ರಕ್ಷಾ ಬಂಧನ ನಿಮಿತ್ತ ರಾಖಿ ಖರೀದಿಯಲ್ಲಿ ಮಹಿಳೆಯರು

(ಸಂಜೆವಾಣಿ ವಾರ್ತೆ)
ಔರಾದ : ಆ.30:ಸಹೋದರತೆಯ ಸಂದೇಶ ಸಾರುವ ಹಬ್ಬವೆಂದರೆ ಅದು ರಕ್ಷಾ ಬಂಧನ. ಹಬ್ಬದ ಪ್ರಯುಕ್ತ ವರ್ಷದಂತೆ ಈ ಬಾರಿಯೂ ಮಾರುಕಟ್ಟೆಗೆ ವಿವಿಧ ಬಗೆಯ ರಕ್ಷಾಬಂಧನಗಳು ಕಾಲಿಟ್ಟಿದ್ದು ಜನರು ಜೋರಾಗಿ ಖರೀದಿ ಮಾಡುತ್ತಿದ್ದಾರೆ.
ಅಣ್ಣ-ತಂಗಿಯರ ಬಾಂಧವ್ಯದ ಪ್ರತೀಕವಾದ ನೂಲ ಹುಣ್ಣಿಮೆ (ರಕ್ಷಾ ಬಂಧನ) ಹಿನ್ನೆಲೆ ಮಹಿಳೆಯರು ತಮ್ಮ ಸಹೋದರರಿಗೆ ಕಟ್ಟಲು ಪಟ್ಟಣದ ಪ್ರಮುಖ ಮಾರುಕಟ್ಟೆಗಳಲ್ಲಿ ರಾಖಿ ಖರೀದಿಯ ಭರಾಟೆ ಜೋರಾಗಿತ್ತು.
ಪಟ್ಟಣದ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಅಮರೇಶ್ವರ ದೇಗುಲ ರಸ್ತೆ ಮತ್ತಿತರೆಡೆ ರಾಖಿ ಖರೀದಿ ಕಂಡು ಬಂತು.
ಕಣ್ಣಿಗೆ ರಾಚುವಂತಹ ನಾನಾ ನಮೂನೆಯ, ಬಣ್ಣದ ನೂಲು ಖರೀದಿ ಜೋರಾಗಿ ನಡೆಯುತ್ತಿದೆ. ನಗರದ ಅಮರೇಶ್ವರ ದೇಗುಲದ ರಸ್ತೆಯಲ್ಲಿ ರಾಕಿ ಮಾರುತ್ತಿರುವ ವ್ಯಾಪಾರಿ ಎಂ.ಡಿ ಜುಬೇರ ಸಂಜೆವಾಣಿಯೊಂದಿಗೆ ಮಾತನಾಡಿ, ಹಬ್ಬ ಆಚರಣೆ ಪ್ರಯುಕ್ತ ರಾಕಿ ಖರೀದಿಗೆ ಮಹಿಳೆಯರು ಬರುತ್ತಿದ್ದಾರೆ. ವ್ಯಾಪಾರ ಚೆನ್ನಾಗಿದೆ ಎಂದರು. ಒಟ್ಟಿನಲ್ಲಿ ರಕ್ಷಾ ಬಂಧನದ ತಯಾರಿ ಎಲ್ಲೆಡೆ ಜೋರಾಗಿದ್ದು, ಅಣ್ಣ, ತಂಗಿಯರ ಅನುಬಂಧದ ಈ ರಕ್ಷಾ ಬಂಧನದ ಹಬ್ಬ ಈಗಾಗಲೇ ಎಲ್ಲೆಡೆ ಕಳೆಗಟ್ಟಿದೆ.