ರಕ್ಷಣಾ ಕಾರ್ಯಾಚರಣೆಯ ಅಣುಕು ಪ್ರದರ್ಶನ

ಬೆಳಗಾವಿ,ಜು.30: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೇತೃತ್ವದಲ್ಲಿ ಹುಕ್ಕೇರಿ ತಾಲ್ಲೂಕಿನ ಕಣಗಲಾದಲ್ಲಿರುವ ಇಂಡಿಯನ್ ಬಾಟಲಿಂಗ್ ಪ್ಲಾಂಟ್ ಕಾರ್ಖಾನೆಯ ಆವರಣದಲ್ಲಿ ರಾಸಾಯನಿಕ ವಿಪತ್ತು ಸಂದರ್ಭದಲ್ಲಿ ಯಾವ ರೀತಿಯ ಕಾರ್ಯಾಚರಣೆ ಕೈಗೊಳ್ಳಬೇಕು ಎಂಬುದರ ಕುರಿತು ಅಣಕು ಪ್ರದರ್ಶನ ನಡೆಯಿತು.
ಕಾರ್ಖಾನೆಯಲ್ಲಿ ಐPಉ ಶೇಖರಣೆ ಮಾಡುತ್ತಿದ್ದು, ಅವಗಡ ಸಂಭವಿಸಿದಲ್ಲಿ ಅದನ್ನು ನಿಯಂತ್ರಣಕ್ಕೆ ತರಲು ಹಾಗೂ ಅದರಿಂದಾಗಿ ಪರಿಣಾಮಗಳನ್ನು ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ಪ್ರಾಧಿಕಾರ ತುರ್ತಾಗಿ ಹಾಗೂ ಪರಿಣಾಮಕಾರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಅಣುಕು ಪ್ರದರ್ಶನವನ್ನು ಕೈಗೊಳ್ಳಲಾಯಿತು.
ಗಾಯಾಳುಗಳನ್ನು ರಕ್ಷಿಸಿ ವೈದ್ಯಕೀಯ ಪ್ರಥಮ ಚಿಕಿತ್ಸೆಗೆ ಅಂಬೋಲೆನ್ಸ್ ಮೂಲಕ ಕರೆತಂದ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಸಂಕೇಶ್ವರ ಸಮುದಾಯ ಕೇಂದ್ರಕ್ಕೆ ಸ್ಥಳಾಂತರಿಸುವ ಕಾರ್ಯವನ್ನು ತಾಲೂಕು ಆರೋಗ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಯವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಅವಗಡ ಸಂಭವಿಸಿದ ಮಾಹಿತಿಬಂದ ತಕ್ಷಣವೇ ಜಿಲ್ಲಾ ಆಡಳಿವು ತಕ್ಷಣವೇ ಕಾರ್ಯಪ್ರವೃತ್ತರಾಗಿ ಘಟನೆ ಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಸೂಚನೆಯನ್ನು ನೀಡಿ ಅವಗಡವನ್ನು ನಿಯಂತ್ರಿಸಲು ತುರ್ತ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು.
ಅಣಕು ಪ್ರದರ್ಶನವನ್ನು ರವಿಂದ್ರ ಕರಲಿಂಗನವರ ಉಪವಿಭಾಗಾಧಿಕಾರಿಗಳು, ಬೆಳಗಾವಿ ಹಾಗೂ ವೆಂಕಟೇಶ ರಾಠೋಡ ಕಾರ್ಖಾನೆಯ ಉಪನಿರ್ದೇಶಕರು ,ಬೆಳಗಾವಿ ರವರ ನೇತೃತ್ವದಲ್ಲಿ ಹಾಗೂ ಈ ಕೆಳಕಂಡ ಅಧಿಕಾರಿಗಳ ಸಹಯೋಗದಲ್ಲಿ ಜರುಗಿತು.
ಶಶಿಧರ ಎಸ್ ನಿಲಗರ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು,ಬೆಳಗಾವಿ, ಅರವಿಂದ ಡೆಪುಟಿ ಕಮಾಂಡಟ್ Sಆಖಈ, ಬೆಳಗಾವಿ, ಹೂಗಾರ ತಹಶೀಲ್ದಾರರು, ಹುಕ್ಕೇರಿ, ಡಾ ಕುಡಚಿ ತಾಲೂಕಾ ಆರೋಗ್ಯಾಧಿಕಾರಿಗಳು, ಹುಕ್ಕೇರಿ, ವಿಶಾಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಚಿಕ್ಕೋಡಿ, ರಮೇಶ್ ಪರಿಸರ ಅಧಿಕಾರಿಗಳು ,ಚಿಕ್ಕೋಡಿ, ಗಣಪತಿ ಕೂಗನೊಳಿ PSI, ಸಂಕೇಶ್ವರ, ಸಂಜಿವಕುಮಾರ ಓಆಖಈ , ಹರ್ಷಲ್ ಪರಹಾತೆ, ರಕ್ಷಣಾ ಅಧಿಕಾರಿಗಳು, Iಔಅಐ, ಕಣಗಲಾ, ನಿಂಗನಗೌಡ ಮ ಚನಬಸನಗೌಡರ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಉಪಸ್ಥಿತರಿದ್ದರು.