
ಕಲಬುರಗಿ,ಆ.31: ಭಾರತ ವಿಶ್ವದ ಸಂಸ್ಕøತಿಯ ತವರೂರು. ‘ವಿವಿಧತೆಯಲ್ಲಿ ಏಕತೆ’ಯನ್ನುಂಟು ಮಾಡುವ ಅಂಶಗಳಲ್ಲಿ ಹಬ್ಬ, ಆಚರಣೆಗಳು ತಮ್ಮದೇ ಆದ ಪ್ರಮುಖವಾದ ಪಾತ್ರಗಳನ್ನು ವಹಿಸಿವೆ. ಎಲ್ಲರಲ್ಲಿ ಭಾತೃತ್ವ ಭಾವನೆಯನ್ನು ಸಾರುವ ರಕ್ಷಾ ಬಂಧನವು ಬಾಂಧವ್ಯದ ಬೆಸುಗೆಯ ಸಾಧನವಾಗಿದೆ ಎಂದು ಉಪನ್ಯಾಸಕ ಎಚ್.ಬಿ .ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ರಕ್ಷಾ ಬಂಧನ ಸಂದೇಶ ಕಾರ್ಯಕ್ರಮ’ದಲ್ಲಿ ಮಾತನಾಡಿದರು.
ರಾಖಿ ಕಟ್ಟುವದು ಕೇವಲ ಸಾಂಕೇತಿಕವಾಗಿರದೆ, ಸಹೋದರ-ಸಹೋದರಿಯ ಪರಸ್ಪರ ಅವಿನಾಭಾವ ಸಂಬಂಧ, ಪ್ರೀತಿ, ವಿಶ್ವಾಸದಿಂದ ಇರಬೇಕು, ಪರಸ್ಪರ ರಕ್ಷಣೆಗೆ ಧಾವಿಸಬೇಕೆಂಬ ನೀತಿಯನ್ನು ಸಾರುತ್ತದೆ. ಮಾನವನಿಗೆ ರಕ್ತ ಸಂಬಂಧಕ್ಕಿಂತಲೂ ಭಾವನಾತ್ಮಕ ಸಂಬಂಧ ದೊಡ್ಡದು. ‘ಹೆಣ್ಣು’ ಅನ್ನುವಳು ಒಬ್ಬಳೆಯಾದರೂ ಕೂಡಾ, ತಾಯಿ, ಸಹೋದರಿಯರಿಗೆ ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ ಮತ್ತು ಹೆಂಡತಿಗೆ ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ಇವೆಲ್ಲದಕ್ಕೂ ಮನಷ್ಯನ ಭಾವನೆ ಪ್ರಮುಖವಾಗಿದೆ. ಜೊತೆಗೆ ಜೀವನದಲ್ಲಿ ಪರಸ್ಪರ ನಂಬಿಕೆಯೂ ಕೂಡಾ ಮುಖ್ಯವಾಗಿದೆ. ಎಲ್ಲಿಯವರೆಗೆ ನಂಬಿಕೆಗಳು ಇರುತ್ತವೆಯೋ, ಅಲ್ಲಿಯವರೆಗೆ ಸಂಬಂಧಗಳು ಜೀವಂತವಾಗಿರುತ್ತವೆ ಎಂದು ಮಾರ್ಮಿಕವಾಗಿ ನುಡಿದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ‘ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುತ್ತದೆ’ ಎಂಬ ಮಾತಿನಂತೆ ಹೆಣ್ಣಿನ ಬಗ್ಗೆ ಸಮಾಜ ಹೊಂದಿರುವ ದೃಷ್ಟಿಕೋನ ಬದಲಾಗಿ, ಎಲ್ಲರಲ್ಲಿಯೂ ಸಹೋದರಿಯತ್ವ ಭಾವನೆಯನ್ನು ಮೂಡಿ, ಉತ್ತಮವಾದ ಸಂಸ್ಕಾರಯತ ಮೌಲ್ಯಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಪ್ರಮುಖರಾದ ಪ್ರಿಯಾಂಕಾ ದೋಟಿಕೊಳ್ಳ, ಸಾನಿಯಾ ಶೇಖ್, ಶಬಾನಾ ಅಸ್ಲಾಂ ಶೇಖ್, ಸೋಮಶೇಖರ್ ವಿ.ವಠಾರ್, ಸುನಂದಾ ತಮ್ಮಾಣಿ, ಪಾಯಲ್ ಹಿಬಾರೆ, ಐಶ್ವರ್ಯ ಬಿರಾದಾರ, ಶುಭಂ, ಪ್ರವೀಣ, ಶಿವಕುಮಾರ, ಮಲ್ಲಿಕಾರ್ಜುನ, ರಕ್ಷಿತಾ, ಸಾಕ್ಷಿ, ಭಾಗ್ಯಶ್ರೀ ಸೇರಿದಂತೆ ಮತ್ತಿತರರಿದ್ದರು.