ರಕ್ತ ಕ್ಯಾನ್ಸರ್ ಮಗುವಿನ ನೆರವಿಗೆ ಧರ್ಮಸ್ಥಳ ಸಂಸ್ಥೆ

ಶಿಡ್ಲಘಟ್ಟಮೇ,೨೦:ಬಡ ಕುಟುಂಬದ ಆರತಿ ಮತ್ತು ಜಗದೀಶ್ ಎಂಬುವವರ ಮಗ ೪ ವರ್ಷದ ತನ್ಮಯ್ ತೇಜ್ ಹುಟ್ಟಿನಿಂದ ರಕ್ತ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು ಕುಟುಂಬದ ಆರ್ಥಿಕ ಪರಿಸ್ಥಿತಿಯ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಮನವಿ ನೀಡಿದ ಹಿನ್ನೆಲೆ ಸಹಾಯ ಹಸ್ತ ನೀಡುವುದರ ಮೂಲಕ ನೆರವಿಗೆ ನಿಂತ
ಶ್ರೀ ಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್,ತಾಲ್ಲೂಕಿನ ವೈ ಹುಣಸೇನಹಳ್ಳಿ ಗ್ರಾಮದ ನಿವಾಸಿಗಳಾದ ಆರತಿ ಜಗದೀಶ್ ತಮ್ಮ ಮಗುವನ್ನು ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿಯಲ್ಲಿ ಮಗುವಿನ ಚಿಕಿತ್ಸೆಗಾಗಿ ಅವರು ನೀಡಿದ ಮನವಿಯನ್ನು ಪೂಜ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪರಿಶೀಲಿಸಿದ ನಂತರ ರೂ.೪೦ಸಾವಿರ ಸಹಾಯಧನ ಮಂಜೂರು ಮಾಡಿರುತ್ತಾರೆ.
ಜಿಲ್ಲಾ ನಿರ್ದೇಶಕ ಸಿ.ಎಸ್ ಪ್ರಶಾಂತ್ ರವರು ಶುಕ್ರವಾರ ಸಹಾಯಧನದ ಮಂಜೂರಾತಿ ಪತ್ರದ ಜೊತೆಗೆ ಚೆಕ್ಕನ್ನು ಕುಟುಂಬದವರಿಗೆ ವಿತರಿಸಿ ಮಾತನಾಡಿ ಈಗಾಗಲೆ ನೊಂದಿರುವ ಕುಟುಂಬ ಅವರ ಪರಿಸ್ಥಿತಿಯನ್ನು ಗಮನಿಸಿದ್ದು ತಕ್ಷಣ ನಾವು ಪೂಜ್ಯರ ಗಮನಕ್ಕೆ ತಂದಿದ್ದು ಅವರು ಮಂಜೂರು ಮಾಡಿರುವ ಹಣವನ್ನು ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಸಹಾಯದನವನ್ನು ನೀಡಲಿದ್ದೇವೆ ಎಂದರು.
ಸಂದರ್ಭದಲ್ಲಿ ಯೋಜನಾಧಿಕಾರಿ ಎಸ್. ಸುರೇಶ ಗೌಡ, ಮೇಲ್ವಿಚಾರಕಾರದ ಪಾಲನಾಯಕ್ ಹಾಗೂ ಸೇವಾಪ್ರತಿನಿಧಿ ವರಲಕ್ಷ್ಮಮ್ಮ, ಹಾಗೂ ಒಕ್ಕೂಟದ ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.