ರಕ್ತದಾನ ಶ್ರೇಷ್ಠ ದಾನ ಡಾ. ಚಾರಣಿ

ಕೋಲಾರ, ಜೂ.೧೬- ನಾವು ಜೀವಂತವಿರುವಾಗ ಪದೇ ಪದೇ ನಮ್ಮ ದೇಹದಿಂದ ಕೊಡಬಹುದಾದ ಏಕೈಕ ದಾನ ರಕ್ತದಾನ ಇದನ್ನು ಎಷ್ಟೆ ವಿಜ್ಞಾನ ಮುಂದುವರೆದರು ಸಹ ಕೃತಕವಾಗಿ ಉತ್ಪತ್ತಿ ಮಾಡಲು ಸಾಧ್ಯವಾಗುವುದಿಲ್ಲವೆಂದು ಜಿಲ್ಲಾ ಸವೇಶಕ್ಷಣಾಧಿಕಾರಿ ಡಾ. ಚಾರಣಿ ತಿಳಿಸಿದರು.
ನಗರದ ಸರ್ಕಾರಿ ಶ್ರೀ ನರಸಿಂಹರಾಜು ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ವಿಶ್ವ ರಕ್ತದಾನಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಾಮಾನ್ಯವಾಗಿ ರಕ್ತದಾನವನ್ನು ಆರೋಗ್ಯವಂತ ಸಾರ್ವಜನಿಕರು ಸರ್ಕಾರಿ ನೌಕರರು ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಒಂದು ಜೀವವನ್ನ ಉಳಿಸುವ ಕೆಲಸವನ್ನು ಮಾಡಬಹುದು ಎಂದರು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಗೋಪಾಲಕೃಷ್ಟೆಗೌಡ ಮಾತನಾಡುತ್ತಾ ಅನೇಕರಲ್ಲಿ ರಕ್ತದಾನ ಮಾಡುವುದರಿಂದ ತಮ್ಮ ಶಕ್ತಿ ಕುಂದುತ್ತದೆ. ಅನಾರೋಗ್ಯಕ್ಕೆ ತುತ್ತಾಗುತ್ತೀರೆಂದು ತಪ್ಪು ಕಲ್ಪನೆ ಇದ್ದು, ಇದನ್ನು ಹೋಗಲಾಡಿಸುವ ಸಲುವಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಅನೇಕ ಸಂಘ ಸಂಸ್ಥೆಗಳು ರಕ್ತದಾನದ ಬಗ್ಗೆ ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸಿ ಅವರಲ್ಲಿರುವ ಭಯವನ್ನು ಹೋಗಲಾಡಿಸಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗುತ್ತಿದ್ದಾರೆ.
ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಆರ್ ಶ್ರೀನಿವಾಸನ್ ಮಾತನಾಡುತ್ತಾ ಒಮ್ಮೆ ರಕ್ತದಾನ ಮಾಡಿದರೆ ನಾಲ್ಕು ಜನರ ಜೀವ ಉಳಿಯುತ್ತದೆ ಅದರಲ್ಲಿರುವ ಕೆಂಪು ರಕ್ತ ಕಣಗಳು ಬಿಳಿ ರಕ್ತ ಕಣಗಳು ಪಾಸ್ಮ ಮತ್ತು ಕ್ರಾಯ ಕಣಗಳನ್ನು ಬೇರ್ಪಡಿಸಿ ರೋಗಿಗಳ ಅವಶ್ಯಕತೆಗೆ ತಕ್ಕಂತೆ ನೀಡುತ್ತಾರೆ ಎಂದರು.
ಅನೇಕ ಬಾರಿ ರಕ್ತದಾನ ಮಾಡಿದ ನಗರದ ಸಂಪತ್ ಕುಮಾರ್ ಮತ್ತು ರಘುವಂಶಿ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಡಾಕ್ಟರ್ ಚಾರುಣಿ ರವರ ಪತಿ ರಾಘವೇಂದ್ರ (ರಘು ಗಲ್ ಪೇಟೆ) ಸ್ವಯಂ ಪ್ರೇರಣೆಯಿಂದ ಇಂದು ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ನಂದೀಶ್ ಕುಮಾರ್, ನಾಗೇಂದ್ರ ಪ್ರಸಾದ್, ಸೋಮಶೇಖರ್, ವೆಂಕಟಕೃಷ್ಣ, ಸೀನಪ್ಪ, ಸಾಧಿಕ್ ಪಾಷ ಮುಂತಾದವರು ಉಪಸ್ಥಿತರಿದ್ದರು.