ರಕ್ತಹೀನತೆಗೆ ಮನೆಮದ್ದು

೧. ಅನಾನಸ್ ಹಣ್ಣಿನ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುತ್ತಿದ್ದರೆ, ರಕ್ತವೃದ್ಧಿಯಾಗುತ್ತದೆ.
೨. ಪ್ರತಿನಿತ್ಯ ಕ್ಯಾರೆಟ್ ರಸ ಸೇವನೆಯಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.
೩. ಅಶ್ವಗಂಧದ ಪುಡಿಯನ್ನು ಜೇನುತುಪ್ಪದಲ್ಲಿ ಸೇರಿಸಿ ಸೇವಿಸಿ.
೪. ನುಗ್ಗೆಸೊಪ್ಪು ಹಾಗೂ ನುಗ್ಗೆಹೂವನ್ನು ಬೇಯಿಸಿ ಶೋಧಿಸಿ ಸ್ವಲ್ಪವೇ ಕಲ್ಲುಉಪ್ಪು ಹಾಕಿ ಕುಡಿಯಿರಿ.
೫. ಬಾಯಿಬಸಳೆ ಸೊಪ್ಪಿನ ರಸ ಅಥವಾ ಪಲ್ಯ ದಿನನಿತ್ಯದಲ್ಲಿ ಸೇವಿಸುತ್ತಾ ಬಂದರೆ ೪೫ ದಿನಗಳ ಒಳಗೆ ಒಳ್ಳೆ ರಕ್ತವೃದ್ಧಿಯಾಗುತ್ತದೆ. ಬಸಳೆಯಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ.
೬. ಎಳ್ಳಿನಲ್ಲಿ ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ಎಳ್ಳನ್ನು ಹುರಿದು ಕುಟ್ಟಿಪುಡಿಮಾಡಿ ಅದಕ್ಕೆ ಬೆಲ್ಲ ಸೇರಿಸಿ ಸೇವಿಸಿ. ಬೆಲ್ಲದಲ್ಲಿ ಕೂಡ ಕಬ್ಬಿಣದ ಅಂಶ ಹಾಗೂ ಕ್ಯಾಲ್ಸಿಯಂ ಅಂಶ ಹೇರಳವಾಗಿರುತ್ತದೆ.
೭. ಅಂಜೂರ, ಒಣದ್ರಾಕ್ಷಿ ಹಾಗೂ ಖರ್ಜೂರವನ್ನು ಚೆನ್ನಾಗಿ ತೊಳೆದು ರಾತ್ರಿಯಿಡೀ ಹಾಗೆ ಮುಚ್ಚಿಡಿ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ನಿಧಾನವಾಗಿ ಚೆನ್ನಾಗಿ ಅಗಿದು ತಿನ್ನಬೇಕು. ೨೧ ದಿನ ತಿಂದರೆ ಸಾಕಷ್ಟು ರಕ್ತವೃದ್ಧಿಯಾಗುತ್ತದೆ.
೮. ಬೆಟ್ಟದ ನೆಲ್ಲಿಕಾಯಿ ರಸವನ್ನು ತಯಾರಿಸಿ ಜೇನುತುಪ್ಪದೊಡನೆ ಸೇರಿಸಿ ಕುಡಿಯುತ್ತಾ ಬಂದರೆ ರಕ್ತವೃದ್ಧಿ ಹಾಗೂ ರಕ್ತಶುದ್ಧಿಯಾಗುತ್ತದೆ.
೯. ವಿಟಮಿನ್ ಸಿ ಕಬ್ಬಿಣದ ಅಂಶವನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ. ಹಾಗಾಗಿ ವಿಟಮಿನ್ ಸಿ ಹೆಚ್ಚಾಗಿರುವ ಕಿತ್ತಳೆ ಹಣ್ಣು, ಮೂಸಂಬಿ, ನಿಂಬೆಹಣ್ಣು ಈ ರೀತಿಯ ಹಣ್ಣುಗಳನ್ನು ಸೇವಿಸಿ ಹಾಗೂ ಮೊಳಕೆ ಕಾಳುಗಳಲ್ಲಿ ವಿಟಮಿನ್ ಸಿ ಹೆಚ್ಚಾಗಿ ಇರುತ್ತದೆ. ಸಸ್ಯಾಹಾರಿಗಳಿಗೆ ಬಿ ೧೨ ಇದರಿಂದಲೇ ಸಿಕ್ಕುವುದು.
೧೦. ಜೇನುತುಪ್ಪ ಅತ್ಯಂತ ಉತ್ಕೃಷ್ಟವಾದ ಆಹಾರ ಅಂದರೆ ಜೇನು.
೧೧. ಪಾಲಕ್ ಸೊಪ್ಪಿನ ರಸವನ್ನು ಜೇನುತುಪ್ಪದ ಜೊತೆ ಸೇರಿಸಿ ಸೇವಿಸಿ.
೧೨. ಪಪ್ಪಾಯಿ ರಸವನ್ನು ಜೇನುತುಪ್ಪದ ಜೊತೆ ಸೇವಿಸುತ್ತಾ ಬಂದರೆ ರಕ್ತವೃದ್ಧಿಯಾಗುತ್ತದೆ, ಚರ್ಮಕ್ಕೆ ಒಳ್ಳೆಯ ಸೊಗಸು ಕೊಡುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