ರಕ್ಷ ಬಂಧನ, ಶ್ರೀ ಕೃಷ್ಣ ಜಯಂತಿ ಆಚರಣೆ

ಮಾನ್ವಿ,ಸೆ.೧೪- ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ರಕ್ಷ ಬಂಧನ ಹಾಗೂ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮಕ್ಕೆ ಛತ್ತೀಸ್‌ಗಡ ರಾಯಪೂರದ ಬ್ರಹ್ಮಕುಮಾರಿ ಅಂಜನಾ ಬೇಹನ್ ಚಾಲನೆ ನೀಡಿ ಸಂದೇಶ ನೀಡಿದ ಅವರು ಭಾರತದಲ್ಲಿ ಹಬ್ಬಗಳನ್ನು ಪವಿತ್ರತೆಯ ಸಂಕೇತವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು ಹಬ್ಬಗಳು ಜನರಲ್ಲಿ ಭಾವೈಕ್ಯೆತೆಯನ್ನು ಸಹೋದರ ಭಾವನೆಯನ್ನು ಮೂಡಿಸುತ್ತಿವೆ ರಕ್ಷ ಬಂಧನ ಹಬ್ಬವು ಸಹೋದರಿಗೆ ಸಹೋದರನ ರಕ್ಷಣೆಯನ್ನು ನೀಡುವ ಸಂದೇಶವನ್ನು ನೀಡುತ್ತದೆ ಎಂದರು.
ವರ್ತಮಾನದಲ್ಲಿ ಪರಮಾತ್ಮನ ಶ್ರೀರಕ್ಷೆ ಇರಲು ಸಾಂಸರದಲ್ಲಿನ ದುಃಖದಿಂದ ದೂರವಾಗಿ ನಿಜವಾದ ಪರಮ ಸುಖವನ್ನು,ಸಂತೋಷವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಕ್ಕಳು ಕೃಷ್ಣ ಮತ್ತು ರಧೆಯ ವೇಷವನ್ನು ಹಾಕಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಬ್ರಹ್ಮಕುಮಾರಿ ಅಂಜನಾ ಬೇಹನ್ ಎಲ್ಲಾರಿಗೂ ರಾಖೀಯನ್ನು ಕಟ್ಟಿ ಶುಭಕೋರಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ನಿರ್ಮಾಲ ಬೇಹನ್, ಬ್ರಹ್ಮಕುಮಾರಿ ಅಕ್ಕಮ್ಮ ಸೇರಿದಂತೆ ಇನ್ನಿತರರು ಇದ್ದರು.