ರಘು ಆಚಾರ್ ವಿರುದ್ಧ ಷ್ಯಡ್ಯಂತ್ರ
ವಿಶ್ವ ಕರ್ಮ ವಿಕಾಸ ವೇದಿಕೆ ಖಂಡನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮಾ,18- ಹಿಂದುಳಿದ ವರ್ಗದ ಅತೀ ಸಣ್ಣ ಸಮುದಾಯದ ಜಿ.ರಘುಆಚಾರ್ ಅವರ ವಿರುದ್ಧ ಅತಿದೊಡ್ಡ ಸಮಾಜದ ಕೆಲವು ವ್ಯಕ್ತಿಗಳು ಷಡ್ಯಂತ್ರ ಮಾಡಿರುವುದನ್ನು ಬಳ್ಳಾರಿ ಜಿಲ್ಲಾ ವಿಶ್ವಕರ್ಮ ವಿಕಾಸ ವೇದಿಕೆ ಖಂಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ ಸ.ಸೋನಾರ ಅವರು. ಚಿತ್ರದುರ್ಗ-ದಾವಣಗೆರೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸತತವಾಗಿ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಭ್ರಷ್ಟಾಚಾರ ರಹಿತ ಪ್ರಾಮಾಣಿಕ ಸೇವೆ ಸಲ್ಲಿಸಿರುವ ರಘು ಆಚಾರ್ ಅವರು. ಈ ಬಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದ್ದು, ನಿರಂತರವಾಗಿ ಕ್ಷೇತ್ರದ ಜನರ ಜೊತೆ ಸಂಪರ್ಕ ಹೊಂದಿದ್ದಾರೆ. ಕ್ಷೇತ್ರದ ಎಲ್ಲಾ ಸಮುದಾಯಗಳ ಜೊತೆಗೆ ಒಳ್ಳೆಯ ಒಡನಾಟ ಹೊಂದಿ ಜನರ ಕಷ್ಟ ಸುಖಗಳಿಗೆ ಬೆಂಬಲವಾಗಿ ನಿಂತಿದ್ದಾರೆ, ಆದರೆ ಹಿಂದುಳದ ವರ್ಗದ ಅತೀ ಸಣ್ಣ ಸಮುದಾಯವನ್ನು ಪ್ರತಿನಿಧಿಸುವ ಆಚಾರ, ಅವರಿಗೆ ಟಿಕೆಟ್ ತಪ್ಪಿಸುವ ಸಲುವಾಗಿ ವ್ಯವಸ್ಥಿತವಾಗಿ ಸಂಚು ರೂಪಿಸಿ ಅವರ ವಿರುದ್ಧ ಒಂದು ಪ್ರಬಲ ಸಮುದಾಯದ ಕೆಲ ಬೆರಳೆಣಿಕೆಯ ವ್ಯಕ್ತಿಗಳು ಜಾತಿಯ ಜನರನ್ನು ಎತ್ತಿಕಟ್ಟಲು ಯತ್ನಿಸುತ್ತಿರುವುದು, ಮತ್ತು ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ.
ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ವಿಶ್ವಕರ್ಮ ಸಮಾಜ ಕೇಳುತ್ತಿರುವುದು ಒಂದೇ ಒಂದು ಸ್ಥಾನ ಅದು ಚಿತ್ರದುರ್ಗ ನಗರ. ಈ ಕ್ಷೇತ್ರದ ಟಿಕೆಟ್  ರಘು ಆಚಾರ್ ರವರಿಗೆ ಟಿಕೆಟ್ ನೀಡಿದಲ್ಲಿ. ಇಡೀ ಕರ್ನಾಟಕ ರಾಜ್ಯದಲ್ಲಿನ ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯದ ಸಮಾಜಿಕ ನ್ಯಾಯ ದೊರಕಿಸಿದಂತೆ ಆಗುತ್ತದೆ.
ಸಮಾಜವು ಎಲ್ಲಾ ಕ್ಷೇತ್ರದಲ್ಲೂ ನಿರ್ಣಾಯಕ ಮತದಾರರನ್ನು ಹೊಂದಿರುತ್ತೇವೆ, ಆದ್ದರಿಂದ ಹಿಂದುಳಿದ ವರ್ಗದ ಅತೀ ಸಣ್ಣ ಸಮಾಜವನ್ನು ಕಡೆಗಣಿಸದೇ ಕಾಂಗ್ರೆಸ್‌ ಪಕ್ಷದಲ್ಲೇ ಇರುವ ನಿಷ್ಠಾವಂತರಾದ  ರಘು ಆಚಾರ್ ಈ ಬಾರಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದು.
ಅವರಿಗೆ ಟಿಕೆಟ್ ನೀಡಿ. ವಿಶ್ವಕರ್ಮ ಸಮುದಾಯ ಹಾಗೂ ಅಹಿಂದ ವರ್ಗದ ಪರವಾಗಿ ಪಕ್ಷದ ಹೈಕಮಾಂಡ್‌ಗೆ ವಿನಯ ಪೂರ್ವಕವಾಗಿ ಒತ್ತಾಯಿಸುತ್ತೇವೆ ಎಂದಿದ್ದಾರೆ.