಿದ್ದರು. ಸಿನಿಮಾಗಳಲ್ಲಿ ಅವರು ತಾಯಿಯ ಪಾತ್ರವನ್ನು ನಿರ್ವಹಿಸಿದ್ದರು. ಇವುಗಳಲ್ಲಿ ಪರ್ದೇಸಿ ಬಾಬು, ಮದರ್ ೯೮, ಬಾದಶಾಹ, ಕಭೀ ಕುಶೀ ಕಭೀ ಗಮ್, ಮುಜ್ ಸೆ ಶಾದೀ ಕರೋಗಿ… ಪ್ರಮಖವಾದುದು.


ಪತಿಯ ಜೊತೆ ಜಗಳವಾದ ನಂತರ ಶಶಿಕಲ ಓರ್ವ ವ್ಯಕ್ತಿಯ ಜೊತೆ ವಿದೇಶಕ್ಕೆ ತೆರಳಿದ್ದರು. ಆದರೆ ಆ ವ್ಯಕ್ತಿ ಶೋಷಣೆ ಮಾಡುತ್ತಿದ್ದನು. ಹೀಗಾಗಿ ಮರಳಿ ಅವರು ಭಾರತಕ್ಕೆ ಬಂದಿದ್ದರು. ಕೆಲವೊಮ್ಮೆ ಹುಚ್ಚರಂತೆ ರಸ್ತೆಯಲ್ಲಿ ತಿರುಗಿದ್ದು ಇದೆ, ಫುಟ್ಪಾತಿನಲ್ಲಿ ಮಲಗಿದ್ದೂ ಇದೆ.ಅವರು ಮಾನಸಿಕ ಶಾಂತಿಯ ಹುಡುಕುತ್ತಾ ಮಂದಿರಗಳಿಗೆ ಆಶ್ರಮಗಳಿಗೆ ತೆರಳಿದ್ದರು. ನಂತರ ಕೊಲ್ಕತಾಕ್ಕೆ ತೆರಳಿದರು ಹಾಗೂ ಮದರ್ ತೆರೇಸಾರ ಜೊತೆ ೯ ವರ್ಷಗಳ ಕಾಲ ಇದ್ದು ಅಲ್ಲಿ ಜನರ ಸೇವೆ ಮಾಡಿದರು . ಸ್ವಲ್ಪ ಶಾಂತಿ ಸಿಕ್ಕಿದ ನಂತರ ಮತ್ತೆ ಮುಂಬೈಗೆ ಬಂದರು. ಫಿಲ್ಮ್ ಗಳಲ್ಲಿ ಅಭಿನಯಿಸಿದರು. ತನ್ನ ಬದುಕಿನ ಕೊನೆಯ ದಿನಗಳಲ್ಲಿ ಶಶಿಕಲಾ ಕಿರಿಯ ಮಗಳು ಮತ್ತು ಅಳಿಯನ ಜೊತೆ ವಾಸಿಸಿದ್ದರು. ದೊಡ್ಡ ಮಗಳು ಕ್ಯಾನ್ಸರ್ ನಲ್ಲಿ ೧೯೯೩ ರಲ್ಲಿ ನಿಧನರಾಗಿದ್ದರು.

ಮುಂದಿನ ತಿಂಗಳು ಹೃತಿಕ್ ರೋಷನ್ ರಿಂದ ’ವಿಕ್ರಂ ವೇಧಾ’ ಹಿಂದಿ ರಿಮೇಕ್ ಶೂಟಿಂಗ್ ಆರಂಭ

ಹೃತಿಕ್ ರೋಷನ್ ಮುಂದಿನ ತಿಂಗಳಿನಿಂದ ತಮಿಳು ಸಿನಿಮಾದ ಸೂಪರ್ ಹಿಟ್ ಫಿಲ್ಮ್ ”ವಿಕ್ರಂ ವೇಧಾ’ ಇದರ ಹಿಂದಿ ರಿಮೇಕ್ ನ ಶೂಟಿಂಗ್ ಆರಂಭ ಮಾಡಲಿದ್ದಾರೆ .


ಮೂಲ ಫಿಲ್ಮ್ ನ ನಿರ್ದೇಶಕ ಜೋಡಿ ಪುಷ್ಕರ್- ಗಾಯತ್ರಿ ಈ ದಿನಗಳಲ್ಲಿ ಮುಂಬೈಯಲ್ಲಿ ಇದ್ದಾರೆ. ಹಾಗೂ ಲೊಕೇಶನ್ ಹುಡುಕಾಟದಲ್ಲಿ ಮಗ್ನರಾಗಿದ್ದಾರೆ.
ಮುಂಬೈಯಲ್ಲಿ ಫಿಲ್ಮ್ ನ ಮೊದಲ ಶೆಡ್ಯೂಲ್ ಶೂಟಿಂಗ್ ಮಾಡಲಾಗುವುದು .ಇದಕ್ಕಾಗಿ ಶಹರದ ಬೇರೆ ಕಡೆ ಲೊಕೇಶನ್ ಹುಡುಕುತ್ತಿದ್ದಾರೆ.ಹಾಗೂ ಲಕ್ನೋದ ಬೇರೆಬೇರೆ ಜಾಗಗಳನ್ನು ಇಲ್ಲಿ ರೀ ಕ್ರಿಯೇಟ್ ಮಾಡಲಾಗುತ್ತಿದೆ. ಫಿಲ್ಮ್ ನಲ್ಲಿ ಹೃತಿಕ್ ಮೊದಲ ಬಾರಿಗೆ ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಲಿದ್ದಾರೆ. ಹಾಗೂ ಸೈಫ್ ಆಲಿ ಖಾನ್ ಗ್ಯಾಂಗ್ ಸ್ಟರ್ ಪಾತ್ರದಲ್ಲಿದ್ದಾರೆ.
ಈ ಫಿಲ್ಮ್ ನಲ್ಲಿ ಇಬ್ಬರು ಹೀರೋಯಿನ್ ಇರುವರು .ಆದರೆ ಅವರು ಯಾರು ಎಂದು ಇನ್ನೂ ಹೆಸರು ಬಹಿರಂಗಪಡಿಸಿಲ್ಲ.