ರಕ್ತ ಶುದ್ಧಿಗೆ ಮನೆ ಮದ್ದು

೧. ೪ ಚಮಚ ತುಳಸಿ ರಸವನ್ನು ಹಸುವಿನ ಮಜ್ಜಿಗೆಯಲ್ಲಿ ಕದಡಿ ಪ್ರಾತ:ಕಾಲ ಬರೀ ಹೊಟ್ಟೆಯಲ್ಲಿ ಕುಡಿಯುತ್ತಿದ್ದರೆ ರಕ್ತವು ಶುದ್ಧಿಯಾಗುವುದು.
೨. ಹಸಿಈರುಳ್ಳಿಯನ್ನು ಸೇವಿಸುವುದರಿಂದ ಕಬ್ಬಿಣದ ಅಂಶ ಜಾಸ್ತಿ ಆಗಿ ರಕ್ತ ವೃದ್ಧಿಯಾಗುತ್ತದೆ.
೩. ಕರಬೂಜ ಹಣ್ಣನ್ನು ಆಗಾಗ್ಗೆ ಸೇವಿಸುತ್ತಿದ್ದರೆ ರಕ್ತ ಶುದ್ಧಿಯಾಗಿರುತ್ತದೆ.
೪. ಸೊಗದೆ ಬೇರಿನ ಶರಬತ್ತು ಕುಡಿಯುತ್ತಿದ್ದರೆ ರಕ್ತ ಶುದ್ಧಿಯಾಗುತ್ತದೆ.
೫. ಒಣದ್ರಾಕ್ಷಿಯನ್ನು ಚೆನ್ನಾಗಿ ತೊಳೆದು, ನೆನೆಹಾಕಿ ರುಬ್ಬಿಕೊಂಡು ರಸ ತೆಗೆದು ಜೇನುತುಪ್ಪದ ಜೊತೆ ಸೇವಿಸುತ್ತಿದ್ದರೆ ರಕ್ತ ಶುದ್ಧಿ ಹಾಗೂ ರಕ್ತ ವೃದ್ಧಿಯಾಗುತ್ತದೆ.
೬. ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರಿಗೆ ನಿಂಬೆಹಣ್ಣು ಹಿಂಡಿಕೊಂಡು ೧ ಚಮಚ ಜೇನುತುಪ್ಪದ ಜೊತೆ ಕುಡಿಯುತ್ತಾ ಬಂದರೆ ರಕ್ತಶುದ್ಧಿಯಾಗುತ್ತದೆ.
೭. ದಾಳಿಂಬೆ ರಸವನ್ನು ಜೇನುತುಪ್ಪದ ಜೊತೆ ಸೇರಿಸಿ ಸೇವಿಸುತ್ತಿದ್ದರೆ ರಕ್ತ ಶುದ್ಧಿ ಹಾಗೂ ವೃದ್ಧಿಯಾಗುತ್ತದೆ.
೮. ಗರಿಕೆ ಹುಲ್ಲಿನ ರಸವನ್ನು ಬೆಳಿಗ್ಗೆ ಬರೀಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ.
೯. ಬೆಟ್ಟದ ನೆಲ್ಲಿಕಾಯಿಯನ್ನು ಜಜ್ಜಿ ಬೀಜವನ್ನು ಬೇರ್ಪಡಿಸಿ ಜೇನುತುಪ್ಪ ಹಾಕಿ ೨೧ ದಿನಗಳ ಕಾಲ ಮುಚ್ಚಿಡಿ. ನಂತರ ನೆಲ್ಲಿಕಾಯಿ ತುಣುಕುಗಳನ್ನು ತೆಗೆದುಬಿಡಿ. ಪ್ರತಿನಿತ್ಯ ೧ ಚಮಚ ಜೇನುತುಪ್ಪವನ್ನು ಸೇವಿಸುತ್ತಾ ಬಂದರೆ ೧ ತಿಂಗಳಲ್ಲಿ ರಕ್ತವು ಶುದ್ಧಿಯಾಗುತ್ತದೆ.
೧೦. ಕ್ಯಾರೆಟ್ ಹಾಗೂ ಬೀಟ್‌ರೋಟ್ ರಸವನ್ನು ಪ್ರತಿದಿನ ಬೆಳಿಗ್ಗೆ ಸೇವಿಸುತ್ತಾ ಬಂದರೆ ೧ ತಿಂಗಳಲ್ಲಿ ರಕ್ತವು ಶುದ್ಧಿಯಾಗುತ್ತದೆ ಹಾಗೂ ವೃದ್ಧಿಯಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.