ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ

ಪುತ್ತೂರು, ನ.೪- ರಾಮಕೃಷ್ಣ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ನೂತನ ಸಮಿತಿಯ ಆಯ್ಕೆ ಎಂ ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದ ಸಭಾಂಗಣದಲ್ಲಿ ನಡೆಯಿತು. ಈ ಸಭೆಯನ್ನು ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅವರು ಉದ್ಘಾಟಿಸಿದರು.

ನೂತನ ಅಧ್ಯಕ್ಷರಾಗಿ ದಂತ ವೈದ್ಯ ಡಾ ಶ್ರೀಪ್ರಕಾಶ್ ಬಿ,  ಉಪಾಧ್ಯಕ್ಷರಾಗಿ ರಘುನಾಥ ರೈ,  ಕಾರ್ಯದರ್ಶಿಯಾಗಿ ಪ್ರತಿಮಾ ಯು ರೈ, ಕೋಶಾಧಿಕಾರಿಯಾಗಿ ಕಿಶೋರ್ ಕುಮಾರ್ ಎಸ್, ಜೊತೆ ಕಾರ್ಯದರ್ಶಿಗಳಾಗಿ ಸೌಮ್ಯ ತುಳಸಿ ಮತ್ತು ನವೀನ  ಆಯ್ಕೆಗೊಂಡರು. ಸದಸ್ಯರುಗಳಾಗಿ ಆದಂ, ದೇವಪ್ಪ ನಾಯ್ಕ, ಸುಂದರ ನಾಯ್ಕ, ಜಯಕರ ರೈ, ಬಾಲಕೃಷ್ಣ ಗೌಡ, ಮೀರ, ಶೋಭಾ, ಕೃಷ್ಣವೇಣಿ, ಗೀತಾ ಹಾಗೂ ಸುನಂದ ಆಯ್ಕೆಯಾದರು.

ಮುಖ್ಯ ಶಿಕ್ಷಕಿ ರೂಪಕಲಾ ಸ್ವಾಗತಿದರು.  ಶಿಕ್ಷಕಿ ಚಿತ್ರಕಲಾ ವಂದಿಸಿದರು.  ಶಿಕ್ಷಕಿ ಪ್ರೀತಾ ಕಾರ್ಯಕ್ರಮ ನಿರೂಪಿಸಿದರು.