ರಕ್ತ, ಅಂಗಡಿಗಳಲ್ಲಿ ಸಿಗುವಂತಹ ವಸ್ತು ಅಲ್ಲ್ಲಾ:ಸಿದ್ದಲಿಂಗಶ್ರೀ

ತಾಳಿಕೋಟೆ:ಜು.3: ಮಾನವರಾಗಿ ಜನ್ಮ ತಾಳಿದ ನಾವು ಹೋಗುವ ಜೀವವನ್ನು ಉಳಿಸಲು ಅಂತಹದ್ದಕ್ಕೆ ಅಗತ್ಯವಿದುದ್ದನ್ನು ನೀಡಲು ಮುಂದಾಗಿ ಮಾದರಿಯ ಮನುಷ್ಯರಾಗಿ ಬಾಳಲು ಮುಂದಾಗಬೇಕೆಂದು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.

ಶನಿವಾರರಂದು ಬಕ್ರೀದ್ ಹಬ್ಬ ಹಾಗೂ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಅಂಗವಾಗಿ ಸ್ಥಳೀಯ ಲೈಫ್ ಕೇರ್ ಪೌಂಡೇಶನ್ ವತಿಯಿಂದ ವಿಜಯಪುರದ ಸಿದ್ದೇಶ್ವರ ರಕ್ತ ನಿಧಿ ಬಂಡಾರ ಇವರ ಸಂಯುಕ್ತ ಆಶ್ರಯದಲ್ಲಿ ಟೀಪು ನಗರ ಬಡಾವಣೆಯ ಶಾದಿಮಹಲ್‍ದಲ್ಲಿ ಏರ್ಪಡಿಸಲಾದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಮನ ಬಂದಂತೆ ವಾಹನಗಳನ್ನು ಚಲಾವಣೆ ಮಾಡುತ್ತಾ ಅಪಘಾತ ಪಡಿಸಿಕೊಂಡು ರಕ್ತ ಹೋರಚೆಲ್ಲಿ ಹೋಗುವದು ಬೇಡಾ ನಿಧಾನವಾಗಿ ವಾಹನ ಚಲಾವಣೆ ಮಾಡುತ್ತಾ ಜೀವ ಉಳಿಸಿಕೊಂಡು ಅನ್ಯ ಜೀವಿಗಳನ್ನು ಉಳಿಸಲು ರಕ್ತದಾನ ಮಾಡುವ ಕಾರ್ಯಕ್ಕೆ ಮುಂದಾಗಬೇಕೆಂದು ಶ್ರೀಗಳು ನುಡಿದರಲ್ಲದೇ ಜೀವ ಉಳಿಸುವ ಕಾರ್ಯಕ್ಕೆ ಮುಂದಾದವರು ಜೀವನದಲ್ಲಿ ಹೆಸರು ಪಡೆಯುತ್ತಾರೆ ಕಾರಣ ರಕ್ತದಾನಕ್ಕೆ ಆರೋಗ್ಯವಂತ ಯುವಕರು ಮುಂದಾಗಿ ರಕ್ತ ದಾನ ಮಾಡಿ ಹೋಗುವ ಜೀವ ಉಳಿಸುವದಕ್ಕೆ ಮುಂದಾಗಬೇಕೆಂದು ಶ್ರೀಮಂತನೋರ್ವ ತನ್ನ ಮಗಳಿಗೆ ರಕ್ತ ಅಗತ್ಯಬಿದ್ದಾಗ ರಕ್ತ ಸಿಗದಿದ್ದರಿಂದ ತಾನೇ ಸ್ವತಃ ರಕ್ತಬಂಡಾರ ಪ್ರಾರಂಬಿಸಿ ಅನ್ಯರ ಜೀವ ಉಳಿಸುವದಕ್ಕೆ ಮುಂದಾಗಿರುವ ಘಟನೆಯ ವಿವರಣೆಯನ್ನು ವಿವರಿಸಿದ ಶ್ರೀಗಳು ಇಂತಹ ಸೇವಾ ಕಾರ್ಯ ಮಾಡುವ ಯುವಕರಿಗೆ ಸ್ಪೂರ್ತಿ ನೀಡುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.

