ರಕ್ತ ಸಹಿಸಂಗ್ರಹ ಚಳುವಳಿಗೆ ಬೆಂಬಲ

ಕಲಬುರಗಿ,ನ.29: ವೀರಶೈವ ಲಿಂಗಾಯತರನ್ನು ಮೂಲೆಗುಂಪು ಮಾಡಲು ಉದ್ದೇಶಪೂರ್ವಕ ಮತ್ತು ಅವೈಜ್ಞಾನಿಕ ಕಾಂತರಾಜ ವರದಿ ವಿರೋಧಿಸಿ ಡಾ.ರಾಜು ಕುಳಗೇರಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಜಿಲ್ಲಾ ಗೌರವ ಅಧ್ಯಕ್ಷರ ಎಂ ಎಸ್ ಪಾಟೀಲ ನರಿಬೋಳ ನೇತೃತ್ವದಲ್ಲಿ ನಾಳೆ ( ನ.30) ಆನಂದ ಹೋಟೆಲ್ ಸರ್ಕಲ್‍ನಲ್ಲಿ ಹಮ್ಮಿಕೊಂಡಿರುವ ರಕ್ತದಲ್ಲಿ ಸಹಿ ಸಂಗ್ರಹ ಚಳುವಳಿ ಬೆಂಬಲಿಸಿ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ವಿದ್ಯಾರ್ಥಿ ಯುವ ಮೋರ್ಚಾ ಪದಾಧಿಕಾರಿಗಳು ಪಾಲ್ಗೊಂಡು ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಸಹಿಸಲು ಆಗುವುದಿಲ್ಲ ಎನ್ನುವ ಸಂದೇಶ ಕೊಡುವುದಲ್ಲದೆ ಸಮಾಜದಲ್ಲಿರುವ ಒಗ್ಗಟ್ಟು ಪ್ರದರ್ಶಿಸುವುದು ಅವಶ್ಯವಾಗಿರುವುದರಿಂದ ನಾವು ಭಾಗವಹಿಸುತ್ತೇವೆ ಸಮಾಜದ ಎಲ್ಲರೂ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಉಪಾಧ್ಯಕ್ಷ ಅನುದೀಪ ದಂಡೋತಿ ತಿಳಿಸಿದ್ದಾರೆ.