
ಅಥಣಿ : ಸೆ.1:ರಾಖಿ ಹಬ್ಬವು ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಬಲಪಡಿಸುವುದು ಮಾತ್ರವಲ್ಲದೆ ಕುಟುಂಬದಲ್ಲಿ ಏಕತೆ, ಪ್ರೀತಿ ಮತ್ತು ಗೌರವದ ಭಾವನೆಯನ್ನು ಬೆಳೆಸುತ್ತದೆ ಎಂದು ಜಮಖಂಡಿಯ ವಿವೇಕಾನಂದ ಆಶ್ರಮದ ಸ್ವಾಮಿ ಗಿರಿಜೇಶಾನಂದ ಸ್ವಾಮೀಜಿ ಹೇಳಿದರು.
ಬುಧವಾರ ಗ್ರಾಮದ ಸಂಸ್ಕøತಿ ಸೇವಾ ಪೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ರಕ್ಷಾ ಅಂದರೇನು ಅನ್ನೋದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದ್ದು, ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸಲೆಂದು ತನ್ನ ಸಹೋದರನ ಕೈಗೆ ರಾಖಿಯನ್ನು ಕಟ್ಟುತ್ತಾಳೆ. ರಕ್ಷಾ ಬಂಧನವು ಹಬ್ಬವು ಕುಟುಂಬಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಒಡಹುಟ್ಟಿದವರ ಬಾಂಧವ್ಯದ ಮಹತ್ವವನ್ನು ಬಲಪಡಿಸುತ್ತದೆ. ಇಂತಹ ಸಂಸ್ಕೃತಿಯ ಶಕ್ತಿಯನ್ನು ಮಕ್ಕಳಲ್ಲಿ ಬೆಳೆಸುವುದರ ಮೂಲಕ ನಮ್ಮ ಸಂಸ್ಕೃತಿ ಎತ್ತಿ ಹಿಡಿಯುವ ಅವಶ್ಯಕತೆ ಇದೆ ಎಂದರು.
ಈ ವೇಳೆ ಹಿರಿಯ ಶಿಕ್ಷಕ ವಿಜಯಕುಮಾರ ಕುಮಠಳ್ಳಿ, ರವಿ ಕಾಂಬಳೆ, ವಿನಾಯಕ ಮಾಳಿ, ರೇಖಾ ಶಿರಹಟ್ಟಿ, ವಿಜಯಾನಂದ ಮೋರೆ, ತಾರಕಾನಂದ ಪೂಜಾರಿ, ಕೃಷ್ಣ ರಾಠೋಡ, ಜ್ಯೋತಿ ಪಾಟೀಲ, ನಿಂಗಪ್ಪ ಲಗಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.