ಇನ್ನೋರ್ವ ಸಾಹಿತಿ ಅಶೋಕ ಹಂಚಲಿ ಮಾತನಾಡಿ ನಮ್ಮ ಬಧುಕಿನಲ್ಲಿ ಸಾರ್ಥಕತೆ ಎಂಬುದನ್ನು ಅಳವಡಿಸಿಕೊಳ್ಳಬೇಕು ಜೀವನದಲ್ಲಿ ಒಳ್ಳೆಯ ಕಾರ್ಯ ಮಾಡುತ್ತಾ ಗುರುತಿಸಿಕೊಳ್ಳದಿದ್ದರೆ ಅದಕ್ಕೆ ಅರ್ಥವೇ ಇಲ್ಲಾ ಬೆಲೆ ಎಂಬುದು ಕಿಮ್ಮತ್ತು ಎಂಬುದು ದೊರೆಯಲಾರದೆಂದರು. ಸಾರ್ಥಕತೆಯನ್ನು ಕೊನೆಯ ವರೆಗೂ ಕೊಂಡೊಯುವ ಕಾರ್ಯಕ್ಕೆ ಇಂದು ರಕ್ತದಾನ ಕಾರ್ಯಕ್ರಮಕ್ಕೆ ಯುವಕರ ಕಾರ್ಯ ಶ್ಲಾಘನೀಯವಾಗಿದೆ ಎಂದ ಅವರು ಯುವಕರಲ್ಲಿ ನಮ್ಮ ಸೇವೆ ಸಮಾಜಕ್ಕೆ ಅರ್ಪಿತವಾಗಲಿ ಎಂಬ ಉದ್ದೇಶದ ಭಾವನೆ ಬರಬೇಕೆಂದು ಹೇಳಿದ ಹಂಚಲಿ ಅವರು ರಕ್ತದಾನ ಮಾಡುವ ಇಂದಿನ ಸೇವಾ ಕಾರ್ಯ ಸಾರ್ಥಕತೆಯನ್ನು ಮೂಡಿಸುತ್ತದೆ ಈ ಕಾರ್ಯಕ್ರಮ ಏರ್ಪಡಿಸಿದ ಸಂಘಟಿಕರ ಸೇವಾ ಕಾರ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೋರ್ವ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ರಕ್ತದಾನ ಎಂಬುದರಲ್ಲಿ ಜಾತಿ ಬೇದ ಎಂಬುದು ಬರುವದಿಲ್ಲಾ ಇದನ್ನು ನಾವು ಅರ್ಥೈಸಿಕೊಳ್ಳಬೇಕೆಂಬ ಉದ್ದೇಶದಿಂದಲೋ ಏನೋ ಬಕ್ರೀದ್ ಹಾಗೂ ಶ್ರೀ ಖಾಸ್ಗತೇಶ್ವರ ಜಾತ್ರೆ ಒಮ್ಮೇಲೆ ಕೂಡಿ ಬಂದಿರುವದು ಭಾವೈಕ್ಯತೆ ಮೂಡಿಸಲೆಂದೇ ಬಂದಂತೆ ಕಾಣುತ್ತದೆ ಇಂತಹದರಲ್ಲಿಯೇ ಸ್ಥಳೀಯ ಲೈಫ್ ಕೇರ್ ಪೌಂಡೇಶನ್ ಸಂಘಟಿಕರು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿರುವದು ಮೇಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದ ಅವರು ಇಂತಹ ಕಾರ್ಯಗಳನ್ನು ಆರೋಗ್ಯವಂತ ಸದೃಡ ಯುವಕರು ಮೇಲಿಂದ ಮೇಲೆ ಮಾಡುತ್ತಾ ಸಾಗಿದರೆ ಹೋಗುವ ಜೀವ ಉಳಿಸಲು ಸಾಧ್ಯವಾಗುತ್ತದೆ ಜೀವನದಲ್ಲಿ ಸಾರ್ಥಕತೆ ಅಂತಹ ಕಾರ್ಯಗಳನ್ನು ಮಾಡಿದರೆ ಅವರ ಹೆಸರು ಅಜರಾಮರವಾಗಿ ಉಳಿಯಲಿದೆ ಎಂದರು.

