ರಜನಿಕಾಂತ್ ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಮಾತ್ರ.. ಪಕ್ಷ ಸೇರುವೆ: ರಾಘವ ಲಾರೆನ್ಸ್


ಚೆನ್ನೈ, ಸೆ 14-ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪಕ್ಷ ಸೇರಿ ಜನ ಸೇವೆ ಮಾಡುವುದಾಗಿ ಕೆಲ ದಿನಗಳ ಹಿಂದೆ ಹೇಳಿದ್ದ ತಮಿಳು ಚಿತ್ರ ನಿರ್ದೇಶಕ, ನಟ ರಾಘವ ಲಾರೆನ್ಸ್, ಈಗ , ರಜನಿಕಾಂತ್ ಮುಖ್ಯಮಂತ್ರಿ ಅಭ್ಯರ್ಥಿಯಾದರೆ ಮಾತ್ರ ಅವರ ಪಕ್ಷ ಸೇರುವುದಾಗಿ ಮನಸ್ಸು ಬದಲಿಸಿದ್ದಾರೆ.
ಮುಖ್ಯಮಂತ್ರಿ ಪದವಿ ಮೇಲೆ ತಮಗೆ ಆಸೆ ಇಲ್ಲ, ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿಂದ ರಾಜಕೀಯಕ್ಕೆ ಬರಲಿಲ್ಲ ಎಂದು ಕೆಲ ದಿನಗಳ ಹಿಂದೆ ರಜನಿ ಹೇಳಿದ್ದರು. ಈ ಹೇಳಿಕೆಗೆ ಲಾರೆನ್ಸ್ ಈಗ ಬೇಸರ ವ್ಯಕ್ತಪಡಿಸಿದ್ದಾರೆ.
ರಜನಿ ಅಭಿಮಾನಿಗಳು ಅವರನ್ನು ತಮಿಳುನಾಡು ಮುಖ್ಯಮಂತ್ರಿಯಾಗಿ ನೋಡಲು ಬಯಸಿದ್ದಾರೆ. ರಜನಿಕಾಂತ್ ಅವರು ತಮ್ಮ ನಿಲುವು ಬದಲಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
“ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ” .. ರಜನಿಕಾಂತ್ ತಮಿಳುನಾಡು ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎಂಬುದು ನನ್ನ ಮನವಿ. ಆ ಸ್ಥಾನದ ಮೇಲೆ ತಮಗೆ ಆಸಕ್ತಿ ಇಲ್ಲ ಎಂದು ಅವರು ಕೆಲ ಸಮಯದ ಹಿಂದೆ ಲೀಲಾ ಪ್ಯಾಲೇಸ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹೇಳಿದ್ದರು.

ಆಗ ಅವರ ನಿಲುವು ವಿರೋಧಿಸಲು ಮನಸ್ಸು ಬರಲಿಲ್ಲ, ಅವರನ್ನು ಬೆಂಬಲಿಸಿ ಎಂದು ಆಗ ಟ್ವೀಟ್ ಮಾಡಿದ್ದೆ. ಆದರೆ ಈಗ ಕೇವಲ ನಾನೊಬ್ಬ ಮಾತ್ರವಲ್ಲ ಅವರ ಎಲ್ಲಾ ಅಭಿಮಾನಿಗಳು ನನ್ನಂತೆಯೇ ಭಾವಿಸಿದ್ದಾರೆ.
ತಾವು ಪ್ರತಿ ಬಾರಿ ರಜನಿಕಾಂತ್ ಅವರಿಗೆ ಫೋನ್ ಮಾಡಿದಾಗ .. ಅವರ ನಿರ್ಧಾರ ಬದಲಾಯಿಸುವಂತೆ ಕೋರುತ್ತಿದ್ದೇನೆ. ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಮಾತ್ರ .. ಅವರ ಪಕ್ಷಕ್ಕೆ ಸೇರಿ ಸೇವೆ ಸಲ್ಲಿಸುತ್ತೇನೆ. ರಜನಿ ಒಪ್ಪದಿದ್ದರೆ .. ಮನವರಿಕೆ ಮಾಡಲು ಎಲ್ಲ ಪ್ರಯತ್ನ ನಡೆಸುತ್ತೇನೆ. ಅವರು ಒಪ್ಪದಿದ್ದರೆ. ನನ್ನಪಾಡಿಗೆ ನಾನು ಸೇವಾ ಕಾರ್ಯಕ್ರಮ ಮುಂದುವರಿಸುತ್ತೇನೆ ಎಂದು ಲಾರೆನ್ಸ್ ಹೇಳಿದ್ದಾರೆ.
ಲಾರೆನ್ಸ್ ಪ್ರಸ್ತುತ ‘ಲಕ್ಷ್ಮಿ ಬಾಂಬ್’ ಚಿತ್ರ ನಿರ್ಮಾಣ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇದು ‘ಕಾಂಚನ’ ಚಿತ್ರದ ಹಿಂದಿ ರಿಮೇಕ್ ಆಗಿದೆ. ಅಕ್ಷಯ್ ಕುಮಾರ್, ಕಿಯಾರಾ ಅಡ್ವಾಣಿ ತಾರಾಗಣದಲ್ಲಿದ್ದಾರೆ. ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ನಿರ್ಮಾಣದ ನಂತರದ ಕೆಲಸಗಳು ಇನ್ನೂ ಆರಂಭಗೊಳ್ಳಬೇಕಿವೆ