ರಕ್ತಹೀನತೆ ಬಗ್ಗೆ ಉಪನ್ಯಾಸ


ಚಳ್ಳಕೆರೆ. ಮೇ.೩; ಅನಿಮಿಯ ರಕ್ತಹೀನತೆ ಮುಕ್ತ ಹಳ್ಳಿಗಳನ್ನಾಗಿಸೋಣ ಎಂಬ ವಿಷಯ ಕುರಿತು ಸರಕಾರಿ ಪದವಿ ಪೂರ್ವ ಕಾಲೇಜು ಚಳ್ಳಕೆರೆಯ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ  ಉಪನ್ಯಾಸ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿತ್ತು.  ಆರ್ ಬಿ ಎಸ್ ಕೆ  ವೈದ್ಯಾಧಿಕಾರಿಗಳಾದ ಡಾ.ರಮೇಶ್ ಅನಿಮೀಯತೆ ಕುರಿತು ಮಕ್ಕಳಿಗೆ ಉಪನ್ಯಾಸ ನೀಡಿದರು. ವಯಸ್ಕರಲ್ಲಿ ಹೀಮೋಗ್ಲೋಬಿನ್  ೧೧ ಕ್ಕಿಂತ ಹೆಚ್ಚು ಇರಬೇಕು, ಕಬ್ಬಿನಾಂಶವುಳ್ಳ ಆಹಾರವನ್ನು ಉಪಯೋಗಿಸಿ ಅನಿಮೀಯ ಮುಕ್ತರಾಗಿ ಎಂದು ತಿಳಿಸಿದರು.     ಹಿರಿಯ ಉಪನ್ಯಾಸಕರಾದ  ಚಂದ್ರಶೇಖರ್  ಮಾತನಾಡುತ್ತಾ, ಮಕ್ಕಳು ಆರೋಗ್ಯದಿಂದ ಇದ್ದಾಗ ಮಾತ್ರ ಪಠ್ಯ ಮತ್ತು ಪಠ್ಯತರ ಚಟುವಟಿಕೆಗಳಲ್ಲಿ ತಮ್ಮನ್ನು ಅಳವಡಿಸಿ ಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಪ್ರಾಚಾರ್ಯರಾದ  ಗೋವಿಂದಪ್ಪ ಅವರು ಮಾತನಾಡುತ್ತಾ, ಮಕ್ಕಳು  ಹೇಗೆ ೨೫ ವರ್ಷ ವಯಸ್ಸಿನ ವರೆಗೆ ಬೆಳೆಯುತ್ತಾರೋ ಅದರ ಮೇಲೆ ಅವರ ಮುಂದಿನ ೭೫ ವರ್ಷದ ಜೀವನ ನಿಂತಿರುತ್ತದೆ. ಒಳ್ಳೆ ಆರೋಗ್ಯ ರೂಪಿಸಿಕೊಳ್ಳ ಬೇಕು.  ಆರೋಗ್ಯವಂತ ಮತ್ತು ಸುಸಂಸ್ಕೃತ ವಿದ್ಯಾವಂತ ಯುವಕರು ನೀವಾಗಬೇಕು ಎಂದು ತಿಳಿಸಿದರು. ಸಭೆಯಲ್ಲಿ ಕಾರ್ಯಕ್ರಮಾಧಿಕಾರಿ ಶ್ರೀ ಮತಿ ಶಾಂತಕುಮಾರಿ ಬಿ, ಶ್ರೀಮತಿ ಲಲಿತಮ್ಮ , ಈರಣ್ಣ , ವೈದ್ಯಾಧಿಕಾರಿಗಳಾದ  ಡಾ. ಮಂಜುನಾಥ್ , ನೇತ್ರ ಸಹಾಯಕರಾದ ಶ್ರೀಮತಿ  ಅಕ್ಷತ, ಉಪಸ್ಥಿತರಿದ್ದರು.