“ರಕ್ತ ಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ” ವಿಚಾರ ಸಂಕಿರಣ

ಕಲಬುರಗಿ,ಫೆ.3-ನಗರದ ಕುಸನೂರು ರಸ್ತೆಯಲ್ಲಿರುವ ಶ್ರೀ ಷ.ಬ್ರ.ಮಹಾಂತ ಶಿವಾಚಾರ್ಯ ಸ್ವಾಮೀಜಿ ಪದವಿ ಮಹಾವಿದ್ಯಾಲಯದಲ್ಲಿ ಎನ್‍ಎಸ್‍ಎಸ್ ಘಟಕದ ಅಡಿಯಲ್ಲಿ ಆಯೋಜಿಸಿದ್ದ ” ರಕ್ತ ಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ” ವಿಚಾರ ಸಂಕಿರಣವನ್ನು ಯುನಿಸೆಪ್ ಮತ್ತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಬಾಲ ಕಿಶೋರ ಸ್ವಾಸ್ಥ್ಯವಿಭಾಗದ ಸಂಯೋಜನಾಧಿಕಾರಿ ಶಿವಕುಮಾರ್ ಎಂ.ಕೆ. ಅವರು ಉದ್ಘಾಟಿಸಿದರು.
ಸಂಸ್ಥೆಯ ಕಾರ್ಯದರ್ಶಿ ಶಿಶಿರ್ ರೇಶ್ಮಿ, ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ರೇವಣಸಿದ್ದಯ್ಯ ಹಿರೇಮಠ, ಸಂಸ್ಥೆಯ ಆಡಳಿತ ಅಧಿಕಾರಿ ಶರಣಗೌಡ ಪಾಟೀಲ್, ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಂಯೋಜನಾಧಿಕಾರಿಯದ ರಮೇಶ್ ಪೂಜಾರಿ, ಶ್ರೀಶೈಲ ಮಠಪತಿ ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು