
ಇಂಡಿ:ಸೆ.2: ತಾಲೂಕಿನ ತಡವಲಗಾ ಗ್ರಾಮದ ಶ್ರೀ ಗುರು ರಾಚೋಟೆಶ್ವರ ಪೂರ್ವ/ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ನೂಲ ಹುಣ್ಣಿಮೆಯ ಪ್ರಯುಕ್ತ ಸಂಭ್ರಮದ ರಕ್ಷಾ ಬಂಧನವನ್ನು ಆಚರಿಸಲಾಯಿತು.ಶಾಲೆಯ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕಿಯರು ಶಿಕ್ಷಕರಿಗೆ ರಾಖಿಯನ್ನು ಕಟ್ಟಿ ಸಿಹಿಯನ್ನು ಹಂಚಿ ಸಂಭ್ರಮಿಸಿದರು.ಅದೇ ಸಂದರ್ಭದಲ್ಲಿ ಬಿ.ಆರ್.ರೂಗಿ ಶಿಕ್ಷಕರು ಮಾತನಾಡಿ ಸಹೋದರ ಸಹೋದರಿಯರ ನಡುವಿನ ಬಾಂಧವ್ಯವನ್ನು ಆಚರಿಸುವದೇ ರಕ್ಷಾ ಬಂಧನವಾಗಿದೆ ಅಣ್ಣ-ತಂಗಿಯ ನಡುವಿನ ಬಾಂಧವ್ಯ ಸಾರುವ ಪ್ರೀತಿ ಭ್ರಾತೃತ್ವದ ಸಂಭ್ರಮವೇ ರಕ್ಷಾ ಬಂಧನ ಎಂದು ಹೇಳಿದರು.ನಂತರ ಮುಖ್ಯಗುರುಗಳಾದ ಎಚ್.ಕೆ. ಬದಾಮಿ ಅವರು ಮಾತನಾಡಿ ಅಣ್ಣ-ತಂಗಿಯ ಪ್ರೀತಿ ಭ್ರಾತೃತ್ವದ ಸಂಭ್ರಮವೇ ರಕ್ಷಾ ಬಂಧನ ಸಹೋದರತ್ವ ಮತ್ತು ರಕ್ಷೆಯನ್ನು ನೀಡುವ ಸಂಭ್ರಮದ ಹಬ್ಬವಾಗಿದೆ ಎಂದರು.ಈ ಸಂದರ್ಭದಲ್ಲಿ ಎನ್.ಡಿ.ಟಕ್ಕಳಕಿ ಶಿಕ್ಷಕರು.ಎಲ್.ಎಸ್.ಜುಮನಾಳ ಶಿಕ್ಷಕರು.ಪಿ.ಎಸ್.ಯಳಮೇಲಿ ಶಿಕ್ಷಕರು.ಶ್ರೀಮತಿ ಎ.ಎಸ್.ಇಂಡಿ ಶಿಕ್ಷಕಿಯರು.ಶ್ರೀಮತಿ ಪಿ.ಎಮ್.ಬಿರದಾರ ಶಿಕ್ಷಕಿಯರು.ಕುಮಾರಿ.ಎ.ಎಸ್.ಡಂಗಿ ಶಿಕ್ಷಕಿಯರು.ಶ್ರೀಮತಿ ಆರ್.ಎಸ್.ಕುಡುಗಿನೂರ ಶಿಕ್ಷಕಿಯರು.ಪಿ.ಎಸ್.ಹೊಸಮನಿ.
ಶ್ರೀಮತಿ ಎಸ್.ಎಮ್.ಪೂಜಾರಿ ಶಿಕ್ಷಕಿಯರು ಸೇರಿದಂತೆ ಬೋದಕೆತರ ಸಿಬ್ಬಂದಿಗಳು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.