ಈ ಸಮಯದಲ್ಲಿ ಧಾರ್ಮಿಕ ಮುಖಂಡ ಸೈಯದಶಕೀಲ್‍ಅಹ್ಮದ ಖಾಜಿ, ಪಿಎಸ್‍ಐ ರಾಮನಗೌಡ ಸಂಕನಾಳ, ಜಾಮೀಯಾ ಮಸೀದ ಅಧ್ಯಕ್ಷ ಎ.ಕೆ.ನಮಾಜಕಟ್ಟಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಕೆ.ಚೋರಗಸ್ತಿ, ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ, ಮಹಾಲ್ ಗಲ್ಲಿ ಅಧ್ಯಕ್ಷ ಹಸನ್ ಕೊರ್ಕಿ, ಮಮ್ಮದೀಯಾ ಮಸೀದಿಯ ಅಧ್ಯಕ್ಷ ಮೋದಿನಸಾ ನಗಾರ್ಚಿ, ಡಾ.ಆರ್.ಎಂ.ಕೋಳ್ಯಾಳ, ಡಾ.ಎ.ಎ.ನಾಲಬಂದ, ಡಾ.ಸೋಹೇಲ್ ಸಗರ್, ಉರ್ದುಶಾಲಾ ಮುಖ್ಯೋಪಾಧ್ಯಾಯ ಅಲ್ತಾಫ್ ನಗಾರ್ಚಿ, ಇಬ್ರಾಹಿಂ ಆರಬೋಳ, ಶಿಕ್ಷಕ ಆರ್.ಎಂ.ಡೋಣಿ, ಡಾ.ಎಸ್.ಆರ್.ನಾಗೂರ, ಪುರಸಭಾ ಮಾಜಿ ಸದಸ್ಯ ಗನಿಸಾಬ ಲಾಹೋರಿ, ಹಸನ್ ಮನಗೂಳಿ, ಮಹಲ್ ಗಲ್ಲಿ ಸದಸ್ಯ ಹೈದರಶ್ಯಾ ಮಕಾಂದಾರ, ಮೊದಲಾದವರು ಇದ್ದರು.

      ಸಿದ್ದೇಶ್ವರ ರಕ್ತನಿಧಿ ಬಂಡಾರದ ಟೇಕ್ನಿಶನ್ ಶ್ರೀಶೈಲ ತಡಲಗಿ, ಸುನೀಲ್ ಸಿಂಧೂರ, ಬಸವರಾಜ ಹಿರೇಮಠ, ಆಪ್ತ ಸಮಾಲೋಚಕ ರವಿ ಕೋಟ್ಯಾಳ, ಸಂತೋಷ ಬೂದಿಹಾಳ, ಇವರು ರಕ್ತ ಸಂಗ್ರಹದಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದ ನೇತೃತ್ವವನ್ನು ಪೌಂಡೇಶನ್ ಅಧ್ಯಕ್ಷ ಉಮರ್ ಆರಬೋಳ, ಉಪಾಧ್ಯಕ್ಷ ಇಲಿಯಾಸ್ ನಮಾಜಕಟ್ಟಿ, ಕಾರ್ಯದರ್ಶಿ ಇಸ್ಮಾಯಿಲ್ ಡೋಣಿ, ಸದಸ್ಯರಾದ ಮುಸಾ ಆರಬೋಳ, ಮುನ್ಸರ್ ಜಮಾದಾರ, ನೂರ ಬಿರಾದಾರ, ಆರೀಫ್ ಮುರಾಳ, ಶರೀಪ್ ಮುಲ್ಲಾ, ವೀರೇಶ ಹೊಸಮನಿ, ಸಚೀನ್ ಹೋಳಿ, ಮೊದಲಾದವರು ಉಪಸ್ಥಿತರಿದ್ದರು.

ಈ ರಕ್ತದಾನ ಶಿಬಿರದಲ್ಲಿ ಒಟ್ಟು 80 ಜನರು ರಕ್ತದಾನ ಮಾಡಿದರು. ಇದೇ ಸಮಯದಲ್ಲಿ ರಕ್ತದಾನಿಗಳಿಗೆ ಸಿದ್ದೇಶ್ವರ ರಕ್ತನಿಧಿ ಬಂಡಾರದಿಂದ ಪ್ರಮಾಣ ಪತ್ರ ನೀಡಲಾಯಿತು.

ಅಬ್ದುಲ್‍ಗನಿ ಮಕಾಂದಾರ ಸ್ವಾಗತಿಸಿ ನಿರೂಪಿಸಿದರು.